ಮಹಿಳಾ ಕ್ರೀಡಾಕೂಟ ಮಹಿಳೆಯರ ಪ್ರತಿಭೆ ಅನಾವರಣಗೊಳಿಸಲು ಒಂದು ಉತ್ತಮ ಅವಕಾಶ: ಮುರುಘಾ ಶರಣರು

ಬೆಂಗಳೂರು, ಅ.14- ಶಿಸ್ತು ಮತ್ತು ದಕ್ಷತೆಯಲ್ಲಿ ಮಹಿಳೆಯರು ಪುರುಷರಿಗಿಂತ ಮುಂಚೂಣಿಯಲ್ಲಿರುವುದು ಸಂತೋಷದ ಸಂಗತಿ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಮುರುಘಾಮಠದ ಆವರಣದಲ್ಲಿ ಏರ್ಪಡಿಸಿದ್ದ ಮಹಿಳಾ ಕ್ರೀಡಾಕೂಟದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಮಹಿಳೆಯರ ಶಕ್ತಿ, ಯುಕ್ತಿ, ಭಕ್ತಿ ರಾಜ್ಯ ಮತ್ತು ರಾಷ್ಟ್ರದಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಪ್ರತಿಧ್ವನಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಹಿಳಾ ಕ್ರೀಡಾಕೂಟ ಮಹಿಳೆಯರ ಪ್ರತಿಭೆ ಅನಾವರಣಗೊಳಿಸಲು ಒಂದು ಉತ್ತಮ ಅವಕಾಶವಾಗಿದೆ ಎಂದರು.
ಮಹಿಳಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ಬಸವಣ್ಣನವರು ಅಂದು ಮಹಿಳೆಯರಿಗೆ ವಿಶೇಷ ಸ್ಥಾನಮಾನ ನೀಡಿ ಗೌರವಿಸಿದ್ದರು. ಇಂದು ಮುರುಘಾ ಶರಣರು ಮಹಿಳಾ ಕ್ರೀಡಾಕೂಟ ಏರ್ಪಡಿಸಿ ಅವರಲ್ಲಿರುವ ಪ್ರತಿಭೆ ಅನಾವರಣಗೊಳಿಸಲು ನೆರವಾಗಿದ್ದಾರೆ ಎಂದು ಹೇಳಿದರು.

ಇಂದಿಗೂ ನೆಲ ಮತ್ತು ಜಲದ ಹೆಸರುಗಳು ಸ್ತ್ರೀಯರ ಹೆಸರಿನಿಂದಲೇ ಕರೆಯಲ್ಪಡುತ್ತಿವೆ. ಮಹಿಳೆಯರಲ್ಲಿ ಸಾಧಿಸುವ ಶಕ್ತಿ ಅಪಾರವಾಗಿದೆ. ಸೋಲು ಗೆಲುವಿನ ಮೆಟ್ಟಿಲು ಎಂಬುದನ್ನು ಅರಿತು ಮಹಿಳೆಯರು ಉತ್ಸಾಹದಿಂದ ಕ್ರೀಡಾಕೂಟದಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.

ಕ್ರೀಡಾಕೂಟದಲ್ಲಿ 18-30, 31-50, 50 ವರ್ಷ ವಯೋಮಾನದ ಮಹಿಳೆಯರಿಗೆ ಥ್ರೋಬಾಲ್, ಟೆನಿಕಾಯ್ಟ್, ಲೆಮನ್-ಸ್ಪೂನ್, ರಿಲೇ, ಗುಂಡು ಎಸೆತ, ಗೋಣಿಚೀಲದ ಓಟ, ಮಡಕೆ ಒಡೆಯುವುದು, ಮ್ಯೂಸಿಕಲ್ ಚೇರ್, ಬಾಲ್ ಇನ್ ದ ಬಕೆಟ್, ಸ್ಪರ್ಶಜ್ಞಾನ ಪರೀಕ್ಷೆ, ಏಕಪಾತ್ರಾಭಿನಯ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿವಿಧ ವಿಭಾಗಗಳಲ್ಲಿ ಸರ್ವೋತ್ತಮ ಕ್ರೀಡಾಪಟುವಿಗೆ ಶರಣೆ ಅಕ್ಕನಾಗಮ್ಮ, ಶರಣೆ ಒನಕೆ ಓಬವ್ವ, ಶರಣೆ ಅಕ್ಕವiಹಾದೇವಿ ಪ್ರಶಸ್ತಿಗಳನ್ನು ನೀಡಲಾಗುವುದು.

ಶರಣ ಸಂಸ್ಕøತಿ ಉತ್ಸವ-2018ರ ನಾಗಗೊಂಡನಹಳ್ಳಿ ಚಿಲುಮೆ ಮಠದ ಶ್ರೀ ಬಸವಕಿರಣ ಸ್ವಾಮಿಜಿ, ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಪಟೇಲ್ ಶಿವಕುಮಾರ್, ಕಾರ್ಯದರ್ಶಿ ಡಿ.ಎಸ್.ಮಲ್ಲಿಕಾರ್ಜುನ್, ಎಸ್‍ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರು, ಜಿಪಂ ಮಾಜಿ ಅಧ್ಯಕ್ಷೆ ಶಾಂತಮ್ಮ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ