ನವದೆಹಲಿ: ಭಾರತದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಫ್ರಾನ್ಸ್ ಪ್ರವಾಸದ ಮುನ್ನವೇ ರಫೇಲ್ ಡೀಲ್ ಕುರಿತಾಗಿ ಮತ್ತಷ್ಟು ರಹಸ್ಯ ಸಂಗತಿಗಳು ಹೊರಬೀಳುತ್ತಿವೆ.
ರಫೇಲ್ ಡೀಲ್ನಲ್ಲಿ ಫ್ರಾನ್ಸ್ನ ಏರೋಸ್ಪೇಸ್ ಡಸಾಲ್ಟ್ ಏವಿಯೇಷನ್ಗೆ ರಿಲಯನ್ಸ್ ಡಿಫೆನ್ಸ್ ಜೊತೆಗಿನ ಸಹಭಾಗಿತ್ವ ಕಡ್ಡಾಯವಾಗಿತ್ತು ಎನ್ನುವ ವಿಚಾರ ಬೆಳಕಿಗೆ ಬಂದಿದೆ.
ಸದ್ಯ ಈ ಅಚ್ಚರಿಯ ಸಂಗತಿಯನ್ನು ಫ್ರೆಂಚ್ ಮಾಧ್ಯಮಗಳು ವರದಿ ಮಾಡಿವೆ. ರಫೇಲ್ ಡೀಲ್ ಕುರಿತಾದ ತನಿಖಾ ವರದಿಯ ಆಧಾರದಲ್ಲಿ ಈ ಸುದ್ದಿ ಬಿತ್ತರವಾಗಿದೆ.
ರಫೇಲ್ ಡೀಲ್ ಕುರಿತಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಸದ್ಯ ಭಾರತದ ಸುಪ್ರೀಂ ಕೋರ್ಟ್ನಲ್ಲಿ ನಡೆಯುತ್ತಿದ್ದು, ನಿನ್ನೆ ಮೊದಲ ವಿಚಾರಣೆ ನಡೆದಿದೆ. ಡೀಲ್ ಕುರಿತಾದ ನಿರ್ಧಾರದ ಹಂತಗಳನ್ನು ಕೋರ್ಟ್ಗೆ ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.