ಸ್ತನದ ಕ್ಯಾನ್ಸರ್- ಚಿಕಿತ್ಸೆ ನಂತರ

ಅಮೇರಿಕನ್ ಕ್ಯಾನ್ಸರ್ ಸೋಸೈಟಿ, ಅಕ್ಟೋಬರ್ ತಿಂಗಳನ್ನು ಬ್ರೆಸ್ಟ್ ಕ್ಯಾನ್ಸರ್ ಅಥವ ಸ್ತನದ ಟ್ಯೂಮರ್(ಅಬುರ್ದ)ದ ಬಗ್ಗೆ ಜನಸಾಮಾನ್ಯರಲ್ಲಿ ಒಂದು ಅರಿವು ಮೂಡಿಸಲು ಈ ಮಾಸವನ್ನು ಸ್ತನದ ಕ್ಯಾನ್ಸರ್ನ ಬಗ್ಗೆ ಜಾಗೃತಿಕರಣದ ತಿಂಗಳೆಂದು ಘೋಷಿಸಿದೆ. ಜನರಲ್ಲಿ ಸ್ತನ ಕ್ಯಾನ್ಸರನ ಬಗ್ಗೆ ಇರುವ ತಿಳುವಳಿಕೆ ಹೆಚ್ಚಿಸಿ, ಅದರ ಮುಂಚಿತ ಸ್ಕ್ರೀನಿಂಗ್, ಸಂಬಂದ ಪಟ್ಟ ರಕ್ತ ಹಾಗು ಬಯಾಪ್ಸಿಗಳ ತನಿಕೆಗಳ ಬಗ್ಗೆ ತಿಳಿಹೆಳುವ ಸಲುವಾಗಿ ಅಕ್ಟೋಬರ್ ತಿಂಗಳನ್ನು ಸ್ತನದ ಕ್ಯಾನ್ಸರ್ನ ಬಗ್ಗೆ ಜಾಗೃತಿಕರಣದ ತಿಂಗಳೆಂದು ಘೋಷಿಸಿದೆ.

ಸ್ತನದ ಕ್ಯಾನ್ಸರ್ ಶುರುವಾಗುವುದು ಸ್ತನದ ಅಂಗಾಂಶಗಳಲ್ಲಿ.

ಇದರಲ್ಲಿ ಮುಖ್ಯವಾಗಿ 2 ವಿಧ ಇದೆ-
1. ಡಕ್ಟಲ್ ಕ್ಯಾನ್ಸರ್- ಸ್ತನದ ಡಕ್ಟ್ ಅಥವ ಸ್ತನದನಾಳ ಅಥವ ಹಾಲು ಬರುವ ಗ್ರಂಥಿಗಳಲ್ಲಿ ಕಾಣಿಸಿಕೊಳ್ಳುತ್ತದೆ.
2. ಲೋಬಿಲಾರ್ ಕ್ಯಾನ್ಸರ್- ಸ್ತನದ ಖಂಡಬಲೆಯಲ್ಲಿ ಕಾಣಿಸಿಕೂಳ್ಳುವ ಕ್ಯಾನ್ಸರ್.

ಸಾಂಪ್ರದಾಯಿಕವಾಗಿ ಸ್ತನದ ಕ್ಯಾನ್ಸರ್ಗೆ ಚಿಕಿತ್ಸೆ ಎಂದರೆ ರೇಡೀಏಶನ್, ಕೀಮೋಥೆರಪಿ, ಹಾರ್ಮೋನಲ್ ಥೆರಪಿ ಹಾಗು ಶಸ್ತ್ರ ಚಿಕಿತ್ಸೆ. ಇದರಲ್ಲಿ ಯಾವುದೆ ಚಿಕಿತ್ಸೆಯನ್ನು ರೋಗಿ ಪಡೆದುಕೊಂಡರೂ, ರೋಗಿಯ ಶರೀರದ ಮೇಲೆ ಅದು ತನ್ನದೆ ಆದ ಅಡ್ಡ ಪರಿಣಾಮವನ್ನು ಬೀರುವುದು ಸಹಜ. ಅದೇ ಆಯುರ್ವೇಧದ ತಙ್ಞರ ಬಳಿ ರೋಗಿಯನ್ನು ಕರೆತಂದು ಪರೀಕ್ಷಿಸಿ, ಆಯುರ್ವೇಧದ ಔಷದಿಯನ್ನು ಕೊಡಿಸಿದಲ್ಲಿ, ಈ ಮೇಲೆ ತಿಳಿಸಿರುವ ಚಿಕಿತ್ಸೆಗಳಿಂದ ಉಂಟಾಗುವ ಅಡ್ಡಪರಿಣಾಮವನ್ನು ಸಾಕಷ್ಟು ಕಡಿಮೆಮಾಡಬಹುದು. ಮೇಲೆತಿಳಿಸಿರುವ ಚಿಕಿತ್ಸೆಗಳು ಸ್ತನದ ಕ್ಯಾನ್ಸರನಿಂದ ಬಳಲುತ್ತಿರುವ ರೋಗಿಗಳಿಗೆ ಅತ್ಯಾವಶ್ಯಕ ಹಾಗೆ ಅದರ ಜೋತೆ ಆಯುರ್ವೇಧದ ಔಷದಿಯನ್ನು ಸೇವಿಸುವುದರಿಂದ ರೋಗಿಯು ಶೀರ್ಘವಾಗಿ ಗುಣಮುಖವಾಗಲು ಸಹಾಯಕಕಾರಿ. ಆಯುರ್ವೇಧದ ಔಷದಗಳು ಸಹ-ಚಿಕಿತ್ಸೆಯಾಗಿ ರೋಗಿಯನ್ನು ಗುಣಮುಖವಾಗಿಸುತ್ತದೆ.

ಆಯುರ್ವೇಧದ ಪ್ರಕಾರ ಸ್ತನ ಕ್ಯಾನ್ಸರ್ ಸಂಬವಿಸಲು ಕಾರಣವೆಂದರೆ, ಯಾವಾಗ ತ್ರಿದೋಷಗಳಲ್ಲಿ ವ್ಯತ್ಯಾಸವಾಗಿ, ಕಫವು ಹೆಚ್ಚಾಗುತ್ತದೆ ಹಾಗು ಧಾತ್ವಾಗ್ನಿ ಕಡಿಮೆಯಾಗುತ್ತದೆಯೋ ಆಗ, ಆ ವೃದ್ಧಿಯಾಗಿರುವ ಕಫ ಒಂದೇ ಜಾಗದಲ್ಲಿ ಶೇಖರಗೊಂಡು ಸಿಸ್ಟ್ ಅಥವ ಟ್ಯೂಮರ್(ಅಬುರ್ದ)ಆಗಿ ಮಾರ್ಪಾಟಾಗುತ್ತದೆ.

ಸ್ತನ ಕ್ಯಾನ್ಸಗೆ ಮೊಟ್ಟಮೊದಲು ಅನುಸರಿಸಬೇಕಾದ ಚಿಕಿತ್ಸೆ ಎಂದರೆ ಶಸ್ತ್ರ ಚಿಕಿತ್ಸೆ. ನಂತರ ಅದರಿಂದ ಗುಣಮುಖವಾಗಲು ಹಾಗು ವ್ಯಾಧಿಕ್ಷಮತ್ವವನ್ನು ವೃದ್ಧಿಸಿ ಪುನಃ ಶರೀರವನ್ನು ಕ್ಯಾನ್ಸರ್ ಅಂಶ ಬಾದಿಸದಹಾಗೆ ತಡೆಗಟ್ಟಲು ಹಲವಾರು ಆಯುರ್ವೇಧದ ಔಷದಿಗಳಿವೆ. ಕೆಲವು ಆಯುರ್ವೇಧದ ಔಷದಗಳನ್ನು ಆಯುರ್ವೇಧದ ತಙ್ಞರ ಬಳಿಯೇ ತಪಾಸನೆ ಮಾಡಿಸಿ ನಂತರ ಅವರ ಆದೇಶಾನುಸಾರ ಪಡೆದುಕೂಳ್ಳುವುದು.

ಕೀಮೋಥೆರಪಿ ಹಾಗು ರೇಡೀಏಶನ್ ಥೆರಪಿಯ ನಂತರ ಮನೆಯಲ್ಲಿಯೇ ಸುಲಭವಾಗಿ ತಯಾರಿಸಿಕೊಳ್ಳಬಹುದಾದ ಕೆಲವೂಂದು ಮನೆಮದಮದ್ದು ಈ ಕೆಳಗಿನಂತಿದೆ-
10 ಗ್ರಾಮ್ ಅಶ್ವಗಂಧ ಚುರ್ಣವನ್ನು 250 ಎಮ್.ಎಲ್ ಹಾಲಿನಲ್ಲಿ ಬೆರಸಿ, ರಾತ್ರಿ ಮಲಗುವ ಮೊದಲು ಸೇವಿಸುವುದರಿಂದ, ಕೀಮೋಥೆರಪಿ ಹಾಗು ರೇಡಿಏಶನ್ನಿಂದಾಗಿ ದೇಹ ಹಾಗು ಮನಸ್ಸಿನ ಮೇಲುಂಟಾಗಿರುವ ಒತ್ತಡ ಕಡಿಮೆಯಾಗುತ್ತದೆ.

ಕುರ್ಕುಮಾ ಲಾಂಗ ಅಥವ ಅರಿಶಿನ- 5 ಗ್ರಾಮ್ ಅರಿಶಿನದ ಪುಡಿಯನ್ನು 1 ಚಮಚ ಜೇನುತುಪ್ಪದಲ್ಲಿ ಬೆರಸಿ ಸೇವಿಸುವುದರಿಂದ ರೇಡೀಏಶನ್ನಿಂದ ದೇಹದಲ್ಲಿ ಹೆಚ್ಚಾಗಿರುವ ಫ್ರೀ ರ್ಯಾಡಿಕಲ್ಸ್ಗಳು ಕಡಿಮೆಮಾಡಿಸುತ್ತದೆ.

50 ಗ್ರಾಮ್ ಶುಂಠಿ+ 50 ಗ್ರಾಮ್ ಅರಿಶಿನದಪುಡಿ+ 50 ಗ್ರಾಮ್ ಹರೀತಕಿಯ ಪುಡಿಯನ್ನು ಮಿಶ್ರಣಮಾಡಿ, ಒಂದು ಜಾಡಿಯಲ್ಲಿಟ್ಟು, ಬೆಳಗೆ ಹಾಗು ರಾತ್ರಿ ಆಹಾರ ಸೇವಿಸುವ 10 ನಿಮಿಷ ಮೊದಲು 5 ಗ್ರಾಮ್ ಮ್ರಿಶ್ರಣವನ್ನ 250 ಎಮ್.ಎಲ್ ನೀರಿನಲ್ಲಿ ಸೇವಿಸಬೇಕು. ಇದರಿಂದ ಕ್ಯಾನ್ಸರ್ ಉಂಟುಮಾಡುವ ಕೋಶಗಳನ್ನು ಶರೀರದ ಬೇರೆ ಜಾಗದಲ್ಲಿ ಹರಡದ ಹಾಗೆ ಕಾಪಾಡಿಕೂಳ್ಳುತ್ತದೆ.

10 ಗ್ರಾಮ್ ಮೆಂಥ್ಯೆ ಪುಡಿಯನ್ನು 250 ಎಮ್.ಎಲ್ ಬಿಸಿ ನೀರಿನಲ್ಲಿ ಬೆರಸಿ, ಬೆಳಗೆ ಖಾಲಿ ಹೂಟ್ಟೆಯಲ್ಲಿ ಸೇವಿಸುವುದರಿಂದ ರಕ್ತದ ಗ್ಲೂಕೋಸ್ ಕಡಿಮೆಮಾಡಿಸಿ, ಕ್ಯಾನ್ಸರ್ ಜೀವಕೋಶಗಳು ಹರಡುವ ಸಂಬವವನ್ನು ಸಹ ಕಡಿಮೆಗೂಳ್ಳಿಸುತ್ತದೆ.

10 ಎಮ್.ಎಲ್ ತುಳಸಿ ರಸವನ್ನು ಬೆಳಗೆ ಖಾಲಿ ಹೂಟ್ಟೆಯಲ್ಲಿ ಸೇವಿಸಬೇಕು, ತುಳಸಿಯ ರಸದಲ್ಲಿ ಫೈಟೋಕ್ಯಮಿಕಲ್ಸ್ಗಳು ಹೆಚ್ಚಿದ್ದು, ಕ್ಯಾನ್ಸರ್ ಜೀವಕೋಶಗಳನ್ನು ನಾಶಮಾಡುತ್ತದೆ.

ಸ್ತನ ಕ್ಯಾನ್ಸರ್ ಚಿಕಿತ್ಸೆ ಪಡೆದ ನಂತರ ಮಾಡಬೇಕಾದ ಯೋಗಾಸನ-

ಗೋಮುಖಾಸನ
ಭುಜಂಗಾಸನ
ವೀರಭದ್ರಾಸನ ಪ್ರಕಾರ 1 ಹಾಗು 3

ಸ್ತನ ಕ್ಯಾನ್ಸರ್ ಚಿಕಿತ್ಸೆ ಪಡೆದ ನಂತರ ಮಾಡಬೇಕಾದ ಪ್ರಣಾಯಾಮ-

ಭಾಸ್ತ್ರಿಕ ಪ್ರಣಾಯಾಮ
ನಾಡಿ ಶೋಧನ ಪ್ರಣಾಯಾಮ

ಲೇಖಕರು
ಡಾ|| ಸಿಂಧು ಪ್ರಶಾಂತ್
ಬಿ.ಎ.ಎಮ್.ಎಸ್, ಎಮ್.ಡಿ(ಆಲ್ಟರ್ ನೇಟಿವ್ ಮೆಡಿಸನ್), ಎಮ್.ಎಸ್ಸಿ(ಯೋಗ)
ದೂರವಾಣಿ- 9743857575

http://www.yogaforpregnant.com/

ಆಯುರ್ವೇಧದ ಹಾಗು ಯೋಗದ ಕ್ಷೇತ್ರದಲ್ಲಿ ಕಳೆದ 9 ವರ್ಷಗಳಿಂದ ಸಾಧನೆ ಮಾಡುತ್ತಿರುವ ಡಾ. ಸಿಂಧು ಪ್ರಶಾಂತರವರು ಹೆಸರಾಂತ ಆಯುರ್ವೇಧದ ತಙ್ಞೆ. ಕ್ರಾನಿಕ್ ಡಿಜ್ವೀಸ್(ಧೀರ್ಘಕಾಲದ ಕಾಯಿಲೆ), ಪ್ರಿವೆಂಟಿವ್ ಕೇರ್( ರೋಗ ನಿವಾರಣೆ ಹಾಗು ರೋಗಿಯ ಆರೈಕೆ), ಆಯುರ್ವೇಧದ ಪಥ್ಯಾ/ಅಪಥ್ಯಾ, ಒತ್ತಡ ನಿರ್ವಹಣೆ, ಲೈಫ್ ಸ್ಟೈಲ್ ಮ್ಯಾನೆಜ್ಮೆಂಟ್ಗಳ ಬಗ್ಗೆ ವಿಸ್ತಾರವಾದ ಅನುಭವವಿದ್ದು, ಹಲವಾರು ಅಸ್ವಸ್ಥರನ್ನು ಗುಣಮುಖವಾಗಿಸಿದ್ದಾರೆ ಹಾಗು ಗರ್ಭಿಣಿಯರ ಯೋಗದ ಬಗ್ಗೆ ವ್ಯಾಪಕ ಅಧ್ಯಯನ ಮಾಡಿ ಅತಿ ಶೀರ್ಘದಲ್ಲಿಯೇ ಅದರ ಮೇಳೆ ಬರೆದಿರುವ ಪುಸ್ತಕವನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಡಾ|| ಸಿಂಧು ಅವರು ಗರ್ಭಿಣಿಯರೆಗೆ ಯೋಗದ ಮಹತ್ವ ಹಾಗು ಹೇಗೆ ಯೋಗವನ್ನು ಮಾಡಬೇಕೆಂದು ತರಬೇತಿಯನ್ನು ಸ್ಕೈಪ್ ಮುಕಾ0ತರ ಹಲವಾರು ಸ್ತ್ರೀಯರಿಗೆ ಹೇಳಿಕೂಡುತ್ತಿದ್ದಾರೆ. ಅತಿ ಶೀಘ್ರದಲ್ಲಿ ಗರ್ಭಿಣಿಯರಿಗಾಗಿ ಯೋಗ ಹಾಗು ಪ್ರಾಣಾಯಾಮವನ್ನು ಕುರಿತು ಪುಸ್ತಕವನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಡಾ|| ಸಿಂಧು ಪ್ರಶಾಂತ್ ರವರು ಬಹುಮುಖ ಪ್ರತಿಭಾವಂತರು.”ನೃತ್ಯ ಪ್ರಾರ್ಥನ ” ಎಂಬ ಸಂಸ್ಥೆಯ ಸ್ಥಾಪಕಿ ಹಾಗು ಶಕ್ಷಕಿಯಾಗಿ ಹಲವಾರು ಶಿಶ್ಯವೃಂದವನ್ನು ತಯಾರಿಸುತಿರುವ ಹೇಗಳಿಕೇ ಇವರದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ