
ಬೆಂಗಳೂರು, ಅ.12-ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಬೆಂಕಿಯಿಂದ ಹೊತ್ತಿ ಉರಿದು ಭಾಗಶಃ ಹಾನಿಯಾಗಿರುವ ಘಟನೆ ಬನಶಂಕರಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕದಿರೇನಹಳ್ಳಿಯ ಭವಾನಿ ನಗರದ 2ನೇ ಕ್ರಾಸ್‍ನ ಮನೆ ಮುಂದೆ ರಾತ್ರಿ ಎಂದಿನಂತೆ ಬೈಕ್ ನಿಲ್ಲಿಸಲಾಗಿತ್ತು.
ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ಈ ಬೈಕ್ ಬೆಂಕಿ ಹೊತ್ತಿ ಉರಿದಿದ್ದು, ಭಾಗಶಃ ಹಾನಿಯಾಗಿದೆ.
ಬ್ಯಾಟರಿ ಕಿಡಿಯಿಂದ ಬೆಂಕಿ ಕಾಣಿಸಿಕೊಂಡಿದೆಯೋ ಅಥವಾ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೋ ಎಂಬ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಬನಶಂಕರಿ ಠಾಣೆ ಪೆÇಲೀಸರು ತನಿಖೆ ಕೈಗೊಂಡಿದ್ದಾರೆ.