ಸಿಬಿಐ ನಿರ್ದೇಶಕ ವರ್ಮಾಗೆ ಕಡ್ಡಾಯ ರಜೆ ಪ್ರಕರಣ: ನಿವೃತ್ತ ಜಡ್ಜ್​ ಪಟ್ನಾಯಕ್​ ಉಸ್ತುವಾರಿಯಲ್ಲಿ ಸಿವಿಸಿ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ: ಸಿಬಿಐ ಮುಖ್ಯಸ್ಥ ಅಲೋಕ್​ ವರ್ಮಾ ಅವರ ಮೇಲಿನ ಆರೋಪಗಳು ಕುರಿತು ನಿವೃತ್ತ ಜಡ್ಜ್ ಎ.ಕೆ. ಪಟ್ನಾಯಕ್ ಉಸ್ತುವಾರಿಯಲ್ಲಿ ಸಿವಿಸಿ ತನಿಖೆಗೆ ಸುಪ್ರೀಂ ಕೋರ್ಟ್​ ಆದೇಶಿಸಿದೆ.

ಇದೇ ವೇಳೆ 2 ವಾರಗಳೊಳಗಾಗಿ ವಿಚಾರಣೆ ಮುಗಿಯಬೇಕು. ಇಂದಿನಿಂದಲೇ  ತನಿಖೆ ಆರಂಭವಾಗಬೇಕು ಎಂದು ಚೀಫ್​ ಜಸ್ಟೀಸ್ ರಂಜನ್​ ಗೊಗೊಯ್​ ನೇತೃತ್ವದ ಪೀಠ ಆದೇಶ ನೀಡಿದ್ದಾರೆ.
ಇದೇ ವೇಳೆ,  ಅಲೋಕ್​ ವರ್ಮಾ ಅವರನ್ನು ರಾತ್ರೋರಾತ್ರಿ ಸಿಬಿಐ ನಿರ್ದೇಶಕರಿಗೆ ಕಡ್ಡಾಯ ರಜೆ ನೀಡಿರುವ ಬಗ್ಗೆ ಕೇಂದ್ರ ಸರ್ಕಾರ, ಸಿಬಿಐ ಸ್ಪೆಷಲ್ ಡೈರೆಕ್ಟರ್​ ಅಸ್ತಾನ ಮತ್ತು ಸಿವಿಸಿಗೆ ಸುಪ್ರೀಂಕೋರ್ಟ್​ ನೋಟಿಸ್​ ಜಾರಿಗೊಳಿಸಿದೆ.
ಸಿವಿಸಿ 10 ದಿನಗಳ ಒಳಗಾಗಿ ತನಿಖೆ ನಡೆಸಬೇಕು. ಸುಪ್ರೀಂಕೋರ್ಟ್​ನ ನಿವೃತ್ತ ಜಡ್ಜ್​ ಎ.ಕೆ. ಪಟ್ನಾಯಕ್ ಅವರ ಉಸ್ತುವಾರಿಯಲ್ಲೇ​​ ಈ ಕೆಲಸ ಆಗಬೇಕು.  ಹಂಗಾಮಿ ಸಿಬಿಐ ನಿರ್ದೇಶಕ  ಎಂ. ನಾಗೇಶ್ವರ್​ ರಾವ್​ ದೈನಂದಿನ ಚಟುವಟಿಕೆಗಳ ಬಗ್ಗೆ ಮಾತ್ರ ಕಾರ್ಯನಿರ್ವಹಿಸಬೇಕು.  ತನಿಖಾ ಅಧಿಕಾರಿಗಳ ಬದಲಾವಣೆಯನ್ನು   ನವೆಂಬರ್​ 12 ರ ಒಳಗೆ ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂಕೊರ್ಟ್​ಗೆ ಸಲ್ಲಿಸಬೇಕು ಎಂದು ಸಿವಿಸಿಗೆ ನಿರ್ದೇಶನ ನೀಡಿದೆ.
ಇದೇ ವೇಳೆ ಮುಂದಿನ ವಿಚಾರಣೆಯನ್ನು ನವೆಂಬರ್ 12ಕ್ಕೆ ಮುಂದೂಡಿದೆ.
ಇದಕ್ಕೂ ಮುನ್ನ ವಿಚಾರಣೆ ಆರಂಭಿಸಿದ ಸಿಜೆಐ ರಂಜನ್ ಗೊಗೊಯ್​ ನೇತೃತ್ವದ ತ್ರೀಸದಸ್ಯ ಪೀಠ,   ನಾವು ಪರಿಶೀಲನೆ ನಡೆಸುತ್ತಿದ್ದೇವೆ.  ನಾವೀಗ ಯಾವ ರೀತಿಯ ಮಧ್ಯಂತರ ಆದೇಶ ಹೊರಡಿಸಬೇಕು ಎಂಬ ಬಗ್ಗೆ ಚಿಂತಿಸುತ್ತಿದ್ದೇವೆ  ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು.
ಕಾನೂನಿನ ಪ್ರಕಾರ ಸಿವಿಸಿ ಮತ್ತು ಕೇಂದ್ರ ಸರ್ಕಾರಕ್ಕೆ ಆದೇಶ ಹೊರಡಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು  ಸಿಬಿಐ ಮುಖ್ಯಸ್ಥ ಅಲೋಕ್​ ವರ್ಮಾ ಅವರ ಪರ ವಾದ ಮಂಡಿಸಿದ ಹಿರಿಯ ವಕೀಲ ಪಾಲಿ ನಾರಿಮನ್​ ಪ್ರತಿಪಾದಿಸಿದರು.   ಮತ್ತೊಂದು ಕಡೆ ಮಾಜಿ ಅಟಾರ್ನಿ ಜನರಲ್ ಹಾಗೂ ಹಿರಿಯ ವಕೀಲ ಮುಕುಲ್​ ರೋಹಟಗಿ  ಇನ್ನೊಬ್ಬ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್​ ಅಸ್ತಾನ ಪರ ವಕಾಲತ್ತು ವಹಿಸಿದ್ದರು.

ನವೆಂಬರ್​ 12ರವರೆಗೂ ಈಗಿನ ನಿರ್ದೇಶಕ ನಾಗೇಶ್ವರ್​ ರಾವ್​ ಅವರು ಯಾವುದೇ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳುವಂತಿಲ್ಲ ಎಂದೂ ಸುಪ್ರೀಂ ಸೂಚನೆ ನೀಡಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ