ಉಚಿತ ಅಥವಾ ಗೌರವ ಐಪಿಎಲ್ ಟಿಕೇಟುಗಳ ಮೇಲೆ 18 ಶೇ. ಜಿಎಸ್ಟಿ ಪಾವತಿ: ಎಎಆರ್ ಆದೇಶ

ನವದೆಹಲಿ ಐಪಿಎಲ್ ಪಂದ್ಯಗಳಿಗೆ ಫ್ರಾಂಚೈಸಿ ಮಾಲೀಕರಿಂದ ನೀಡಲ್ಪಟ್ಟ ಉಚಿತ ಅಥವಾ ಗೌಯ್ರವ ಟಿಕೆಟ್ ಗಳಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವಿಧಿಸಬೇಕು ಎಂದು ಅಥಾರಿಟಿ ಫಾರ್  ಅಡ್ವಾನ್ಸ್ ರೂಲಿಂಗ್ (ಎಎಆರ್) ಆದೇಶಿಸಿದೆ.
ಐಪಿಎಲ್ ಲ್ರಿಕೆಟ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮಾಲೀಕ ವ ಕೆ.ಪಿ.ಪಿ ಡ್ರೀಮ್ ಕ್ರಿಕೆಟ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ ಅರ್ಜಿಯ ಪ್ರತಿಕ್ರಿಯೆಯಾಗಿ, ಎಎಆರ್ ಹೇಳಿಕೆ ನಿಡಿದೆ. ಉಚಿತ ಅಥವಾ ಗೌರವ ಟಿಕೆಟ್ ನೀಡುವ ವ್ಯವ್ಬಸ್ಥೆಯು ಸೇವೆಯ ಪೂರೈಕೆ ಎನ್ನುವ ಅರ್ಥವ್ಯಾಪ್ತಿಯನ್ನು ಪಡೆದುಕೊಳ್ಳುತ್ತದೆ ಹೀಗಾಗಿ ಅದಕ್ಕೆ ಸರಕು ಸೇವಾ ತೆರಿಗೆ ವ್ಯಾಪ್ತಿಗೆ ಬರಲಿದೆ ಎಂದು ಅದು ಹೇಳಿದೆ.
ಐಪಿಎಲ್ ಟಿಕೆಟ್ ಗಳ ಮಾರಾಟದ ಮೇಲಿನ ಜಿಎಸ್ಟಿ ದರವು ಶೇಕಡಾ 18 ಆಗಿದೆ.
ಇನ್ನು ಇಂತಹಾ ಟಿಕೆಟ್ ಗಳ ಇನ್ ಪುಟ್ ಹಾಗೂ ಇನ್ ಪುಟ್ ಸೇವೆಗೆ ಮಾತ್ರವೇ ಉಚಿತ, ಗೌರವ ಟಿಕೆಟ್ ಗಾಗಿ ಪಾವತಿಸಿದ ತೆರಿಗೆಗಳ ಮರುಪಾವತಿ ಪಡೆಯಲು  ಪಿ ಪಿ ಎಚ್ ಡ್ರೀಮ್ ಕ್ರಿಕೆಟ್ ಅರ್ಹತೆ ಪಡೆಯುತ್ತದೆ ಎಂದು ಎಎಆರ್ ಹೇಳಿದೆ. ವಿವಿಧ ವ್ಯಕ್ತಿಗಳಿಗೆ ಕೆ.ಪಿ.ಪಿ ಡ್ರೀಮ್ ಕ್ರಿಕೆಟ್ ನೀಡಿದಉಚಿತ ಹಾಗೂ ಗೌರವ ಟಿಕೆಟ್ ಗಳು ಜಿಎಸ್ಟಿ ತೆರಿಗೆ ವ್ಯಾಪ್ತಿಗೆ ಬರಲಿದೆ ಎನ್ನುವುದು ಜಿಎಸ್ಟಿ ಕಾನೂನಿನಲ್ಲಿನ ನಿಯಮಗಳಿಂದ ಖಚಿತವಾಗಲಿದೆ.
ಎಎಆರ್ ಆದೇಶದ ಬಗ್ಗೆ ಪ್ರತಿಕ್ರಯಿಸಿದ ಇವೈ  ತೆರಿಗೆ ಪಾಲುದಾರ ಅಭಿಷೇಕ್ ಜೈನ್ “ಜಿಎಸ್ಟಿ ಕಾನೂನಿನಡಿಯಲ್ಲಿ ಸಂಬಂಧವಿಲ್ಲದ ವ್ಯಕ್ತಿಗಳಿಗೆ ಅಥವಾ ಪಕ್ಷಕ್ಕೆ ನೀಡಲ್ಪಡುವ ಸೇವೆಗಳ ಕುರುಇತು ಜಿಎಸ್ಟಿ ಲೆವಿ ಇರುವುದಿಲ್ಲ.ಇಂತಹ ವೇಳೆ ಉದ್ಯಮವು ಅಳವಡಿಸಿಕೊಂಡಿರುವ ಯಾವುದೇ ಜಿಎಸ್ಟಿ ನಿಯಮಾವಳಿಗೆ ಈ ಕಾನೂನು ಅನ್ವಯವಾಗುವುದಿಲ್ಲ”

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ