ಬೆಂಗಳೂರು, ಅ.14- ಕನ್ನಡ ಸಂಘರ್ಷ ಸಮಿತಿಯು ಜಾನಪದ ಜಂಗಮ ಎಸ್.ಕೆ.ಕರೀಂಖಾನ್ ನೆನಪಿನಲ್ಲಿ ಹಿಲೇರಿನಾ ಜಾಕೊಬ್ ಲೋಬೊ ದತ್ತಿ ಅಂಗವಾಗಿ ಉದಯೋನ್ಮುಖ ಗಾಯಕರಿಗಾಗಿ ರಾಜ್ಯಮಟ್ಟದ ಜಾನಪದ ಗೀತೆಗಳ ಗಾಯನ ಸ್ಪರ್ಧೆ ಏರ್ಪಡಿಸಿದೆ.
ಅ.20ರಂದು ಮಧ್ಯಾಹ್ನ 2 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ನ ಕುವೆಂಪು ಸಭಾಂಗಣದಲ್ಲಿ ಗಾಯನ ಸ್ಪರ್ಧೆ ನಡೆಯಲಿದೆ. 15 ವರ್ಷದ ಒಳಗಿನವರು ಕಿರಿಯರ ವಿಭಾಗದಲ್ಲಿ, 15 ವರ್ಷ ಮೀರಿದವರು ಹಿರಿಯರ ವಿಭಾಗದಲ್ಲಿ ಸ್ಪರ್ಧಿಸಬಹುದಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಕನ್ನಡ ಸಂಘರ್ಷ ಸಮಿತಿ ಅಧ್ಯಕ್ಷ ಡಾ.ಕೋ.ವೆಂ.ರಾಮಕೃಷ್ಣೇಗೌಡ ತಿಳಿಸಿದ್ದಾರೆ.
ವೇದಿಕೆಗಳಲ್ಲಿ ಕಾರ್ಯಕ್ರಮ ನೀಡುವವರು ದೂರದರ್ಶನ, ಆಕಾಶವಾಣಿ ಮುಂತಾದ ವಾಹಿನಿಗಳಲ್ಲಿ ಹಾಡಿರುವವರು ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಇಲ್ಲ. ಮೂಲ ಜಾನಪದ ಗೀತೆಗಳನ್ನು ಮಾತ್ರ ಹಾಡಬೇಕು. ಯಾವುದೇ ಪಕ್ಕಾವಾದ್ಯ ಬಳಸುವಂತಿಲ್ಲ.
ಕಿರಿಯರ ವಿಭಾಗದಲ್ಲಿ ಭಾಗವಹಿಸುವವರು ವಯಸ್ಸಿನ ದೃಢೀಕರಣಕ್ಕಾಗಿ ಶಾಲಾ ದಾಖಲಾತಿಯನ್ನು ನೀಡಬೇಕು. ಪ್ರವೇಶ ಶುಲ್ಕ 50ರೂ. ಇರುತ್ತದೆ. ಎರಡೂ ವಿಭಾಗಗಳಲ್ಲೂ ಪ್ರತ್ಯೇಕವಾಗಿ ಮೂರು ಬಹುಮಾನ ನೀಡಲಾಗುತ್ತದೆ.
ಹೆಸರು ನೊಂದಾಯಿಸಿಕೊಳ್ಳಲು ಡಾ.ಕೋ.ವೆಂ.ರಾಮಕೃಷ್ಣೇಗೌಡ, ಅಧ್ಯಕ್ಷರು, ಕನ್ನಡ ಸಂಘರ್ಷ ಸಮಿತಿ, ದೂರವಾಣಿ: 9448851781 ಸಂಪರ್ಕಿಸಬಹುದು.