
ಬೆಂಗಳೂರು, ಅ.16- ರಾಜ್ಯದ ಆರು ಮಂದಿ ಐಪಿಎಸ್ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು ಪೆÇಲೀಸ್ ಕೇಂದ್ರ ಕಚೇರಿಯ ಐಜಿಪಿ ಹರಿಶೇಖರನ್ ಅವರನ್ನು ಬೆಂಗಳೂರು ಸಂಚಾರ ವಿಭಾಗದ ಹೆಚ್ಚುವರಿ ಪೆÇಲೀಸ್ ಆಯುಕ್ತ ಹಾಗೂ ಐಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ಈ ಹುದ್ದೆಯಲ್ಲಿದ್ದ ಆರ್.ಹಿತೇಂದ್ರ ಅವರನ್ನು ವರ್ಗಾವಣೆ ಮಾಡಿದ್ದರಿಂದ ಈ ಹುದ್ದೆ ತೆರವಾಗಿತ್ತು.
ಪೂರ್ವ ವಿಭಾಗದ ಡಿಸಿಪಿಯಾಗಿರುವ ಅಜಯ್ ಹಿಲೋರಿ ಅವರನ್ನು ಬೆಂಗಳೂರು ಕೆಎಸ್ಆರ್ಪಿ ಒಂದನೇ ಬೆಟಾಲಿಯನ್ನ ಕಮಾಂಡೆಂಟ್ ಆಗಿ ವರ್ಗಾಯಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಅವರನ್ನು ಬೆಂಗಳೂರು ದಕ್ಷಿಣ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ದಕ್ಷಿಣ ವಿಭಾಗದ ಡಿಸಿಪಿಯಾಗಿದ್ದ ಡಾ.ಶರಣಪ್ಪ ಅವರನ್ನು ಈಗಾಗಲೇ ವರ್ಗಾವಣೆ ಮಾಡಿದ್ದರಿಂದ ಈ ಹುದ್ದೆ ಖಾಲಿಯಾಗಿತ್ತು.
ಹುದ್ದೆಯ ನಿರೀಕ್ಷೆಯಲ್ಲಿದ್ದ ರಾಹುಲ್ ಕುಮಾರ್ ಶಹಾಪುರ್ವಾದ್ ಅವರನ್ನು ಅಜಯ್ ಹಿಲೋರಿ ಅವರ ವರ್ಗಾವಣೆಯಿಂದ ತೆರವಾದ ಪೂರ್ವ ವಿಭಾಗದ ಡಿಸಿಪಿ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ.
ಸಿಐಡಿ ವಿಭಾಗದ ಪೆÇಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ಅವರನ್ನು ಮುಂದಿನ ಆದೇಶದವರೆಗೆ ಚಿಕ್ಕಮಗಳೂರು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಹುದ್ದೆಗೆ ನಿಯೋಜನೆ ಮಾಡಲಾಗಿದೆ. ಇಲ್ಲಿ ಅಣ್ಣಾಮಲೈ ಅವರ ವರ್ಗಾವಣೆಯಿಂದ ಎಸ್ಪಿ ಹುದ್ದೆ ತರವಾಗಿತ್ತು.
ಬೆಂಗಳೂರು ಅಪರಾಧ ವಿಭಾಗದ ಡಿಸಿಪಿ-2 ಹುದ್ದೆಯಲ್ಲಿದ್ದ ಜಿತೇಂದ್ರ ಖನಗಾವಿ ಅವರನ್ನು ಚನ್ನಪಟ್ಟಣ ಪೆÇಲೀಸ್ ತರಬೇತಿ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.