ಕಡಿಮೆಯಾಗುತ್ತಾ ಪೆಟ್ರೋಲ್,​ ಡೀಸೆಲ್​ ಬೆಲೆ? ತೈಲ ಕಂಪೆನಿಗಳ ಮುಖ್ಯಸ್ಥರೊಂದಿಗೆ ಇಂದು ಪ್ರಧಾನಿ ಮಾತುಕತೆ

ನವದೆಹಲಿ: ಕೇಂದ್ರ ಸರ್ಕಾರದ ಪೆಟ್ರೋಲ್​ ಡೀಸೆಲ್​ ದರದಲ್ಲಿ ಪ್ರತಿ ಲೀಟರ್​ಗೂ 2.50 ರೂಪಾಯಿ ಕಡಿಮೆಯದಾರೂ ಇದೀಗ ಮತ್ತೆ ಬೆಲೆ ಏರಿಕೆಯಾಗುತ್ತಿದೆ. ಹೀಗಾಗಿ ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ತೈಲ ಕಂಪೆನಿಗಳ ಮಾಲಿಕರನ್ನು ಭೇಟಿಯಾಗಲಿದ್ದಾರೆ. ಲಭ್ಯವಾದ ಮಾಹಿತಿ ಅನ್ವಯ ಮೋದಿ ಅಂತರಾಷ್ಟ್ರೀಯ ಹಾಗೂ ರಾಷ್ಟ್ರೀಯ ತೈಲ ಕಂಪೆನಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಭೇಟಿಯಾಗಲಿದ್ದಾರೆ ಎನ್ನಲಾಗಿದೆ. ಅಮೆರಿಕಾವು ಈಗಾಗಲೇ ಇರಾನ್​ನಿಂದ ತೈಲ ಆಮದು ಮಾಡಿಕೊಳ್ಳದಂತೆ ನಿರ್ಬಂಧ ಹೇರಿದ್ದು, ಇದು ನವೆಂಬರ್​ 4 ರಿಂದ ಜಾರಿಯಾಗಲಿದೆ. ಹೀಗಿರುವಾಗ ವಿಶ್ವ ಮಟ್ಟದಲ್ಲಿ ಕಚ್ಛಾ ತೈಲ ಬೆಲೆಯು ಅಸ್ಥಿರಗೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಧಾನಿ ಮೋದಿಯ ಇಂದಿನ ಭೇಟಿ ಬಹಳಷ್ಟು ಮಹತ್ವ ಪಡೆಯುತ್ತದೆ.
ಇನ್ನು ಸರ್ಕಾರದ ಪರವಾಗಿ ತೈಲ ಬೆಲೆ ಕಡಿಮೆ ಮಾಡಿದರೂ, ಪ್ರತಿ ದಿನ ಈ ಬೆಲೆ ನಿರಂತರವಾಗಿ ಏರಿಕೆ ಕಾಣುತ್ತಿದೆ. ಇದೇ ಕೃಆಣದಿಂದ ಪೆಟ್ರೋಲ್​- ಡೀಸೆಲ್​ ದರ ಮತ್ತೆ ಹಿಂದಿನ ಮಟ್ಟಕ್ಕೆ ಏರಿಕೆಯಾಗುತ್ತಿದೆ. ಭಾನುವಾರದಂದು ಭಾರತದ ನಾಲ್ಕು ಮಹಾನಗರಗಳಾದ ದೆಹಲಿ, ಮುಂಬೈ, ಕೋಲ್ಕತ್ತಾ ಹಾಗೂ ಚೆನ್ನೈನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ಬೆಲೆ ಹೀಗಿತ್ತು: 82.72, 88.18, 84.54 ಹಾಗೂ 85.99 ರೂಪಾಯಿ ತಲುಪಿತ್ತು.
ಇತ್ತ ಡೀಸೆಲ್​ ಬೆಲೆಯೂ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಭಾನುವಾರದಂದು ಡೀಸೆಲ್​ ಬೆಲೆ ದೆಹಲಿಯಲ್ಲಿ ಪ್ರತಿ ಲೀಟರ್​ಗೆ 75.38 ರೂ, ಮುಂಬೈನಲ್ಲಿ 79.02, ಕೋಲ್ಕತ್ತಾದಲ್ಲಿ 77.23 ಹಾಗೂ ಚೆನ್ನೈನಲ್ಲಿ 79.71 ರೂಪಾಯಿ ಇತ್ತು. ರಾಜ್ಯದಲ್ಲಿ ಪೆಟ್ರೋಲ್​, ಡೀಸೆಲ್​ ಮೇಲಿನ ತೆರಿಗೆಯಲ್ಲಿ ಭಿನ್ನತೆ ಇರುವುದರಿಂದ ಬೆಲೆಯಲ್ಲೂ ಅಂತರ ಕಂಡು ಬರುತ್ತದೆ. ಎಲ್ಲೆಲ್ಲಿ ವ್ಯಾಟ್​ ಹೆಚ್ಚಿರುತ್ತದೆ ಅಲ್ಲಲ್ಲಿ ಪೆಟ್ರೋಲ್​, ಡೀಸೆಲ್​ ದರವೂ ಜಾಸ್ತಿ ಇರುತ್ತದೆ.
ಇನ್ನು ಪೆಟ್ರೋಲ್​, ಡೀಸೆಲ್​ ಈವರೆಗೂ ಜಿಎಸ್​ಟಿ ವ್ಯಾಪ್ತಿಗೆ ಬರುವುದಿಲ್ಲ ಎಂಬುವುದು ಗಮನಾರ್ಹ. ಇನ್ನು ನಾಲ್ಕು ಮಹಾನಗರಗಳ ಪೈಕಿ ಪೆಟ್ರೋಲ್​, ಡೀಸೆಲ್​ ಮೇಲೆ ಅತ್ಯಂತ ಕಡಿಮೆ ತೆರಿಗೆ ಹಾಕಲಾಗುತ್ತದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ