ಟೀಂ ಇಂಡಿಯಾ ಮಡಿಲಿಗೆ ಟೆಸ್ಟ್ ಸರಣಿ: ಕ್ಲೀನ್ ಸ್ವೀಪ್ ಮಾಡಿದ ಕೊಹ್ಲಿ ಪಡೆ

Indian cricket team poses for photographs with the trophy after winning the India West Indies test series in Hyderabad, India, Sunday, Oct. 14, 2018. (AP Photo/Mahesh Kumar A.)

ಹೈದ್ರಾಬಾದ್: ವೇಗಿ ಉಮೇಶ್ ಯಾದವ್ ಮಾರಕ ದಾಳಿಯ ನೆರಿವಿನಿಂದ ಟೀಂ ಇಂಡಿಯಾ ವೆಸ್ಟ್‍ಇಂಡೀಸ್ ವಿರುದ್ದ 10 ವಿಕೆಟ್‍ಗಳ ಭರ್ಜರಿ ಗೆಲುವು ದಾಖಲಿಸಿ ಸರಣಿಯನ್ನ 2-0 ಅಮತರದಿಂದ ಕ್ಲೀನ್ ಸ್ವೀಪ್ ಮಾಡಿತು.
ವೆಸ್ಟ್ ಇಂಡೀಸ್ ಎರಡನೇ ಇನ್ನಿಂಗ್ಸ್‍ನಲ್ಲಿ ಉಮೇಶ್ ಯಾದವ್ ಮಾರಕ ದಾಳಿಗೆ ತತ್ತರಿಸಿ ಕೇವಲ 126 ರನ್‍ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಟೀಂ ಇಂಡಿಯಾಕ್ಕೆ 72 ರನ್‍ಗಳ ಗೆಲುವಿನ ಗುರಿಯನ್ನ ನೀಡಿತು. ಉಮೇಶ್ ಯಾದವ್ 4 ವಿಕೆಟ್ ಪಡೆದು ಮಿಂಚಿದ್ರು.
ಸುಲಭ ಗುರಿ ಬೆನ್ನತ್ತಿದ ಭಾರತಕ್ಕೆ ಆರಂಭಿಕ ಬ್ಯಾಟ್ಸ್ ಮನ್‍ಗಳಾದ ಪೃಥ್ವಿ ಶಾ ಮತ್ತು ಕೆ.ಎಲ್. ರಾಹುಲ್ ಉತ್ತಮ ಆರಂಭ ನೀಡಿದ್ರು. ಇಬ್ಬರು ತಲಾ 33 ರನ್ ಬಾರಿಸಿ ತಂಡವನ್ನ ಗೆಲುವಿನ ದಡ ಸೇರಿಸಿದ್ರು.
ಇದಕ್ಕೂ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‍ನಲ್ಲಿ 367 ರನ್‍ಗಳಿಗೆ ಆಲೌಟ್ ಆಯಿತು. 92 ರನ್‍ಗಳಿಸಿದ್ದ ರಿಷಭ್ ಪಂತ್ ಹೇಟ್ಮರ್‍ಗೆ ಕ್ಯಾಚ್ ಕೊಟ್ಟು ಶತಕ ವಂಚಿತರಾದ್ರು. ಅಜಿಂಕ್ಯ ರಹಾನೆ 80 ರನ್‍ಗಳಿಸಿ ಪೆವಲಿಯನ್ ಸೇರಿದ್ರು. ವೆಸ್ಟ್‍ಇಂಡೀಸ್ ಪರ ಜೆಸನ್ ಹೋಲ್ಡರ್ 5 ವಿಕೆಟ್ ಪಡೆದು ಮಿಂಚಿದ್ರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ