ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡ ಚಿತ್ರರಸಿಕರ ಮನ ಗೆದ್ದಿರುನ ಅಶ್ವಿನ್ ರಾವ್ ಪಲ್ಲಕ್ಕಿಯವರು ‘ಫೋಟೋಗ್ರಾಫರ್ ಪಾಂಡು’ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕರಾಗಿ ಸ್ಯಾಂಡಲ್’ವುಡ್’ಗೆ ಮಾಡುತ್ತಿದ್ದಾರೆ.
ವಿರಾಟ್ ಮಂಜುನಾಥ್ ಅವರು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಅಶ್ವಿನ್ ಅವರು ಫೋಟೋಗ್ರಾಫರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರ 80ರ ದಶಕದ ಕಲ್ಪನೆಗಳನ್ನು ಹಿಂಬಾಲಿಸುತ್ತದೆ. ಚಿತ್ರದಲ್ಲಿ ವಿನೋದಮಯ ಅಂಶಗಳನ್ನು ವೈವಿಧ್ಯಗೊಳಿಸಲಾಗಿದೆ ಎಂದು ಅಶ್ವಿನ್ ಅವರು ಹೇಳಿದ್ದಾರೆ.
ಚಿತ್ರದ ಕಥೆಯನ್ನು ವಿರಾಟ್ ಹೇಳಲು ಆರಂಭಿಸಿದ್ದರು. ಈ ವೇಳೆ ನನ್ನ ಪಾತ್ರವೇನು ಎಂದು ಅವರನ್ನು ಕೇಳಿದ್ದೆ. ಈವೇಳೆ ಅವರು ಪ್ರಮುಖ ಪಾತ್ರವೆಂದೇ ಹೇಳಿದ್ದರು. ಇದು ನನಗೆ ಸಾಕಷ್ಟು ಅಚ್ಚರಿಯನ್ನುಂಟು ಮಾಡಿತ್ತು. ಈ ವೇಳೆ ಇಂತಹ ದೊಡ್ಡ ಜವಾಬ್ದಾರಿಯನ್ನು ನಾನು ನಿಭಾಯಿಸಬಲ್ಲೆನೇ ಎಂಬ ಸಂಶಯ ಕೂಡ ನನ್ನಲ್ಲಿ ಮೂಡಿತ್ತು. ಇದೀಗ ಶೇ.70 ರಷ್ಟು ಚಿತ್ರೀಕರಣ ಮುಕ್ತಾಯಗೊಂಡಿತ್ತು. ನನ್ನಲ್ಲಿದ್ದ ಆತ್ಮವಿಶ್ವಾಸ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.