
ಮೈಸೂರು : ಮೈಸೂರು ದಸರಾ ಪ್ರಯುಕ್ತ ಇಂದು ಆಯೋಜಿಸಿದ್ದ ಹಾಫ್ ಮ್ಯಾರಥಾನ್ಗೆ ಚಾಲನೆ ನೀಡಿದ ಸಚಿವ ಜಿ.ಟಿ. ದೇವೇಗೌಡ ಸ್ಪರ್ಧಿಗಳೊಂದಿಗೆ ಓಡಲು ಆರಂಭಿಸಿದರು. ಬಹಳ ಹುಮ್ಮಸ್ಸಿನಿಂದ ಪಂಚೆಯಲ್ಲೇ ಓಡುತ್ತಿದ್ದ ದೇವೇಗೌಡರು ಸ್ವಲ್ಪ ದೂರ ಓಡಿದ ನಂತರ ಮುಗ್ಗಿರಿಸಿ ಬಿದ್ದರು.
ತಮ್ಮ ವಯಸ್ಸನ್ನು ಲೆಕ್ಕಿಸದೆ ಉತ್ಸಾಹದಿಂದ ಮ್ಯಾರಥಾನ್ನಲ್ಲಿ ಪಾಲ್ಗೊಂಡಿದ್ದ ಉನ್ನತ ಶಿಕ್ಷಣ ಸಚಿವ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿಯೂ ಆಗಿರುವ ಜಿ.ಟಿ. ದೇವೇಗೌಡರು ರಸ್ತೆಯಲ್ಲಿ ಪಂಚೆ ಎತ್ತಿ ಹಿಡಿದು ಓಡುತ್ತಿದ್ದಂತೆ ಕೆಳಗೆ ಬಿದ್ದರು. ಆಗ ಅವರ ಆಪ್ತರು ಕೈಹಿಡಿದು ಎತ್ತಿದರು.