ಬೆಂಗಳೂರು,ಅ.13- ಬೆಂಗಳೂರು ಬುಕ್ ಸೆಲ್ಲರ್ ಅಂಡ್ ಪಬ್ಲಿಕೇಷನ್ ಅಸೋಸಿಯೇಷನ್, ಇಂಡಿಯನ್ ಕಾರ್ನಿಕ್ ಸಹಯೋಗದಲ್ಲಿ ಅ.15ರಿಂದ 21ರವರೆಗೆ ಬೆಂಗಳೂರು ಪುಸ್ತಕೋತ್ಸವ ಮೇಳವನ್ನು ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಬೆಂಗಳೂರು ಪುಸ್ತಕ ಮಾರಾಟಗಾರರು ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷ ಎ.ಎನ್.ರಾಮಚಂದ್ರ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಪುಸ್ತಕೋತ್ಸವದಲ್ಲಿ 270ಕ್ಕೂ ಅಧಿಕ ಮಳಿಗೆಗಳಿದ್ದು 10 ಲಕ್ಷಕ್ಕೂ ಹೆಚ್ಚು ಪುಸ್ತಕಗಳ ಪ್ರದರ್ಶನವಿರುತ್ತದೆ. ಓದುವ ಹವ್ಯಾಸವನ್ನು ಉತ್ತೇಜಿಸುವುದು ಈ ಮೇಳದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.
ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಬಂಗಾಲಿ, ಸಂಸ್ಕøತ, ಹಿಂದಿ,ಇಂಗ್ಲಿಷ್ ಸೇರಿದಂತೆ ಪ್ರಮುಖ ಭಾಷೆಯ ವಿವಿಧ ಪ್ರಕಾರದ ಪುಸ್ತಕಗಲು ಲಭ್ಯವಿರುತ್ತದೆ.
ಕನ್ನಡ ಪುಸ್ತಕಗಳಿಗೆ ಶೇ.50ರಷ್ಟು ರಿಯಾಯ್ತಿಯನ್ನು ನಿಗದಿ ಮಾಡಲಾಗಿದೆ. ಶಾಲಾ ಮಕ್ಕಳು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶವಿದ್ದು ಇತರರಿಗೆ 20 ರೂ. ದರ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
ಕೇಂದ್ರ ಸಾಹಿತ್ಯ ಪರಿಷತ್ ಅಧ್ಯಕ್ಷ ಸಾಹಿತಿ ಚಂದ್ರಶೇಖರ್ ಕಂಬಾರ್ ವಹಿಸಲಿದ್ದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ವಸುಂಧರಾ ಭೂಪತಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನುಬಳಿಗಾರ್ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ಪುಸ್ತಕ ಮಾರಾಟಗಾರರು ಮತ್ತು ಪ್ರಕಾಶಕರ ಸಂಘದ ಕಾರ್ಯದರ್ಶಿ ಎಸ್.ಹರೀಂದ್ರ, ಬೆಂಗಳೂರು ಪುಸ್ತಕೋತ್ಸವದ ನಿರ್ದೇಶಕ ಬಿ.ಎಸ್.ರಘುರಾಮ್ ಉಪಸ್ಥಿತರಿದ್ದರು.