ಕ್ಷಮೆ ಕೋರಿದ ಮಹಾ ಸಿಎಂ ಪತ್ನಿ ಅಮೃತ ಫಡ್ನವೀಸ್

ಮುಂಬೈ: ದೇಶದ ಮೊದಲ ಸ್ವದೇಶಿ ವಿಹಾರ ನೌಕಾಯಾನ ಆಂಗ್ರಿಯಾ ಮಾರ್ಗವನ್ನು ಉದ್ಘಾಟಿಸಿದ್ದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಪತ್ನಿ ಅಮೃತಾ ಫಡ್ನವೀಸ್, ಭದ್ರತಾ ಅಧಿಕಾರಿಗಳ ಸಲಹೆಯನ್ನೂ ಲೆಕ್ಕಿಸದೇ ನಿಯಮ ಉಲ್ಲಂಘಿಸಿ ಅಪಾಯಕಾರಿಯಾಗಿ ಸೆಲ್ಫಿ ತೆಗೆದುಕೊಂಡು ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಘಟನೆಗೆ ಸಂಬಂಧಿಸಿದಂತೆ ಈಗ ಅಮೃತಾ ಕ್ಷಮೆಯಾಚಿಸಿದ್ದಾರೆ.

ಅಮೃತ ಅವರು, ಭದ್ರತಾ ಉಲ್ಲಂಘನೆ ಮಾಡಿ ಪ್ರಯಾಣಿಕರ ಸುರಕ್ಷತೆಗಾಗಿ ಹಾಕಲಾಗಿದ್ದ ಬ್ಯಾರಿಕೇಡ್​ ದಾಟಿ ಹಡಗಿನ ತುದಿಯಲ್ಲಿ ಕುಳಿತು ಸೆಲ್ಫಿ ತೆಗೆದುಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಅಮೃತ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಎಚ್ಚೆತ್ತ ಅಮೃತ ಟಿವಿ ಸಂದರ್ಶನವೊಂದರಲ್ಲಿ ಕ್ಷಮೆ ಕೇಳಿದ್ದಾರೆ.

ಯಾರಿಗಾದರೂ ನಾನು ತಪ್ಪು ಮಾಡಿದ್ದೇನೆ ಎನಿಸಿದ್ದರೆ ಅದಕ್ಕೆ ನಾನು ಕ್ಷಮೆ ಕೇಳುತ್ತೇನೆ. ಸೆಲ್ಫಿಗಳನ್ನು ತೆಗೆದುಕೊಳ್ಳುವಾಗ ಯುವಜನತೆ ಹೆಚ್ಚಿನ ಅಪಾಯ ತೆಗೆದುಕೊಳ್ಳಲು ಮುಂದಾಗಬಾರದು ಸಲಹೆ ನೀಡಿದ್ದಾರೆ.ಇನ್ನು ನಾನು ಸೆಲ್ಫಿ ತೆಗೆದುಕೊಂಡ ಜಾಗ ಅಪಾಯಕಾರಿಯಾಗಿರಲಿಲ್ಲ. ನಾನು ಕುಳಿತಿದ್ದ ಜಾಗದಿಂದ ಕೆಳಗೆ ಇನ್ನೆರಡು ಸ್ಟೆಪ್ಸ್​ಗಳು ಇದ್ದವು ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ