ಕೆಎಸ್‍ಆರ್‍ಟಿಸಿಗೆ ಕೇಂದ್ರ ಸರ್ಕಾರದ ಉತ್ಕøಷ್ಟ ಪ್ರಶಸ್ತಿ

ಬೆಂಗಳೂರು, ಅ.28- ಅತ್ಯುತ್ತಮ ನಗರ ಬಸ್ ಸೇವೆಗಾಗಿ ಕೆಎಸ್‍ಆರ್‍ಟಿಸಿ ಕೇಂದ್ರ ಸರ್ಕಾರದ ಉತ್ಕøಷ್ಟ ಪ್ರಶಸ್ತಿಗೆ ಆಯ್ಕೆಯಾಗಿದೆ.
ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಇಲಾಖೆ ಪ್ರತಿವರ್ಷ ನಗರ ಸಾರಿಗೆ ವಿಭಾಗದಲ್ಲಿ ಈ ಪ್ರಶಸ್ತಿ ನೀಡುತ್ತಿದ್ದು, ಈ ಸಾಲಿನಲ್ಲಿ ಕೆಎಸ್‍ಆರ್‍ಟಿಸಿ ಯನ್ನು ಆಯ್ಕೆ ಮಾಡಿಕೊಂಡಿದೆ.

ಕೆಎಸ್ ಆರ್‍ಟಿಸಿಯು ಒಟ್ಟು 16 ಸಣ್ಣ ಹಾಗೂ ಮಧ್ಯಮ ನಗರ, ಪಟ್ಟಣಗಳಲ್ಲಿ ಪ್ರತಿದಿನ 786 ಬಸ್‍ಗಳನ್ನು 11075 ಟ್ರಿಪ್‍ಗಳನ್ನು ಕಾರ್ಯಾಚರಣೆ ಮಾಡುತ್ತಿದ್ದು, ಇದರಿಂದ 5.10 ಲಕ್ಷ ಪ್ರಯಾಣಿಕರು ಪ್ರತಿದಿನ ಸಂಚರಿಸುತ್ತಿದ್ದಾರೆ.
ನವೆಂಬರ್ 4ರಂದು ನಾಗ್ಪುರದಲ್ಲಿ ನಡೆಯುವ 11ನೆ ನಗರ ಚಲನಶೀಲನೆ ಇಂಡಿಯಾ ಸಮಾವೇಶ ಮತ್ತು ವಸ್ತುಪ್ರದರ್ಶನದ ಸಮಾರೋಪ ಸಮಾರಂಭದಲ್ಲಿ ಮಹಾರಾಷ್ಟ್ರದ ಇಂಧನ ಖಾತೆ ಸಚಿವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ