ಬೆಂಗಳೂರು,ಅ.15- ರಾಷ್ಟ್ರೀಯ ಬಸವ ಪ್ರತಿಷ್ಠಾನ ವತಿಯಿಂದ ಅಂತಾರಾಷ್ಟ್ರೀಯ ವಚನ ಸಾಹಿತ್ಯ ಸಮ್ಮೇಳನವನ್ನು ಇದೇ 26ರಂದು ದುಬೈನ ಬಿಲ್ವ ಇಂಡಿಯನ್ ಶಾಲೆಯಲ್ಲಿ ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ.ಎಸ್.ಎಂ.ಸುರೇಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಸಮಾನತೆ ಜಾತ್ಯತೀತತೆ ಪರಿಕಲ್ಪನೆ ಹಾಗೂ ಲಿಂಗ ಸಮಾನತೆ ಸಾರುವ ನಿಟ್ಟಿನಲ್ಲಿ ಬಸವಾದಿ ಯುವ ಶರಣರ ವಚನ ಸಾಹಿತ್ಯದ ತಿರುಳನ್ನು ವಿಶ್ವದಾದ್ಯಂತ ವಿಸ್ತರಿಸುವ ದೃಷ್ಟಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಚಿಂತಕರು ಹಾಗೂ ಸಮಾಜ ಸೇವಕರನ್ನು ಗುರುತಿಸಿ ಅಕ್ಕ ಕಾಯಕ ರತ್ನ ಪ್ರಶಸ್ತಿ ನೀಡಲಾಗುತ್ತಿತ್ತು. ಈ ಬಾರಿ ಖ್ಯಾತ ವಿಜ್ಞಾನಿ ಎ.ಎಸ್.ಕಿರಣ್‍ಕುಮಾರ್, ಸಮಾಜ ಸೇವಕರಾದ ವೀಣಾ ಅಶೋಕ್, ಡಾ.ಜ್ಯೋತಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದರು.
ಡಾ.ಪಂಡಿತಾರಾಧ್ಯ ಶಿವಚಾರ್ಯ ಸ್ವಾಮೀಜಿ ಸಮ್ಮೇಳನದ ದಿವ್ಯ ಸಾನಿಧ್ಯ ವಹಿಸಲಿದ್ದು, ಶ್ರೀ ಬಸವ ಮರಳು ಸಿದ್ದ ಸ್ವಾಮೀಜಿ, ಶ್ರೀ ಡಾ.ಗುರು ಬಸವ ಮಹಾಸ್ವಾಮೀಜಿ, ನಾಡಿನ ಹೆಸರಾಂತ ಸಾಹಿತಿಗಳು, ಚಿಂತಕರಾದ ಡಾ.ಸೋಮಶೇಖರ್, ಡಾ.ವೀಣಾ ಬನ್ನಂಜೆ, ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ರಂಜಿನದರ್ಗ, ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.