‘ದ ಟೆರರಿಸ್ಟ್’ ಗೆ ಪೊಲೀಸರ ಮೊರೆ ಹೋಗಿದ್ದ ನಿರ್ದೇಶಕ ಪಿ ಸಿ ಶೇಖರ್
October 9, 2018VDಮನರಂಜನೆComments Off on ‘ದ ಟೆರರಿಸ್ಟ್’ ಗೆ ಪೊಲೀಸರ ಮೊರೆ ಹೋಗಿದ್ದ ನಿರ್ದೇಶಕ ಪಿ ಸಿ ಶೇಖರ್
Seen By: 78
ದ ಟೆರರಿಸ್ಟ್ ಎಂದು ಚಿತ್ರದ ಶೀರ್ಷಿಕೆ ಇಟ್ಟುಕೊಂಡು ಸ್ಯಾಂಡಲ್ ವುಡ್ ನಿರ್ದೇಶಕ ಪಿ ಸಿ ಶೇಖರ್ ಈ ಮುಂದಿನ ವಾರ ಚಿತ್ರ ತರುತ್ತಿದ್ದಾರೆ. ಚಿತ್ರಕ್ಕೆ ಟೆರರಿಸ್ಟ್ ಎಂದು ಶೀರ್ಷಿಕೆಯಿಡುವಾಗ ಅದಕ್ಕೆ ಎದುರಾಗಬಹುದಾದ ಟೀಕೆಗಳು, ವಿರೋಧಗಳ ಬಗ್ಗೆ ಅವರಿಗೆ ಅರಿವಿತ್ತಂತೆ.ವಿಜಯದಶಮಿ ದಿನ ರಾಜ್ಯಾದ್ಯಂತ ತೆರೆ ಕಾಣುತ್ತಿರುವ ಚಿತ್ರದ ಬಗ್ಗೆ ಮಾತನಾಡಿದ ಅವರು, ಟೆರರಿಸ್ಟ್ ಅನ್ನುವ ಪದ ಇಂದು ಸಾಮಾನ್ಯವಾಗಿದೆ, ಪ್ರತಿನಿತ್ಯವೆಂಬಂತೆ ನಾವು ಈ ಪದವನ್ನು ಕೇಳುತ್ತೇವೆ. ನಮ್ಮ ದೇಶವನ್ನು ಇಂದು ಕಾಡುತ್ತಿರುವ ಸಮಸ್ಯೆಗಳಲ್ಲಿ ಪ್ರಮುಖವಾದುದು ಭಯೋತ್ಪಾದನೆಯಾಗಿದೆ ಎನ್ನುತ್ತಾರೆ.ಈ ಶೀರ್ಷಿಕೆಯನ್ನಿಟ್ಟುಕೊಂಡು ಫಿಲ್ಮ್ ಚೇಂಬರ್ ಮತ್ತು ಸೆನ್ಸಾರ್ ಬೋರ್ಡ್ ಗೆ ಹೋದಾಗ ಅಲ್ಲಿನ ಅಧಿಕಾರಿಗಳು ಕೂಡ ಪ್ರಶ್ನಿಸಿದ್ದರಂತೆ. ಚಿತ್ರವನ್ನು ವೀಕ್ಷಿಸಿ ಪ್ರಮಾಣಪತ್ರ ನೀಡುವಾಗಲೂ ಸಮಯ ಹಿಡಿಯಿತ್ತಂತೆ. ಆದರೆ ಯಾವುದೇ ಕಟ್ ಗಳಿಲ್ಲದೆ ಯು/ಎ ಸರ್ಟಿಫಿಕೇಟ್ ಸಿಕ್ಕಿದ ಖುಷಿಯಲ್ಲಿದ್ದಾರೆ.ಚಿತ್ರ ವಾಸ್ತವಕ್ಕೆ ಹತ್ತಿರವಾದ್ದರಿಂದ ಹೊರಭಾಗದಲ್ಲಿಯೇ ಹೆಚ್ಚು ಚಿತ್ರೀಕರಣವಾಗಬೇಕಾದ್ದರಿಂದ ಪೊಲೀಸರ ಅನುಮತಿ ಪಡೆಯಬೇಕಾಯಿತಂತೆ. ಮೆಜೆಸ್ಟಿಕ್ ಅಥವಾ ಕೆ ಆರ್ ಮಾರುಕಟ್ಟೆಯಂತಹ ಜನನಿಬಿಡ ಪ್ರದೇಶಗಳಲ್ಲಿ ಬಾಂಬ್ ತರಹದ ವಸ್ತುಗಳನ್ನಿಡಬೇಕಾಗಿತ್ತು. ಇದಕ್ಕಾಗಿ ವಿವಿಧ ಪೊಲೀಸ್ ಠಾಣೆಗಳಿಂದ ಅನುಮತಿ ಪಡೆಯಬೇಕಾಗಿತ್ತು. ಚಿತ್ರದ ಅವಶ್ಯಕತೆ ಬಗ್ಗೆ ಪೊಲೀಸರಿಗೆ ವಿವರಿಸಬೇಕಾಗಿತ್ತು. ಪೊಲೀಸರಿಂದ ನನಗೆ ಪ್ರೋತ್ಸಾಹ ಸಿಕ್ಕಿತು. ಎಲ್ಲದಕ್ಕೂ ಸಹಕರಿಸಿದರು ಎಂದರು. ಇಲ್ಲಿಯವರೆಗೆ ಮಾಡಿರುವ ಸಿನಿಮಾಗಳಲ್ಲಿ ಇದು ಶೇಖರ್ ಅವರಿಗೆ ಕಠಿಣವಾದದ್ದಾಗಿತ್ತಂತೆ.
October 6, 2018VDಮನರಂಜನೆComments Off on ‘ದಿ ವಿಲನ್’ ಗೆ ಎದುರಾಗಿ ರಾಗಿಣಿಯ ‘ದಿ ಟೆರರಿಸ್ಟ್’: ದಸರಾಗೆ ಸ್ಯಾಂಡಲ್ ವುಡ್ ಡಬಲ್ ಧಮಾಕಾ
Seen By: 164 ಬೆಂಗಳೂರು: ದಸರಾ ಸಂಭ್ರಮಕ್ಕೆ ಕನ್ನಡ ಚಿತ್ರರಸಿಕರ ಬಹುನಿರೀಕ್ಷೆಯ ಚಿತ್ರ ಹ್ಯಾಟ್ರಿಕ್ ಹೀರೋ ಶಿವಣ್ಣನ “ದಿ ವಿಲನ್” ತೆರೆ ಮೇಲೆ ಬರಲು ಸಿದ್ದವಾಗಿದೆ.ಜೋಗಿ ಪ್ರೇಮ್ [more]