ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ವಿರುದ್ಧ ಸಿಎಂ ಗರಂ

ಬೆಂಗಳೂರು,ಅ.13- ಪ್ರಾಮಾಣಿಕ ಅಧಿಕಾರಿ ಪೆÇನ್ನುರಾಜ್ ಪರ ನಿಂತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ವಿರುದ್ಧ ಗರಂ ಆದ ಪ್ರಸಂಗ ನಡೆದಿದೆ.

ಬಿಎಂಟಿಸಿ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅಧಿಕಾರಿ ಪರ ಸಿಎಂ ಮಾತನಾಡಿ, ಅವರ ಮೇಲೆ ವಿಶ್ವಾಸವಿದೆ. ನೀವು ಕೆಲಸ ಮಾಡಿ ಎಂದು ಸಚಿವರಿಗೆ ತಾಕೀತು ಮಾಡಿದ್ದಾರೆ. ಇದರಿಂದ ವಿಚಲಿತರಾದ ಸಚಿವರು ಆತುರದಲ್ಲಿ ಸಭೆ ಮುಗಿಸಿದ್ದಾರೆ.

ಬಿಎಂಟಿಸಿಗೆ ಅಗತ್ಯವಿರುವ 80 ವಿದ್ಯುತ್ ಚಾಲಿತ ಬಸ್ ಸಂಬಂಧ ನಡೆದ ಚರ್ಚೆಯಲ್ಲಿ ಅಧಿಕಾರಿ ಪೆÇನ್ನುರಾಜ್ ಬಸ್‍ಗಳನ್ನು ಸ್ವಂತಕ್ಕೆ ಖರೀದಿಸದೆ ಗುತ್ತಿಗೆ ಪಡೆಯಲು ಸೂಚಿಸಿದ್ದಾರೆ. ಆದರೆ ಸ್ವಂತಕ್ಕೆ ಖರೀದಿಸುವಂತೆ ಸಚಿವರು ಸಲಹೆ ನೀಡಿದ್ದರು.

ಬಸ್‍ಗಳ ಖರೀದಿಗೆ ಕೇಂದ್ರದಿಂದ ಶೇ.60ರಷ್ಟು ಅನುದಾನ ದೊರೆತರೂ ಉಳಿದ 40ರಷ್ಟನ್ನು ರಾಜ್ಯ ಸರ್ಕಾರ ಭರಿಸಬೇಕಿದೆ. ರಾಜ್ಯ ಸರ್ಕಾರದ ಸಾಲಮನ್ನಾ ಯೋಜನೆಗಾಗಿ ಸಾಕಷ್ಟು ಹೊರೆ ಇರುವ ಹಿನ್ನೆಲೆಯಲ್ಲಿ ಇದಕ್ಕೂ ಹಣ ಹೊಂದಿಸುವುದು ಕಷ್ಟವಾಗಿದೆ ಎಂಬ ಕಾರಣಕ್ಕೆ ಬಸ್‍ಗಳನ್ನು ಗುತ್ತಿಗೆಗೆ ಪಡೆಯಲು ಅಧಿಕಾರಿ ಪೆÇನ್ನುರಾಜ್ ಸೂಚಿಸಿದ್ದರು.

ಅಲ್ಲದೆ ವೋಲ್ವೊ ಬಸ್‍ಗಳ ಯೋಜನೆಗೂ ಕೇಂದ್ರ ಸರ್ಕಾರ ಪಾಲು ಕೊಡುತ್ತದೆ ಎನ್ನಲಾಗಿತ್ತು. ಆದರೆ ವೋಲ್ವೊ ಬಸ್‍ಗಳಿಂದ ಸಾಕಷ್ಟು ನಷ್ಟವಾಗಿದೆ. ವಿದ್ಯುತ್ ಬಸ್‍ಗಳಿಂದಲೂ ನಷ್ಟವಾದರೆ ಏನು ಮಾಡುವುದು ಎಂಬ ಮುಂದಾಲೋಚನೆಯಿಂದ ಅದನ್ನು ಖರೀದಿಸದಿರಲು ಅಧಿಕಾರಿಗಳು ಚಿಂತನೆ ನಡೆಸಿದ್ದರು.

ಈ ವಿಷಯವಾಗಿ ನಡೆದ ಚರ್ಚೆಯಲ್ಲಿ ಸಚಿವರು ಬಸ್ ಖರೀದಿಗೆ ಸೂಚಿಸಿದ್ದರಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವೃಥಾ ಪ್ರಾಮಾಣಿಕ ಅಧಿಕಾರಿ ವಿರುದ್ದ ಆರೋಪ ಮಾಡಬೇಡಿ ಎಂದು ಡಿ.ಸಿ.ತಮ್ಮಣ್ಣ ಅವರಿಗೆ ಎಚ್ಚರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ