ಲೋಕಸಭೆ ಚುನಾವಣೆಯಲ್ಲಿ ಮೋದಿ ಆಡಳಿತಕ್ಕೆ ಜನರ ತಕ್ಕ ಉತ್ತರ: ಮಾಜಿ ವಿದೇಶಾಂಗ ಸಚಿವ ಶಶಿತರೂರ್

ಬೆಂಗಳೂರು, ಅ.28- ಕಳೆದ ನಾಲ್ಕು ವರ್ಷಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಡಳಿತ, ದಬ್ಬಾಳಿಕೆ ಮತ್ತು ದುರಾಡಳಿತಕ್ಕೆ ಉದಾಹರಣೆಯಾಗಿದ್ದು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜನ ಉತ್ತರ ನೀಡುತ್ತಾರೆ ಎಂದು ಕೇಂದ್ರದ ಮಾಜಿ ವಿದೇಶಾಂಗ ಸಚಿವ ಶಶಿತರೂರ್ ಹೇಳಿದರು.

ನಗರದ ಅಶೋಕ ಹೋಟೆಲ್‍ನಲ್ಲಿ ನಡೆಯುತ್ತಿರುವ ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ತಮ್ಮ ಪುಸ್ತಕ ಖಿhe Pಚಿಡಿಚಿಜoxiಛಿಚಿಟ Pಡಿime ಒiಟಿisಣeಡಿ (ವಿರೋಧಾಭಾಸ ಪ್ರಧಾನಮಂತ್ರಿ ) ಪುಸ್ತಕದ ಕುರಿತು ಸುದೀರ್ಘವಾಗಿ ಮಾತನಾಡಿದ ಅವರು, ಪ್ರಧಾನಮಂತ್ರಿಯವರ ಆಡಳಿತ ವೈಖರಿಯನ್ನು ವ್ಯಾಪಕವಾಗಿ ಟೀಕಿಸಿದರು.

ನನ್ನ ಪುಸ್ತಕವನ್ನು ಆರು ಭಾಗವಾಗಿ ವಿಂಗಡಿಸಿದ್ದೇನೆ. ಪ್ರಧಾನಿ ಮೋದಿ ಅವರ ಜೀವನವನ್ನು ಕೃತಿಯಲ್ಲಿ ವಿವರಿಸಲಾಗಿದೆ. ಇದಕ್ಕಾಗಿ ಕೆಲವು ಪುಟಗಳನ್ನು ಇರಿಸಲಾಗಿದೆ. ಮೋದಿ ವಿಮರ್ಶೆಗೆ ನಾಲ್ಕು ಭಾಗಗಳನ್ನು ಬಳಿಸಿದ್ದೇನೆ. ಮೋದಿ ಸರ್ಕರದ ನಿರ್ಧಾರಗಳು, ನೋಟು ಅಮಾನ್ಯೀಕರಣ, ರಫೈಲ್ ಹಗರಣ, ರಾಷ್ಟ್ರಪತಿ ಆಯ್ಕೆ ಸೇರಿದಂತೆ ಹಲವಾರು ವಿಚಾರಗಳಿವೆ. ಮಾಜಿ ಪ್ರಧಾನಿ ಡಾ.ಮನಮೋಹನ್‍ಸಿಂಗ್ ಇತ್ತೀಚೆಗೆ ಈ ಕೃತಿಯನ್ನು ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದರು.

ಕೃತಿ ರಚಿಸುವ ಸಂದರ್ಭದಲ್ಲಿ ಸಾಕಷ್ಟು ಸವಾಲುಗಳು ಎದುರಾದವು. ಮೂಲಭೂತ ವಿಚಾರಗಳ ಗೊಂದಲ ಕಾಡಿತ್ತು. ನನ್ನ ಕೃತಿಯ ಹಿನ್ನೆಲೆಯಲ್ಲಿ ಲಕ್ಷಗಟ್ಟಲೆ ಆರ್‍ಟಿಐ ಅರ್ಜಿ ಸಲ್ಲಿಕೆಯಾದವು. ಆದರೆ, ಅರ್ಜಿಗಳ ವಿಚಾರಣೆಯಾಗದೆ ಬಾಕಿ ಉಳಿದಿವೆ. ಮೋದಿ ಅವರ ಜ್ಞಾನ, ನಾಲ್ಕು ವರ್ಷಗಳ ಅವರ ಅಧಿಕಾರಾವಧಿ, ವಿದೇಶ ಪ್ರವಾಸ ಸೇರಿದಂತೆ ಹಲವು ವಿಚಾರಗಳನ್ನು ಪುಸ್ತಕದಲ್ಲಿ ವಿಮರ್ಶೆಗೊಳಪಡಿಸಲಾಗಿದೆ ಎಂದು ತಿಳಿಸಿದರು.

ಮೋದಿ ಅವರ ಆಡಳಿತದಲ್ಲಿ ನೆರೆಯ ರಾಷ್ಟ್ರಗಳ ಸಂಬಂಧ ಹಾಳಾಗಿದೆ. ಪಾಕಿಸ್ತಾನ, ಶ್ರೀಲಂಕಾ, ಭೂತಾನ್ ಜತೆಗಿನ ಭಾರತದ ಸಂಬಂಧ ಹಳಸಿದೆ. ಹಲವಾರು ವಾಣಿಜ್ಯ ಒಪ್ಪಂದಗಳು ಮುರಿದು ಬಿದ್ದಿವೆ. ಇದಕ್ಕೆ ಸಂಬಂಧಪಟ್ಟಂತೆ ಹಲವು ವಿಚಾರಗಳು ನನ್ನ ಕೃತಿಯಲ್ಲಿವೆ. ಪಾಕಿಸ್ತಾನದಲ್ಲಿ ಹಲವಾರು ದುರ್ಘಟನೆಗಳು ನಡೆದಾಗ ಭಾರತ ಅದಕ್ಕೆ ವಿಷಾದ ವ್ಯಕ್ತಪಡಿಸುವ ಕನಿಷ್ಠ ಸೌಜನ್ಯವನ್ನೂ ತೋರಲಿಲ್ಲ. ಈ ಹಿಂದೆಲ್ಲಾ ಈ ರೀತಿಯ ಸಾಂತ್ವನಗಳಲ್ಲಿ ಸಂಬಂಧ ಸುಧಾರಣೆಯಾಗುತ್ತಿತ್ತು. ಆದರೆ, ಕೇಂದ್ರ ಸರ್ಕಾರ ತನ್ನ ಬುದ್ದಿಗೇಡಿ ಕ್ರಮಗಳಿಂದಾಗಿ ಪಾಕಿಸ್ತಾನದ ಜತೆಗಿನ ಸಂಬಂಧವನ್ನು ಕಡಿದುಕೊಂಡಿವೆ. ಹಲವಾರು ಒಪ್ಪಂದಗಳು ಮುರಿದುಬಿದ್ದಿವೆ ಎಂದು ಹೇಳಿದರು.

ಪುಸ್ತಕದಲ್ಲಿ ಸಾಹಿತ್ಯಕ್ಕಿಂತ ತತ್ವವನ್ನು ಬೋಧಿಸುವ ಬಗ್ಗೆ ಹೆಚ್ಚು ಆಸಕ್ತಿ ತೋರಿಸಿದ್ದೇನೆ. ದೇಶದ ಸ್ಥಿತಿಯನ್ನೂ ವಿಮರ್ಶೆ ಮಾಡಿದ್ದೇನೆ. ಮೋದಿತ್ವ ಮತ್ತು ಹಿಂದುತ್ವದ ಮಿಶ್ರಣವಿದೆ. ಮೋದಿಯವರ ಕಾರ್ಯನಿರ್ವಹಣೆಯ ಬಗ್ಗೆಯೂ ವಿವರ ನೀಡಿದ್ದೇನೆ. ಮೋದಿ ಅವರಲ್ಲಿ ಸಾಮಾಜಿಕ ಕಳಕಳಿ ಇಲ್ಲ. ಆರ್‍ಎಸ್‍ಎಸ್ ಸಿದ್ದಾಂತಗಳ ಪ್ರತಿಪಾದಕನ ಇನ್ನೊಂದು ರೂಪ ಅನಾವರಣವಾಗಿದೆ. ದೇಶದಲ್ಲಿ ಏಕ ವ್ಯಕ್ತಿ ಆಡಳಿತ ನಡೆಯುತ್ತಿದೆ. ಇದು ಸರ್ವಾಧಿಕಾರದ ಪ್ರತಿರೂಪ. ಹಾಗಾಗಿಯೇ ಸಮ್ಮಿಶ್ರ ಸರ್ಕಾರಗಳ ಉಪಸ್ಥಿತಿ ಹೆಚ್ಚು ಪ್ರಸ್ತುತ ಎನ್ನಿಸುತ್ತಿದೆ. ಇಲ್ಲವಾದರೆ ಈ ರೀತಿಯ ಸರ್ವಾಧಿಕಾರಿ ಧೋರಣೆಯ ವ್ಯಕ್ತಿಗಳು ಮನಸ್ಸಿಗೆ ಬಂದಂತಹ ಆಡಳಿತ ನೀಡುವ ಆತಂಕವಿದೆ ಎಂದು ಅವರು ವಿಶ್ಲೇಷಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ