ಬೆಂಗಳೂರು, ಅ.21- ಮಾದಕ ವಸ್ತು ಅಫೀಮು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಕೆಪಿ ಅಗ್ರಹಾರ ಠಾಣೆ ಪೆÇಲೀಸರು ಬಂಧಿಸಿ ಮೂರು ಲಕ್ಷ ರೂ. ಬೆಲೆಯ 750ಗ್ರಾಂ ಅಫೀಮ್ಅನ್ನು ವಶಪಡಿಸಿಕೊಂಡಿದ್ದಾರೆ.
ಪಂತರಪಾಳ್ಯದ ಬೇರಾರಾಮ್ (32) ಬಂಧಿತ ಆರೋಪಿ. ನಗರದಲ್ಲಿ ಮಾದಕ ವಸ್ತು ಮಾರಾಟ ಮಾಡುವುದನ್ನು ತಡೆಯುವ ಸಲುವಾಗಿ ಜನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರ ಸಭೆ ಕರೆದು ತಿಳುವಳಿಕೆಗಳನ್ನು ಹಾಗೂ ಇದಕ್ಕೆ ಸಂಬಂಧಿಸಿದಂತೆ ಕಿರುಹೊತ್ತಿಗೆಗಳನ್ನು ಹಂಚಿಕೆ ಮಾಡಲಾಗಿತ್ತು.
ಅದರಂತೆ ಕೆಪಿ ಅಗ್ರಹಾರ ಠಾಣೆ ಇನ್ಸ್ಪೆಕ್ಟರ್ ಎಸ್.ಎಸ್.ಮಂಜು ಅವರಿಗೆ ಟೆಲಿಕಾಂ ಬಡಾವಣೆಯ ಬಳಿ ಒಬ್ಬಾತ ಅಫೀಮ್ಅನ್ನು ತಂದು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾನೆಂದು ಬಂದ ಖಚಿತ ವರ್ತಮಾನದ ಮೇರೆಗೆ ಮೇಲಾಧಿಕಾರಿಗಳ ಅನುಮತಿ ಪಡೆದು ಸಿಬ್ಬಂದಿಯೊಂದಿಗೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ವಶದಲ್ಲಿದ್ದ ಹಾಗೂ ಆರೋಪಿ ವಾಸದ ಮನೆಯಲ್ಲಿ ಇಟ್ಟಿದ್ದ 750 ಗ್ರಾಂ ಅಫೀಮು ವಶಪಡಿಸಿಕೊಂಡಿದ್ದು, ಇದರ ಒಟ್ಟು ಬೆಲೆ ಸುಮಾರು 3 ಲಕ್ಷ ರೂ.ಗಳಾಗುತ್ತದೆ. ಆರೋಪಿಯು ಅಫೀಮ್ಅನ್ನು ರಾಜಸ್ಥಾನದಿಂದ ರೈಲಿನಲ್ಲಿ ಬೆಂಗಳೂರಿಗೆ ತಂದು ಮಾರಾಟ ಮಾಡುತ್ತಿರುವುದಾಗಿ ತಿಳಿಸಿರುತ್ತಾನೆ.