ಬೆಂಗಳೂರು, ಅ.27- ಬೆಳಗಾವಿಯಲ್ಲಿ ನವೆಂಬರ್ ಒಂದರಂದು ಎಂಇಎಸ್ನವರು ಕರಾಳದಿನವನ್ನು ಆಚರಿಸಲು ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ, ಪೆÇಲೀಸ್ ಇಲಾಖೆ ಅನುಮತಿ ನೀಡಬಾರದೆಂದು ಕರ್ನಾಟಕ ಪರ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿಂದು ಒಕ್ಕೂಟದ ರಾಜ್ಯಾಧ್ಯಕ್ಷ ಜೆ.ಪಿ.ವಿಶ್ವನಾಥ್ ಮಾತನಾಡಿ, ಎಂಇಎಸ್ನವರಿಗೆ ಕರಾಳದಿನ ಆಚರಿಸಲು ಅನುಮತಿ ನೀಡಬಾರದು ಹಾಗೂ ಎಂಇಎಸ್ಅನ್ನು ರಾಜ್ಯದಲ್ಲಿ ಸಂಪೂರ್ಣವಾಗಿ ನಿಷೇಧ ಮಾಡಬೇಕು ಎಂದು ಒತ್ತಾಯಿಸಿದರು.
ಎಂಇಎಸ್ನವರಿಗೆ ಕರಾಳದಿನ ಆಚರಿಸಲು ಒಪ್ಪಿಗೆ ಕೊಟ್ಟರೆ ಹಾಗೂ ಎಂಇಎಸ್ ನಿಷೇಧಿಸದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ನವೆಂಬರ್ 1ರಂದು ಹುಬ್ಬಳ್ಳಿಯಿಂದ ಬೆಳಗಾವಿವರೆಗೆ ರ್ಯಾಲಿ ನಡೆಸುತ್ತೇವೆ. ನಂತರ ಬೆಳಗಾವಿಯಲ್ಲಿ ವಿಜಯೋತ್ಸವ ಆಚರಿಸುತ್ತೇವೆ ಎಂದು ಹೇಳಿದರು.
ಒಂದು ವೇಳೆ 1ನೆ ತಾರೀಖಿನಂದೇ ಎಂಇಎಸ್ನವರು ಕರಾಳ ದಿನವನ್ನು ಆಚರಿಸಿದ್ದೇ ಆದರೆ ಅವರಿಗೆ ಮಸಿ ಬಳಿಯಲು ಸಿದ್ದರಾಗಿದ್ದೇವೆ ಎಂದು ಅವರು ಎಚ್ಚರಿಕೆ ನೀಡಿದರು.
ಒಕ್ಕೂಟದ ಸದಸ್ಯರಾದ ರಾಜೇಗೌಡ, ಗೋವಿಂದೇಗೌಡ, ಸುರೇಶ್ಗೌಡ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.