ಬೆಂಗಳೂರು, ಅ.18- ದೇಶಿ ಹಾಲು-ತುಪ್ಪ ಮಾರಾಟ ಮಾಡುವ ನೆಪದಲ್ಲಿ ಮನೆ ಮಾಲೀಕರ ವಿಶ್ವಾಸ ಗಳಿಸಿ ಮನೆಯವರು ಇಲ್ಲದ ಸಮಯ ನೋಡಿ ಕೈಗೆ ಸಿಕ್ಕ ನಗ-ನಾಣ್ಯ ದೋಚಿ ಪರಾರಿಯಾಗುತ್ತಿದ್ದ ಕುಖ್ಯಾತ ಅಂತಾರಾಜ್ಯ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಸಂಜಯನಗರ ಠಾಣೆ ಪೆÇಲೀಸರು ಆರೋಪಿಯಿಂದ 45 ಲಕ್ಷ ರೂ.ಮೌಲ್ಯದ ಒಂದು ಕೆಜಿಗೂ ಹೆಚ್ಚು ತೂಕದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಉತ್ತರ ಪ್ರದೇಶದ ಗಾಜಿಯಾಬಾದ್ನ ಮುರಾದ್ನಗರದ ನಿವಾಸಿ ಮೀನು ಅಲಿಯಾಸ್ ಚಾಚಾಜಿ (51) ಬಂಧಿತ ಆರೋಪಿ.
ಸಂಜಯನಗರ ನಿವಾಸಿ ಅನಿಲ್ ಎಂಬುವವರು ಕಳೆದ ಆ.13ರಂದು ತಮ್ಮ ಸಂಬಂಧಿಕರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮನೆಗೆ ಲಾಕ್ ಮಾಡಿಕೊಂಡು ಊರಿಗೆ ತೆರಳಿದ್ದರು. ಅದೇ ದಿನ ರಾತ್ರಿ 10.30ಕ್ಕೆ ವಾಪಸಾದಾಗ ಮನೆಯಲ್ಲಿದ್ದ ಚಿನ್ನಾಭರಣ ಕಳವು ಮಾಡಿರುವುದು ಕಂಡುಬಂತು.
ಜೆಸಿ ನಗರ ಉಪವಿಭಾಗದ ಎಸಿಪಿ ಶಿವಶಂಕರ್ ಅವರ ಮಾರ್ಗದರ್ಶನದಲ್ಲಿ ಸಂಜಯನಗರ ಇನ್ಸ್ಪೆಕ್ಟರ್ ಪ್ರಶಾಂತ್ ಆರ್.ವರ್ಣಿ ಮತ್ತವರ ಸಿಬ್ಬಂದಿಗಳು ಆರೋಪಿ ಚಾಚಾಜಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ಆತ ದೇಶಿ ಹಾಲು-ತುಪ್ಪ ಮಾರಾಟ ಮಾಡುವ ನೆಪದಲ್ಲಿ ಮನೆಯವರ ವಿಶ್ವಾಸ ಗಳಿಸಿ ಅವರು ಇಲ್ಲದ ಸಮಯ ಸಾಧಿಸಿ ಚಿನ್ನಾಭರಣ ಕಳವು ಮಾಡುತ್ತಿದ್ದ ಮಾಹಿತಿ ಬಾಯಿಬಿಟ್ಟಿದ್ದಾನೆ.
ಚಾಚಾಜಿ ನೀಡಿದ ಮಾಹಿತಿ ಮೇರೆಗೆ 45 ಲಕ್ಷ ರೂ. ಮೌಲ್ಯದ 1 ಕೆಜಿ 365 ಗ್ರಾಂ ತೂಕದ ಚಿನ್ನಾಭರಣಗಳನ್ನು ಪೆÇಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಸಂಜಯನಗರ ಪೆÇಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.