ಬೆಂಗಳೂರು, ಅ.21- ದಿ ಆಕ್ಸ್‍ಫರ್ಡ್ ವಿಜ್ಞಾನ ಕಾಲೇಜು ಮತ್ತು ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಷನ್, ಬೆಂಗಳೂರು ಸಹಯೋಗದೊಂದಿಗೆ ಭವಿಷ್ಯದ ಭಾರತ :ವಿಜ್ಞಾನ ಮತ್ತು ತಂತ್ರಜ್ಞಾನ-ಸುಸ್ಥಿರ ವೈಜ್ಞಾನಿಕ ಸಂಪ್ರದಾಯಕ್ಕಾಗಿ ಹೊಸ ಹೊರೈಜನ್ಸ್ ಎಕ್ಸ್ಪೋರಿಂಗ್ ಸಮ್ಮೇಳನವನ್ನು ಆಯೋಜಿಸಲಾಗಿತ್ತು.
ಐಎಸ್‍ಸಿಎ ಮಾಜಿ ಅಧ್ಯಕ್ಷ ಪೆÇ್ರ.ಅಶೋಕ್ ಕುಮಾರ್ ಸಕ್ಸೇನಾ ಮಾತನಾಡಿ. ವಿಜ್ಞಾನ ಅಸಾಧ್ಯವಾದ ವಿಷಯಗಳನ್ನು ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ತನ್ನ ಅಪಾರ ಕೊಡುಗೆಗಳಿಂದ ನಮ್ಮ ಇತಿಹಾಸಕ್ಕೆ ಮೆರಗನ್ನು ತಂದಿದೆ. ವಿಜ್ಞಾನವನ್ನು ರಚನಾತ್ಮಕ ಉದ್ದೇಶಕ್ಕಾಗಿ ಬಳಸಿದಾಗ ವಿಜ್ಞಾನವು ಉತ್ತಮ ಸೇವಕನಾಗಿದೆ. ತಪ್ಪಾಗಿ ಬಳಸಿದರೆ ಕೆಟ್ಟ ಮತ್ತು ಅತ್ಯಂತ ವಿನಾಶಕಾರಿಯೂ ಆಗಿದೆ ಎಂದು ವಿವರಿಸಿದರು.
ಐಎಸ್‍ಸಿಎ ಅಧ್ಯಕ್ಷ ಡಾ.ಮನೋಜ್ ಕುಮಾರ್ ಚಕ್ರಬರ್ತಿ ಮಾತನಾಡುತ್ತಾ, ನಮ್ಮ ದೇಶದ ಬಗ್ಗೆ ನಾವು ಹೆಮ್ಮೆ ಪಡಬೇಕು ಮತ್ತು ಸ್ವತಂತ್ರ್ಯ ಭಾರತದಲ್ಲಿ ತಂತ್ರಜ್ಞಾನದ ಕೊಡುಗೆಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕೆಂದು ತಿಳಿಸಿದರು.
ಇಂದು ಆಹಾರ ಉತ್ಪಾದನೆಯಲ್ಲಿ ಅಗತ್ಯ ವಸ್ತುಗಳನ್ನು ವಿದೇಶಗಳಿಗೆ ರಪ್ತು ಮಾಡುವ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ಬಾಹ್ಯಾಕಾಶ ವಿಜ್ಞಾನದಲ್ಲಿ, ಗಣನೀಯವಾಗಿ ಗುರುತಿಸಿಕೊಂಡಿದೆ. ಗರಿಷ್ಠ ಮಟ್ಟದಲ್ಲಿ ಉಪಗ್ರಹಗಳನ್ನು ಉಡಾಯಿಸುವ ಸಾಮಥ್ರ್ಯವನ್ನು ಪಡೆದಿದೆ. ಸೂಪರ್ ಕಂಪ್ಯೂಟರ್‍ಗಳ ಬಳಕೆ ಮತ್ತು ತಯಾರಿಕೆ ಔಷಧೀಯ ಕೈಗಾರಿಕೆಗಳಲ್ಲಿ ಬೆಳವಣಿಗೆ ಸಾಧಿಸಿದೆ ಎಂದು ಹೇಳಿದರು.
ಪ್ರಧಾನ ಕಾರ್ಯದರ್ಶಿ ಪೆÇ್ರ.ಗಂಗಾಧರ್‍ರವರು ವಿದ್ಯಾರ್ಥಿಗಳಿಗೆ ಮಹತ್ವಾಕಾಂಕ್ಷೆಯ ವಿವಿಧ ಫೆಲೋಶಿಪ್ ಮತ್ತು ಪ್ರಶಸ್ತಿಗಳ ಬಗ್ಗೆ ಜಾಗೃತಿ ಮೂಡಿಸಿದರು.
ಸಂಶೋಧನಾ ಚಟುವಟಿಕೆಗಳನ್ನು ಪೆÇ್ರೀ ವಿದ್ಯಾರ್ಥಿಗಳಿಗೆ ಯುವ ವಿಜ್ಞಾನಿ ಪ್ರಶಸ್ತಿ ಮತ್ತು ಅತ್ಯುತ್ತಮ ಪೆÇೀಸ್ಟರ್ ಪ್ರಶಸ್ತಿಗಳ ಬಗ್ಗೆ ತಿಳಿಸಿದರು.
ಮಹಿಳಾ ವಿಜ್ಞಾನಿಗಳು ಮತ್ತು ಯುವ ಸಂಶೋದಕರಿಗೆ 42 ಪ್ರಶಸ್ತಿಗಳನ್ನು, ಸಂಶೋಧಕರಿಗೆ 3000 ಪ್ರಧಾನ ಮಂತ್ರಿ ಫೆಲೋಶಿಪ್ ನೀಡಲಾಗುತ್ತದೆಂದು ತಿಳಿಸಿದರು.
ಮಾಜಿ ಪ್ರಧಾನ ಕಾರ್ಯದರ್ಶಿ ಡಾ.ವಿಜಯಲಕ್ಷ್ಮಿ ಸಕ್ಸೇನಾರವರು ಸ್ವರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು.
ದಿ ಆಕ್ಸ್‍ಫರ್ಡ್ ಸಮೂಹ ವಿದ್ಯಾ ಸಂಸ್ಥೆ ಅಧ್ಯಕ್ಷರಾದ ಎಸ್‍ಎನ್‍ವಿಎಲ್ ನರಸಿಂಹರಾಜು ಮತ್ತು ಡಾ.ಎಚ್.ಪಿ.ತಿವಾರಿರವರು ಆಕ್ಸ್‍ಫರ್ಡ್ ವಿಜ್ಞಾನ ಕಾಲೇಜಿನ ರಿಸರ್ಚ್ ಜನರಲ್ ಆವೃತ್ತಿಯನ್ನು ಬಿಡುಗಡೆ ಮಾಡಿದರು.
ಎಸ್‍ಎನ್‍ವಿಎಲ್ ನರಸಿಂಹರಾಜು ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ನೀಡಿದ ಕೊಡಗೆಗಾಗಿ ಐಎಸ್‍ಸಿಎ ಸದಸ್ಯರಿಗೆ ಅಭಿನಂದನೆ ಸಲ್ಲಿಸಿ, ವಿದ್ಯಾರ್ಥಿಗಳಿಗೆ ಬೌದ್ಧಿಕ ಮನಸ್ಸನ್ನು ಕಲಿಯಲು, ಸಂವಹನಗಳನ್ನು ಜ್ಞಾನ ಗ್ರಹಿಕೆಗೆ ಬಳಸಿಕೊಳ್ಳಲು ಮನವಿ ಮಾಡಿದರು.
ಭಾರತಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನ ನಡೆಸಲು ಅವಕಾಶ ಮಾಡಿಕೊಟ್ಟ ಸಂಘಟನಾ ಕಾರ್ಯದರ್ಶಿಗಳಿಗೆ ಧನ್ಯವಾದ ತಿಳಿಸಿದರು.