ಗಂಜಾಮ್ ನಿಂದ ವಿಶೇಷ ಆಭರಣಗಳ ಪ್ರದರ್ಶನ

ಬೆಂಗಳೂರು, ಅ.11-ಅಂತಾರಾಷ್ಟ್ರೀಯ ಆಭರಣ ಉತ್ಪನ್ನವಾಗಿರುವ ಗಂಜಾಮ್ ಅಂತಾರಾಷ್ಟ್ರೀಯ ಪಕ್ಷಿ ವರ್ಷಾಚರಣೆಗೆ ಮುಂದಾಗಿದೆ.
ತಲೆಮಾರುಗಳಿಂದ ಕಲಾವಿದರಿಗೆ, ಕಲಾಕಾರರಿಗೆ ಸ್ಫೂರ್ತಿಯಾಗಿ ಬಂದಿರುವ ಗಂಜಾಮ್ ನಾಲ್ಕು ಅತ್ಯಾಕರ್ಷಕ ಸಂಗ್ರಹದೊಂದಿಗೆ ಸೃಜನಶೀಲತೆ ಶೈಲಿಯಲ್ಲಿ ವಿಶೇಷ ಆಭರಣಗಳನ್ನು ಜನರ ಮುಂದಿಡಲು ನಿರ್ಧರಿಸಿದೆ.

ಅಸಂಖ್ಯಾತ ಛಾಯೆಗಳು ಹಾಗೂ ಆಕರ್ಷಕ ರೇಖೆಗಳಲ್ಲಿ ಸಿದ್ಧವಾದ ಕಿವಿಯೋಲೆ, ನೆಕ್ಲೆಸ್‍ಗಳು, ಬ್ರೋಚಸ್, ಬ್ರೇಸ್‍ಲೆಟ್ ಹಾಗೂ ಉಂಗುರಗಳನ್ನು ಪ್ರದರ್ಶನಕ್ಕಿಟ್ಟಿದೆ.

ಈ ಪ್ರದರ್ಶನವು ಅ.13 ಮತ್ತು 14 ರಂದು ರಾಜಾಜಿನಗರದ ಹೊಟೇಲ್ ಶೆರಟಾನ್ ಗ್ರ್ಯಾಂಡ್‍ನ ಸೆರೆಸ್ ಸಭಾಂಗಣದಲ್ಲಿ ಬೆಳಿಗ್ಗೆ 11 ರಿಂದ ರಾತ್ರಿ 8 ಗಂಟೆಯವರೆಗೆ ನಡೆಯಲಿದೆ.

22 ಕೆಟಿ ಹಾಗೂ 18 ಕೆಟಿ ಚಿನ್ನದಲ್ಲಿ ಸಿದ್ಧಪಡಿಸಿದ ಆಭರಣಗಳು ಇವಾಗಿದ್ದು, ಗಂಜಾಮ್ ಎಫ್ ವರ್ಣದ ಪ್ಲಾಟಿನಂ ಸೆಟ್ ಸಂಗ್ರಹದ ಜೊತೆಗೆ ವಿವಿಎಸ್ ವಜ್ರಗಳು ಹಾಗೂ ರೋಮಾಂಚಕ ರತ್ನದ ಕಲ್ಲುಗಳು ಸಹ ಲಭ್ಯವಿದೆ. ಕಳೆದ 128 ವರ್ಷದಲ್ಲಿ ಗಂಜಾಮ್ ದೇಶದ ಒಂದು ಪ್ರತಿಷ್ಠಿತ ಆಭರಣ ಉತ್ಪನ್ನವಾಗಿ ರೂಪುಗೊಂಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ