ಬೆಂಗಳೂರು: ಮಂಡ್ಯ ಲೋಕಸಭೆ ಉಪ ಚುನಾವಣೆಗೆ ಮಾಜಿ ಶಾಸಕ ಎಲ್.ಆರ್ ಶಿವರಾಮೇಗೌಡ ಅವರನ್ನು ಜೆಡಿಎಸ್ನ ಅಭ್ಯರ್ಥಿಯಾಗಿ ಘೋಷಣೆಮಾಡಲಾಗಿದೆ.
ಈ ಮೊದಲು ಮಂಡ್ಯದಿಂದ ಐಆರ್ಎಸ್ ಅಧಿಕಾರಿಲಕ್ಷ್ಮೀ ಅಶ್ವಿನ್ ಗೌಡ ಅವರ ಹೆಸರು ಜೆಡಿಎಸ್ ನಿಂದ ಬಲವಾಗಿ ಕೇಳಿಬಂದಿತ್ತು. ಆದರೆ ಅಂತಿಮವಾಗಿ ಶಿವರಾಮೇಗೌಡರಿಗೆ ಜೆಡಿಎಸ್ ಟಿಕೆಟ್ ನೀಡಿದೆ.
ಶಿವರಾಮೇಗೌಡರು ಮಂಡ್ಯ ರಾಜಕಾರಣದಲ್ಲಿ ಪಳಗಿದವರಾಗಿದ್ದು, ಮಾಜಿ ಸಚಿವ ಚೆಲುವರಾಯಸ್ವಾಮಿ ವಿರುದ್ಧವೇ ರಾಜಕಾರಣ ಮಾಡಿಕೊಂಡು ಬಂದು ಜಿಲ್ಲೆಯಲ್ಲಿ ತಮ್ಮದೇ ಪ್ರಭಾವ ವಲಯ ಹೊಂದಿದ್ದಾರೆ. ಜೆಡಿಎಸ್ನ ಭದ್ರ ನೆಲೆಯಾಗಿರುವ ಮಂಡ್ಯವನ್ನು ಉಳಿಸಿಕೊಂಡು ಹೊಗಬೇಕಿದ್ದರೆ, ಶಿವರಾಮೇಗೌಡರಂಥ ಆಕ್ರಮಣಕಾರಿ ಪ್ರವೃತ್ತಿಯ ವ್ಯಕ್ತಿತ್ವದ ಅಭ್ಯರ್ಥಿ ಸ್ಪರ್ಧಿಸುವುದು ಅಗತ್ಯ ಎಂಬ ಕಾರಣಕ್ಕೆ ಜೆಡಿಎಸ್ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.