ಮೇಯರ್ ಅವಧಿ ಕೇವಲ ಒಂದೇ ವರ್ಷಾನಾ: ಹಿಡಿಲ್ ಬರ್ಗ್ ನಗರದ ಉಪಮಹಾಪೌರರ ಅಚ್ಚರಿ

ಬೆಂಗಳೂರು, ಅ.13-ವಾಟ್! ಸಿಲಿಕಾನ್ ಸಿಟಿಯ ಮೇಯರ್ ಅವಧಿ ಕೇವಲ ಒಂದೇ ವರ್ಷಾನಾ…..
ಹೀಗೆಂದು ಜರ್ಮನ್ ದೇಶದ ಹಿಡಿಲ್ ಬರ್ಗ್ ನಗರದ ಉಪಮಹಾಪೌರರಾದ ನಿಕೋಲಿ ಹ್ಯುಬರ್ ಅವರು ಅಚ್ಚರಿ ಪಟ್ಟರು.
11 ಸದಸ್ಯರ ತಂಡದೊಂದಿಗೆ ಅವರು ಇಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಈ ವೇಳೆ ಬಿಬಿಎಂಪಿ ಮೇಯರ್ ಅವಧಿ ಕೇವಲ ಒಂದೇ ವರ್ಷ ಎಂಬುದು ಗೊತ್ತಾದ ಕೂಡಲೇ ಅವರು ಆಶ್ಚರ್ಯ ವ್ಯಕ್ತಪಡಿಸಿದರು. ನಮ್ಮಲ್ಲಿ ಮೇಯರ್-ಉಪಮೇಯರ್ ಅವಧಿ 8 ವರ್ಷ ಇರುತ್ತದೆ. ಇಷ್ಟರಲ್ಲೇ ನಮಗೆ ಸಂಪೂರ್ಣ ಕೆಲಸ ಮಾಡಲಾಗುವುದಿಲ್ಲವಲ್ಲ ಎಂದು ಯೋಚಿಸುತ್ತೇವೆ. ಇಡೀ ವಿಶ್ವದಲ್ಲಿ ಸಿಲಿಕಾನ್ ಸಿಟಿ ಎಂದೇ ಗುರುತಿಸಿಕೊಂಡಿರುವ ಬೆಂಗಳೂರಿನ ಮೇಯರ್ ಅವಧಿ ಕೇವಲ ಒಂದು ವರ್ಷವೇ? ಇಷ್ಟರಲ್ಲಿ ಯಾವ ಕೆಲಸ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

ಜರ್ಮನ್ ದೇಶದ ಶಿಕ್ಷಣ, ಸಂಸ್ಕøತಿ ಮತ್ತು ತಂತ್ರಜ್ಞಾನಗಳನ್ನು ಬೆಂಗಳೂರಿನಲ್ಲಿ ಅಳವಡಿಸಿಕೊಳ್ಳಿ. ಇದಕ್ಕೆ ನಾವು ಎಲ್ಲಾ ಸಹಕಾರ ನೀಡುತ್ತೇವೆ ಎಂದು ಹೇಳಿದ ಉಪಮೇಯರ್ ಹ್ಯುಬರ್ ನಮ್ಮ ದೇಶದ ಸಂಸ್ಕøತಿ ನಮ್ಮ ನಗರಗಳು ಹೇಗೆ ಮುಂದುವರೆದಿವೆ ಎಂಬುದು ಗೊತ್ತಾಗಬೇಕಾದರೆ ಒಂದು ನಿಯೋಗವನ್ನು ಅಲ್ಲಿಗೆ ಕಳುಹಿಸಿಕೊಡಿ ಎಂದು ಮೇಯರ್ ಗಂಗಾಂಬಿಕೆ ಅವರಲ್ಲಿ ಮನವಿ ಮಾಡಿದರು.

ಉಪಮೇಯರ್ ನಿಯೋಗವು ಬೆಂಗಳೂರು ನಗರದೊಂದಿಗೆ ಶಿಕ್ಷಣ, ಸಂಸ್ಕøತಿ, ತಂತ್ರಜ್ಞಾನ, ತಾಂತ್ರಿಕ ಕ್ಷೇತ್ರದಲ್ಲಿ ಸಹಭಾಗಿತ್ವ ಹೊಂದುವ ಬಗ್ಗೆ ಪ್ರಸ್ತಾಪಿಸಿದ್ದು, ಈ ಕುರಿತು ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸಲಾಗುವುದು, ಈ ಕುರಿತು ಒಡಂಬಡಿಕೆ ಮಾಡಿಕೊಳ್ಳಲು ಆಸಕ್ತಿ ಹೊಂದಿರುವುದಾಗಿ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ