ಬೆಂಗಳೂರು, 09 ಅಕ್ಟೋಬರ್ 2018: ಭಾರತದ ಹೈನೋದ್ಯಮದಲ್ಲಿ ಮುಂಚೂಣಿಯಲ್ಲಿರುವ ಮತ್ತು ಪ್ರಮುಖವಾದ ಸಾವಯವ ಡೈರಿ ಉತ್ಪನ್ನಗಳ ಬ್ರ್ಯಾಂಡ್ ಎನಿಸಿರುವ ಅಕ್ಷಯಕಲ್ಪ ಮುಂದಿನ ಎರಡು ವರ್ಷಗಳಲ್ಲಿ ದೇಶದಲ್ಲಿ 500 ಕ್ಕೂ ಹೆಚ್ಚು ಡೈರಿಗಳನ್ನು ಆರಂಭಿಸುವ ಬೃಹತ್ ಯೋಜನೆಯನ್ನು ಘೋಷಿಸಿದೆ. ಪ್ರಸ್ತುತ 1000 ಎಕರೆ ಪ್ರದೇಶದಲ್ಲಿ ಡೈರಿ ಚಟುವಟಿಕೆಯಲ್ಲಿ ತೊಡಗಿರುವ ಅಕ್ಷಯಕಲ್ಪ, ಈ ಬೃಹತ್ ಯೋಜನೆ ಮೂಲಕ ತನ್ನ ಚಟುವಟಿಕೆಯನ್ನು 3000 ಎಕರೆಗೆ ಹೆಚ್ಚಿಸಿಕೊಳ್ಳಲಿದೆ. ಪ್ರಸ್ತುತ ಅಕ್ಷಯಕಲ್ಪ 1000 ಎಕರೆ ಪ್ರದೇಶದಲ್ಲಿ 200 ಡೈರಿಗಳನ್ನು ಹೊಂದಿದ್ದು, ಆಟೋಮೇಷನ್ ಮತ್ತು ಕ್ಲೌಡ್ ತಂತ್ರಜ್ಞಾನವನ್ನು ಹೊಂದಿವೆ. ಇದರಿಂದ ಪ್ರಾಕೃತಿಕ ಹಾಲು ಉತ್ಪಾದನೆ, ಮನುಷ್ಯನ ಕೈ ಸ್ಪರ್ಶವಿಲ್ಲದೇ, ಯಾವುದೇ ಆಂಟಿಬಯೋಟಿಕ್ ಮತ್ತು ಹಾರ್ಮೋನ್ಗಳಿಂದ ಮುಕ್ತವಾಗಿರುತ್ತವೆ. ಈ ಡೈರಿ ವಿಸûರಣಾ ಯೋಜನೆಯಿಂದಾಗಿ ಪ್ರಸ್ತುತ ಪ್ರತಿದಿನ 16,500 ಲೀಟರ್ ಹಾಲು ಉತ್ಪಾದನೆ ಬದಲಿಗೆ 1,00,000 ಲೀಟರ್ ಹಾಲನ್ನು ಮುಂದಿನ ಎರಡು ವರ್ಷಗಳಲ್ಲಿ ಉತ್ಪಾದಿಸಬಹುದಾಗಿದೆ.
ಬೆಂಗಳೂರಿನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಶ್ರೀ ಜಯದೇವ ಹೃದ್ರೋಗ ವಿಜ್ಞಾನಗಳು ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರೂ ಆಗಿರುವ ಖ್ಯಾತ ಹೃದ್ರೋಗ ತಜ್ಞರಾದ ಡಾ.ಸಿ.ಎನ್.ಮಂಜುನಾಥ್ ಅವರು ಅಕ್ಷಯಕಲ್ಪದ ಹೊಸ ಉತ್ಪನ್ನವಾದ ಲ್ಯಾಕ್ಟೋಸ್ ಫ್ರೀ ಫ್ರೆಶ್ ಮಿಲ್ಕ್ ಅನ್ನು ಬಿಡುಗಡೆ ಮಾಡಿದರು. ಈ ವೇಳೆ, ಅಕ್ಷಯಕಲ್ಪದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಶಶಿಕುಮಾರ್ ಅವರೂ ಸಹ ಇದ್ದರು.
ಅಕ್ಷಯಕಲ್ಪ s ಲ್ಯಾಕ್ಟೋಸ್ ಫ್ರೀ ಮಿಲ್ಕ್ ತಾಜಾತನದಲ್ಲಿ ಪೂರೈಕೆ ಮಾಡಲಿದ್ದು, ಹೆಚ್ಚು ಕಾಯಿಸುವುದಿಲ್ಲ ಅಂದರೆ ಬಿಸಿ ಮಾಡುವುದಿಲ್ಲ. ಪ್ರಸ್ತುತ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಲ್ಯಾಕ್ಟೋಸ್-ಫ್ರೀ ಮಿಲ್ಕ್ಗಿಂತ ಭಿನ್ನವಾದ ರೀತಿಯಲ್ಲಿ ಈ ಅಕ್ಷಯಕಲ್ಪ ಮಿಲ್ಕ್ ದೊರೆಯುತ್ತದೆ. ಫಾರ್ಮ್ ಫ್ರೆಶ್ ಮಿಲ್ಕ್, ಸ್ಲಿಮ್ ಮಿಲ್ಕ್, ಎ2 ಮಿಲ್ಕ್, ಎ2 ಸ್ಲಿಮ್ ಮಿಲ್ಕ್ ಮತ್ತು ಎ2 ಪ್ಯಾಸ್ಚರೈಸ್ಡ್ ಮಿಲ್ಕ್ಗಳನ್ನೂ ಬಿಡುಗಡೆ ಮಾಡಲಾಯಿತು. ಸೆಟ್ ಕರ್ಡ್ ಮತ್ತು ಗ್ರೀಕ್ ಯಾಗಟ್ ಅಲ್ಲದೇ, ಬೆಣ್ಣೆ, ತುಪ್ಪ, ಪನ್ನೀರ್ ಮತ್ತು ಆರು ಬಗೆಯ ಚೀಸ್ ಶ್ರೇಣಿಯನ್ನು ಬಿಡುಗಡೆ ಮಾಡಿದೆ.
ಅಕ್ಷಯಕಲ್ಪದ ಬಗ್ಗೆ ಮಾತನಾಡಿದ ಮುಖ್ಯಕಾರ್ಯನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಶಶಿಕುಮಾರ್ ಅವರು, “ಅಕ್ಷಯಕಲ್ಪ ವಿನೂತನವಾದ ಮಾದರಿಯ ಆವಿಷ್ಕಾರಗಳು ಮತ್ತು ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಡೈರಿ ಉತ್ಪನ್ನಗಳನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲಾಗುತ್ತಿದೆ. ಅತಿ-ಸಣ್ಣ ಉದ್ಯಮಿಗಳಿಗೆ ಮತ್ತು ರೈತಾಪಿ ವರ್ಗಕ್ಕೆ ಹೆಚ್ಚು ಲಾಭ ತಂದುಕೊಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. . ಈ ಮೂಲಕ ಅತ್ಯುತ್ತಮ ಗುಣಮಟ್ಟದ ಫಾರ್ಮಿಂಗ್ ಮತ್ತು ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇದಕ್ಕೆ ಪೂರಕವಾಗಿ ನಾವು ಎರಡು ವರ್ಷಗಳ ಕಾಲ ರೈತರಿಗೆ ತರಬೇತಿ ನೀಡುತ್ತಿದ್ದು, ಹೈನುಗಾರಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ. ಈ ಮೂಲಕ ರೈತರು ಅಕ್ಷಯಕಲ್ಪದ ರೈತರಾಗುತ್ತಿದ್ದಾರೆ. ಸಾವಯವ ಮೇವು ಉತ್ಪಾದನೆ ವಿಚಾರದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಾಗುತ್ತದೆಯಲ್ಲದೇ, ಹಸುಗಳನ್ನು ಆಂಟಿ ಬಯೋಟಿಕ್ಮುಕ್ತ ಮತ್ತು ಹಾರ್ಮೋನ್ ಮುಕ್ತಗೊಳಿಸಲಾಗುತ್ತದೆ. ಈ ಮೂಲಕ ಆರೋಗ್ಯಪೂರ್ಣವಾದ ಹಾಲು ಉತ್ಪಾದನೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಇಲ್ಲಿ ಒಂದು ವಿಶೇಷವೆಂದರೆ, ಹಾಲನ್ನು ಯಾವುದೇ ಹಂತದಲ್ಲೂ ಮನುಷ್ಯÀ ಸ್ಪರ್ಶಿಸುವುದೇ ಇಲ್ಲ. ಅದರ ಉತ್ಪಾದನೆ ಮತ್ತು ಪ್ಯಾಕೇಜಿಂಗ್ ಎಲ್ಲವೂ ಸ್ವಯಂಚಾಲಿತವಾಗಿರುತ್ತದೆ. ಹಾಲಿನ ಉತ್ಪಾದನೆಯ ಆರಂಭಿಕ ಹಂತದಿಂದ ಪ್ಯಾಕೇಜಿಂಗ್ವರೆಗೆ 14 ರೀತಿಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಪ್ರತಿಯೊಂದು ಹಾಲು ಉತ್ಪಾದನಾ ಘಟಕದಲ್ಲಿಯೂ ಬಲ್ಕ್ ಮಿಲ್ಕ್ ಚಿಲ್ಲರ್ಗಳನ್ನು ಅಳವಡಿಸಲಾಗಿದೆ ಮತ್ತು ಹಾಲು ಸರಬರಾಜು ವಾಹನಗಳಲ್ಲಿ 4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವನ್ನು ಕಾಯ್ದುಕೊಳ್ಳಲಾಗಿರುತ್ತದೆ’’ ಎಂದು ತಿಳಿಸಿದರು.
“ ಅಕ್ಷಯಕಲ್ಪ, ಬೆಂಗಳೂರಿನಲ್ಲಿ 20,000 ಗ್ರಾಹಕರನ್ನು ಹೊಂದಿದ್ದು, 250 ವಿತರಕರನ್ನು ಹೊಂದಿದೆ. ನೇಚರ್ಸ್ ಬಾಸ್ಕೆಟ್, ಬಿಗ್ಬಜಾರ್, ಹೈಪರ್ ಸಿಟಿ, ಬಿಗ್ ಬಾಸ್ಕೆಟ್, ಅಮೆಝಾನ್, 24 ಮಂತ್ರ ಆಗ್ರ್ಯಾನಿಕ್, ಆಗ್ರ್ಯಾನಿಕ್ ವಲ್ಡ್ ಮತ್ತು ಡೈಲಿ ನಿಂಜಾ, ದೂದ್ವಾಲಾ, ಮಾರ್ನಿಂಗ್ ಡ್ರಾಪ್ ಸೇರಿದಂತೆ ಇನ್ನೂ ಹಲವು ಸಂಸ್ಥೆಗಳೊಂದಿಗೆ ಸಹಯೋಗ ಹೊಂದಿದ್ದು, ಗ್ರಾಹಕರಿಗೆ ಉತ್ಪನ್ನಗಳನ್ನು ತಲುಪಿಸಲಾಗುತ್ತಿದೆ’’ ಎಂದು ಅವರು ತಿಳಿಸಿದರು.
ಅಕ್ಷಯಕಲ್ಪದ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಶ್ರೀ ಜಯದೇವ ಹೃದ್ರೋಗ ವಿಜ್ಞಾನಗಳು ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಮತ್ತು ಖ್ಯಾತ ಹೃದ್ರೋಗ ತಜ್ಞರಾದ ಡಾ.ಸಿ.ಎನ್.ಮಂಜುನಾಥ್ ಅವರು, “ಅಕ್ಷಯಕಲ್ಪ ಸಂಸ್ಥೆ ಕೇವಲ ಆರೋಗ್ಯಪೂರ್ಣ ಉತ್ಪನ್ನಗಳನ್ನು ಬಿಡುಗಡೆ ಮಾಡುವುದಷ್ಟೇ ಅಲ್ಲ, ರೈತರ ಉತ್ಪನ್ನಗಳನ್ನು ಲಾಭಯುಕ್ತ ಮಾಡುವುದು ಮತ್ತು ತಂತ್ರಜ್ಞಾನಾಧಾರಿತಗೊಳಿಸುವ ನಿಟ್ಟಿನಲ್ಲಿ ಉಪಕ್ರಮ ಕೈಗೊಳ್ಳುತ್ತಿರುವುದು ಶ್ಲಾಘನೀಯವಾಗಿದೆ. ಇಂತಹ ಉಪಕ್ರಮಗಳು ದೇಶದ ಭವಿಷ್ಯದ ಕೃಷಿ ಪ್ರಗತಿಗೆ ಪೂರಕವಾಗಿರುತ್ತವೆ. ಸಾವಯವ ಹಾಲು ಉತ್ಪನ್ನಗಳು ಹೆಚ್ಚು ಹೆಚ್ಚು ಪೌಷ್ಟಿಕಾಂಶಗಳು ಮತ್ತು ಆರೋಗ್ಯಕರವಾಗಿರುತ್ತವೆ. ಅಲ್ಲದೇ, ಇವುಗಳಲ್ಲಿ ಯಾವುದೇ ರೀತಿಯ ಕಲಬೆರಕೆ ಇರುವುದಿಲ್ಲ. ಈ ಮೂಲಕ ಗ್ರ್ರಾಹಕರಿಗೆ ಹಲವು ವಿಧದಲ್ಲಿ ಪ್ರಯೋಜನಕಾರಿಯಾಗಿರಲಿದ್ದು, ಇಂದಿನ ಜೀವನಶೈಲಿಗೆ ಪೂರಕವಾಗಿರುತ್ತವೆ. ಈ ಹಿನ್ನೆಲೆಯಲ್ಲಿ ನಾವು ಆರೋಗ್ಯಕರವಾದ ಉತ್ಪನ್ನಗಳನ್ನು ಬಳಸುವಂತೆ ಗ್ರ್ರಾಹಕರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಯಾವುದೇ ಸಾವಯವ ಉತ್ಪನ್ನಗಳು ಪ್ರಕೃತಿದತ್ತ ಕೊಡುಗೆಗಳಾಗಿರುತ್ತವೆ. ಈ ಹಿನ್ನೆಲೆಯಲ್ಲಿ ನಾವು ಇಂತಹ ಉತ್ಪನ್ನಗಳನ್ನು ಉತ್ತೇಜಿಸಬೇಕು, ಉತ್ತಮ ಆರೋಗ್ಯಕ್ಕಾಗಿ ನಾವು ಈ ಉತ್ಪನ್ನಗಳನ್ನು ರಕ್ಷಿಸಬೇಕು. ಕೃತಕ ವಸ್ತುಗಳು ಎಂದಿಗೂ ಪ್ರಕೃತಿದತ್ತವಾಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಪೂರ್ವಿಕರು ಬಳಸುತ್ತಿದ್ದ ಆಹಾರ ಪದಾರ್ಥಗಳನ್ನು ನಾವು ಬಳಸುವಂತಾಗಬೇಕು’’ ಎಂದು ಕರೆ ನೀಡಿದರು.
ಅಕ್ಷಯಕಲ್ಪ ಕುರಿತು :
ಅಕ್ಷಯಕಲ್ಪ ಫಾರ್ಮ್ ಅಚಿಡ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ 2010 ರಲ್ಲಿ ಆರಂಭವಾಯಿತು. ಭಾರತೀಯ ಕೃಷಿ ಕ್ಷೇತ್ರದಲ್ಲಿ ಪರಿಸರಸ್ನೇಹಿ ಪರಿಕಲ್ಪನೆಯನ್ನು ಅನುಷ್ಠಾನಕ್ಕೆ ತರುವುದು ಇದರ ಉದ್ದೇಶವಾಗಿದೆ. ಕೃಷಿ ಸಮುದಾಯದಲ್ಲಿ ಆವಿಷ್ಕಾರಕ ಕೃಷಿ ಪದ್ಧತಿಗಳನ್ನು ಜಾರಿಗೆ ತಂದು ಸುಸ್ಥಿರತೆಯನ್ನು ಕಾಯ್ದುಕೊಳ್ಳುವುದು ಇದರ ಉದ್ದೇಶವಾಗಿದೆ. ಶಶಿಕುಮಾರ್ ಮತ್ತು ಅವರ ವಿಪ್ರೋದ ಸ್ನೇಹಿತರಾದ 9 ಜನರ ತಂಡ ಹಾಗೂ ಜಿ.ಎನ್.ಎಸ್.ರೆಡ್ಡಿ ಅವರÀ ಕನಸಿನಕೂಸು ಈ ಸಂಸ್ಥೆ. ಪ್ರಸ್ತುತ ಸಂಸ್ಥೆಯು ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕೃಷಿ ಮತ್ತು ಕೃಷಿ-ತಾಂತ್ರಿಕ ಸಾಮಾಜಿಕ ಸಂಸ್ಥೆಗಳಲ್ಲಿ ಒಚಿದಾಗಿದೆ. 200 ರೈತರನ್ನು ಸದಸ್ಯರನ್ನಾಗಿ ಹೊಂದಿರುವ ಕಂಪನಿ 95 ಕ್ಕೂ ಹೆಚ್ಚು ಸಿಬ್ಬಂದಿ ಮತ್ತು ದಕ್ಷಿಣ ಕರ್ನಾಟಕದಲ್ಲಿ 250 ಕ್ಕೂ ಹೆಚ್ಚು ವಿತರಕರನ್ನು ಹೊಂದಿದೆ. ಬೆಂಗಳೂರಿನಿಂದ 150 ಕಿಲೋಮೀಟರ್ ದೂರದಲ್ಲಿರುವ ತಿಪಟೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಪ್ರಸ್ತುತ 16500 ಲೀಟರ್ ಹಾಲನ್ನು ಪ್ರತಿದಿನ ಉತ್ಪಾದಿಸುತ್ತಿದೆ. ಹಾಸನ ಜಿಲ್ಲೆಯ ಕೋಡಿಹಳ್ಳಿಯಲ್ಲಿ ಹಾಲು ಉತ್ಪಾದನಾ ಘಟಕವನ್ನು ಹೊಂದಿದ್ದು, ಇಲ್ಲಿ ಸುಮಾರು 25 ಎಕರೆ ಪ್ರದೇಶದಲ್ಲಿ ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಹೊಂದಿದೆ. ಇಲ್ಲಿ ಅತ್ಯಾಧುನಿಕ ಕೃಷಿ ತಾಂತ್ರಿಕತೆಗಳು, ಪ್ಯಾಕೇಜಿಂಗ್ ಘಟಕಗಳನ್ನು ಹೊಂದಿದೆಯಲ್ಲದೇ, ಶೀಥಲೀಕರಣ ಘಟಕ ಮತ್ತು ಸಾಮಾನ್ಯ ಸಂಸ್ಸರಣೆ ಘಟಕವನ್ನು ಹೊಂದಿದೆ. ಹೆಚ್ಚಿನ ಮಾಹಿತಿಗಾಗಿ:https://www.akshayakalpa.org/