ಹಾಸನ್, 24 ಅಕ್ಟೋಬರ್ 2018: ಸ್ಪರ್ಷ ಆಸ್ಪತ್ರೆ ಇತ್ತೀಚೆಗಷ್ಟೇ ಹಾಸದ ಎನ್ಡಿಆರ್ಕೆ ಆಸ್ಪತ್ರೆಯನ್ನು ವಶಕ್ಕೆ ತೆಗೆದುಕೊಂಡಿದೆ. ಈ ಆಸ್ಪತ್ರೆ ಇನ್ನು ಮುಂದೆ ಉದಾತ್ತ ಮನೋಭಾವದ ಡಾ. ಶರಣ್ ಪಾಟೀಲ್ ನೇತೃತ್ವದ ಸ್ಪರ್ಷ ಆಸ್ಪತ್ರೆಯ ತಂಡದ ಕೈಕೆಳಗೆ ಕೆಲಸ ಮಾಡಲಿ. ಈ ಆಸ್ಪತ್ರೆ ಹಾಸನದ ಬಿಎಂ ರಸ್ತೆಯಲ್ಲಿದ್ದು, ಐಸಿಯು , ನರದ ಶಸ್ತ್ರಚಿಕಿತ್ಸೆ, ಹೃದ್ರೋಗ, ಮೂಳೆ ಸಂಬಂಧಿ ಕಾಯಿಲೆ, ಖಿನ್ನತೆ, ಅಪಘಾತ ಹಾಗೂ ತುರ್ತು ಸೇವೆಗಳನ್ನು ಒದಗಿಸಲಿದೆ.
ಈ ಆಸ್ಪತ್ರೆಯನ್ನು ಡಾ.ಶರಣ್ ಪಾಟೀಲ್ ಉದ್ಠಾಟಿಸಿದರು. ಈ ಆಸ್ಪತೆ 150 ಹಾಸಿಗೆಗಳನ್ನು ಹೊಂದಿದೆ. ಇತ್ತೀಚೆಗೆ ಡಾ.ಪಾಟೀಲ್ ಅವರ ಹಾಸನದಂತಹ ಎರಡನೇ ಹಂತದ ನಗರಗಳಲ್ಲಿ ಕೂಡ ಸೇವೆಯನ್ನು ವಿಸ್ತರಿಸಲು ಇಚ್ಚಿಸಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ಈ ಆಸ್ಪತ್ರೆಯನ್ನು ಸುಪರ್ದಿಗೆ ತೆಗೆದುಕೊಳ್ಳಲಾಗಿದೆ.
ಇದನ್ನು ವಶಕ್ಕೆ ಪಡೆದ ಮೇಲೆ, ಹಾಸನದ ಜನರಿಗೆ ಕೈಗೆಟಕುವ ದರದಲ್ಲಿ ವಿಶ್ವದರ್ಜೆಯ ಚಿಕಿತ್ಸೆ ಒದಗಿಸುವುದು ಸ್ಪರ್ಷ ಆಸ್ಪತ್ರೆಯ ಗುರಿಯಾಗಿದೆ. ಈ ಆಸ್ಪತ್ರೆ ಈಗಾಗಲೇ ಹಲವು ತಜ್ಞರನು ಹೊಂದಿದೆ.
ಈ ಕುರಿತು ವಿವರ ನೀಡಿದ ಶರಣ್ ಪಾಟೀಲ್, “ಹಾಸನದಲ್ಲಿ ಜನರಿಗೆ ಅಗತ್ಯ ವೈದ್ಯಕೀಯ ಸೌಲಭ್ಯಗಳು ಸರಿಯಾಗಿ ಸಿಗುತ್ತಿಲ್ಲ. ಅವರಿಗೆ ನೆರವಾಗಲು ನಾವು ಸ್ಪರ್ಷ ಆಸ್ಪತ್ರೆಯ ಸೇವೆಗಳನ್ನು ಜನರಿಗೆ ಒದಗಿಸಲು ಮುಂದಾಗಿದ್ದೇವೆ” ಎಂದರು.
ಹಾಸನದ ಓಆಖಏ ಆಸ್ಪತ್ರೆಯನ್ನು ಈಗ ಸ್ಪರ್ಷ ಆಸ್ಪತ್ರೆಯೆಂದು ಮರು ನಾಮಕರಣ ಮಾಡಲಾಗುವುದು.