ಮೆಟ್ರೋ ಕಾಮಗಾರಿ ವೇಳೆ ಗ್ಯಾಸ್ ಪೈಪ್ ಲೈನ್‍ನಲ್ಲಿ ಅನಿಲ ಸೋರಿಕೆ

ಬೆಂಗಳೂರು, ಅ.29- ಮೆಟ್ರೋ ಕಾಮಗಾರಿ ವೇಳೆ ಡ್ರಿಲ್ಲಿಂಗ್ ಮಾಡುವಾಗ ಗ್ಯಾಸ್ ಪೈಪ್ ಲೈನ್‍ನಲ್ಲಿ ಅನಿಲ ಸೋರಿಕೆಯಾಗಿ ಕೆಲ ಗಂಟೆಗಳ ಕಾಲ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ನಗರದ ಹೊರವಲಯ ಕೆ.ಆರ್.ಪುರಂ ಮಹದೇವಪುರ ಬಳಿಯ ಗರುಡಾಚಾರ್ ಪಾಳ್ಯದಲ್ಲಿಂದು ನಡೆದಿದೆ.

ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಮೆಟ್ರೋ ಕಾಮಗಾರಿಯ ಡ್ರಿಲ್ಲಿಂಗ್ ಮಾಡುವಾಗ ಅಲ್ಲಿದ್ದಂತಹ 70 ಕಿಲೋ ಪೆÇೀರ್ಸ್‍ನ ಗ್ಯಾಸ್ ಪೈಪ್ ಲೈನ್‍ನಲ್ಲಿ ಸೋರಿಕೆ ಉಂಟಾಗಿದ್ದು, ಇದರಿಂದ ಕೆಲ ಗಂಟೆಗಳ ಕಾಲ ಅಲ್ಲಿನ ಸಾರ್ವಜನಿಕರಲ್ಲಿ ಅತಂಕದ ವಾತಾವರಣ ನಿರ್ಮಾಣವಾಗಿತ್ತು. ಐಟಿಪಿಎಲ್ ಪ್ರಮುಖ ರಸ್ತೆಯಲ್ಲಿ ಕೆಲ ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು, ಜೊತೆಗೆ ಸುತ್ತಮುತ್ತ ಮೊಬೈಲ್ ಫೆÇೀನ್ ಬಳಕೆಯನ್ನು ಸಹ ನಿಷೇಧಿಸಲಾಗಿತ್ತು.

ಸಮಸ್ಯೆ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಗ್ಯಾಸ್ ಸೋರಿಕೆ ನಿಲ್ಲಿಸಲು ಹರಸಾಹಸ ಪಡಬೇಕಾಯಿತ್ತು. ನಂತರ ಕೆಲ ಗಂಟೆಗಳ ಬಳಿಕ ಗ್ಯಾಸ್ ಪೈಪ್ ಸೋರಿಕೆ ನಿಲ್ಲಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಸದ್ಯ ಪರಿಸ್ಥಿತಿ ಸಹಜಸ್ಥಿತಿಗೆ ಬಂದಿದ್ದು, ಮೆಟ್ರೋ ಕಾಮಗಾರಿ ಮುಂದುವರಿದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ