ಆನ್‌ಲೈನ್ ಲೈಬ್ರರಿ ತರಲು ಕ್ರಮ: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ತುಮಕೂರು: ಪ್ರಪಂಚದ ಯಾವುದೇ ಭಾಗದಲ್ಲಿ ಪುಸ್ತಕ ಪ್ರಕಟಗೊಂಡರೂ ಆನ್‌ಲೈನ್‌ ಮೂಲಕವೇ ಓದುವ ವ್ಯವಸ್ಥೆಯನ್ನು ತುಮಕೂರಿನಲ್ಲಿ ಇನ್ನು ಮೂರು ತಿಂಗಳೊಳಗಾಗಿ ತರಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.

ಗುರುವಾರ ಬಾಲಭವನದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ಡಿಜಿಟಲ್ ಗ್ರಂಥಗಳು ಹಾಗೂ ಸ್ಮಾರ್ಟ್‌‌ಸಿಟಿ ಡಿಜಿಟಲ್ ಗ್ರಂಥಾಲಯ ಲೋಕಾರ್ಪಣೆ ಗೊಳಿಸಿ ಮಾತನಾಡಿದರು.

ಆಧುನಿಕ ಯುಗದಲ್ಲಿ ಡಿಜಿಟಲ್ ಗ್ರಂಥಾಲಯಗಳ ಅಗತ್ಯತೆ ಇದೆ.‌ಈ ನಿಟ್ಟಿನಲ್ಲಿ ತುಮಕೂರು ಹೆಜ್ಜೆ ಇಟ್ಟಿರುವುದು ಶ್ಲಾಘನೀಯ.

ಎಲ್ಲರೂ ವಿಶ್ವವಿದ್ಯಾಲಯಕ್ಕೆ ತೆರಳಿ ಓದಲು‌ಸಾಧ್ಯವಿಲ್ಲ.‌ಅದಕ್ಕಾಗಿಯೇ ಸಾರ್ವಜನಿಕ ಗ್ರಂಥಾಲಯ ತೆರೆಯಲಾಯಿತು. ಈ ಗ್ರಂಥಾಲಯಗಳೇ ಸಾರ್ವಜನಿಕರ ವಿಶ್ವವಿದ್ಯಾಲಯಗಳಾಗಿವೆ. ಈ ಗ್ರಂಥಾಲಯಗಳನ್ನು ಇನ್ನಷ್ಟು ಜನಸ್ನೇಹಿ ಮಾಡಿದರೆ ಉತ್ತಮ‌ ಎಂದರು.

ಗ್ರಂಥಾಲಯ ಮೇಲ್ವಿಚಾರಕರು ತಮ್ಮ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಈಗಾಗಲೇ ಸರಕಾರ ಈ ಸಂಬಂಧ ಕ್ರಮಕ್ಕೆ ಮುಂದಾಗಿದೆ. ಆದರೆ ಮೇಲ್ವಿಚಾರಕರು ನೋಂದಣಿ‌ ಮಾಡಿಸುವ ಸಂಖ್ಯೆ ಹೆಚ್ಚಿಸಬೇಕು‌ ಎಂದರು.

ಇದೇವೇಳೆ ಸದಸ್ಯತ್ವ ನೋಂದಣಿಗೆ ಚಾಲನೆ, ಜಿಲ್ಲಾ ಕೇಂದ್ರ ಗ್ರಂಥಾಲಯದ ವಿಸ್ತರಣಾ ಕಟ್ಟಡದ ಶಂಕುಸ್ಥಾಪನೆ, ಶಾಖಾ ಗ್ರಂಥಾಲಯ ಉದ್ಘಾಟನೆ ನೆರವೇರಿಸಲಾಯಿತು.

ಸಂಸದ ಮುದ್ದ ಹನುಮೇಗೌಡ, ಸರಕಾರದ ಪ್ರಧಾನ ಕಾರ್ಯದರ್ಶಿ , ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ