ಭಾರೀ ಹಿಮಪಾತಕ್ಕೆ 9 ಜನ ಹಿಮಸಮಾಧಿ

ಕಠ್ಮಂಡು: ಭಾರೀ ಹಿಮಪಾತ ಉಂಟಾದ ಹಿನ್ನಲೆಯಲ್ಲಿ ನೇಪಾಳದ ಗುರ್ಜಾ ಪರ್ವತವನ್ನು ಏರುತ್ತಿದ್ದ 5 ಪರ್ವತಾರೋಹಿಗಳೂ ಸೇರಿ 9 ಮಂದಿ ಹಿಮಸಮಾಧಿಯಾಗಿದ್ದಾರೆ.

ಮೃತಪಟ್ಟಿರುವ 9 ಮಂದಿಯ ಪೈಕಿ 5 ಮಂದಿ ದಕ್ಷಿಣ ಕೊರಿಯಾ ಪ್ರಜೆಗಳು, ಉಳಿದವರು ಅವರ ಸಹಾಯಕ್ಕೆ ನಿಯೋಜನೆಗೊಂಡಿದ್ದ ನೇಪಾಳ ಸಿಬ್ಬಂದಿ ಎಂದು ತಿಳಿದುಬಂದಿದೆ.

ಪಶ್ಚಿಮ ನೇಪಾಳದಲ್ಲಿರುವ ಗುರ್ಜಾ ಪರ್ವ 7193 ಮೀಟರ್ ಎತ್ತರವಿದೆ. ಈ ಪರ್ವತವನ್ನು ಏರುವ ಉದ್ದೇಶದಿಂದ 3500 ಮೀಟರ್ ಎತ್ತರದ ಬೇಸ್ ಕ್ಯಾಂಪ್ ತಲುಪಿದ್ದ ಪರ್ವತಾರೋಹಿಗಳು ಸೂಕ್ತ ವಾತಾವರಣಕ್ಕಾಗಿ ಶುಕ್ರವಾರ ಕಾಯುತ್ತಿದ್ದರು. ಆ ಸಂದರ್ಭದಲ್ಲಿ ಭಾರಿ ಹಿಮಪಾತ ಸಂಭವಿಸಿದ್ದು, ಹಿಮ ಪರ್ವತಗಳು ಕುಸಿದುಬಿದ್ದಿವೆ. ಪರಿಣಾಮ ಐದು ಪರ್ವತಾರೋಹಿಗಳೂ ಸಾವನ್ನಪ್ಪಿದ್ದಾರೆ.

Nine climbers die,avalanche hits, Nepal’s Mount Gurja peak

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ