ಬೆಂಗಳೂರು: ಕನ್ನಡ ಚಿತ್ರವೊಂದು ಭಾರತದಾದ್ಯಂತ ಚಲನಚಿತ್ರ ಪ್ರೇಕ್ಷಕರಿಗೆ ತೆರೆದುಕೊಳ್ಳುವ ಮೂಲಕ ಸ್ಯಾಂಡಲ್ ವುಡ್ ತನ್ನ ಭರವಸೆಯ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿಕೊಳ್ಳುತಿದೆ. ಇದಾಗಲೇ ರಾಕಿಂಗ್ ಸ್ಟಾರ್ ಯಶ್ ಅಬಿನಯದ “ಕೆಜಿಎಫ್” ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವುದು ತಿಳಿದ ಸಂಗತಿ. ಇದೀಗ ರಕ್ಷಿತ್ ಶೆಟ್ಟಿ ಅಭಿನಯದ “ಅವನೇ ಶ್ರೀಮನ್ನಾರಾಯಣ” ಚಿತ್ರದ ಸರದಿ.
ಸಚಿನ್ ರವಿ ನಿರ್ದೇಶನದ ಈ ಚಿತ್ರವನ್ನು ರಕ್ಷಿತ್ ಶೆಟ್ಟಿ ಒಡೆತನದ ಪರಮ್ವತ್ ಸ್ಟುಡಿಯೋಸ್, ಪುಶ್ಕರ್ ಮಲ್ಲಿಕಾರ್ಜುನಯ್ಯ ಅವರ ಪುಷ್ಕರ್ ಫಿಲ್ಮ್ಸ್ ಹಾಗು ಎಚ್ ಕೆ ಪ್ರಕಾಶ್ ಅವರ ಶ್ರೀ ದೇವೆ ಎಂಟರ್ ಪ್ರೈಸಸ್ ಜಂಟಿ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.ಎಂಭತ್ತರ ದಶಕದ ಕಥೆ ಹೊಂದಿರುವ ಈ ಚಿತ್ರದಲ್ಲಿ ರಕ್ಷಿತ್ ಪೋಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸ್ಕೊಳ್ಳುತ್ತಿದ್ದಾರೆ. ಚಿತ್ರ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ತೆರೆ ಕಾಣಲಿದೆ.”ಯಾವ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆಯೋ ಅದೆಲಾ ಭಾಷೆಗಳ ಟ್ರೈಲರ್ ಗಳನ್ನು ಚಿತ್ರ ಬಿಡುಗಡೆಗೆ ಮುನ್ನವೇ ಬಿಡುಗಡೆ ಮಾಡಲಾಗುತ್ತದೆ.
ಇದಕ್ಕೆ ಮುನ್ನ ರಕ್ಷಿತ್ ಶೆಟ್ಟಿ ಅಭಿನಯದ “ಉಳಿದವರು ಕಂಡಂತೆ” ಚಿತ್ರವು ತಮಿಳು ಮತ್ತು ಮಲಯಾಳಂ ಗಳಲ್ಲಿ ಪುನರ್ ನಿರ್ಮಾಣವಾಗಿತ್ತು. ಅ<ತೆಯೇ “ಕಿರಿಕ್ ಪಾರ್ಟಿ” ಕೂಡ ತೆಲುಗಿನಲ್ಲಿ ಬಿಡುಗಡೆಯಾಗಿದ್ದು ಸಧ್ಯದಲ್ಲಿಯೇ ಹಿಂದಿಯಲ್ಲಿ ಸಹ ತೆರೆ ಕಾಣಲಿದೆ.
“ನಟ ಮತ್ತು ನಿರ್ದೇಶಕರಾಗಿ, ರಕ್ಷಿತ್ ವಿವಿಧ ಭಾಷಾ ಚಿತ್ರರಂಗಗಳ ಅವಶ್ಯಕತೆಗಳನ್ನು ಚೆನ್ನಾಗಿ ಅರಿತಿದ್ದಾರೆ.”ಅವನೇ…. ಚಿತ್ರ ಸಾರ್ವತ್ರಿಕ ಕಥಾನಕವನ್ನು ಹೊಂದಿದ್ದು ಇದೊಂದು ದೊಡ್ಡ್ ಬಜೆಟ್ ನ ಚಿತ್ರವೂ ಹೌದು.ಹೀಗಾಗಿ ಎಲ್ಲಾ ಭಾಷೆಗಳ್ಲ್ಲಿಯೂ ಈ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತದೆ ಎನ್ನುವ ನಿರೀಕ್ಷೆ ಇದೆ.” ಮೂಲಗಳು ಹೇಳಿದೆ.”ಚಿತ್ರ ಭಾರತದಾದ್ಯಂತ ತೆರೆ ಕಾಣುವುದರೊಡನೆ ಚಿತ್ರದ ಮಾರುಕಟ್ಟೆ ಮೌಲ್ಯವನ್ನು ಹೆಚ್ಚಿಸಲಿದೆ. ಶ್ರೀಮನ್ನಾರಾಯಣ ರಕ್ಷಿತ್ ಗಾಗಿ ವಿಶಾಲ ಮಾರುಕಟ್ಟೆಯನ್ನು ಸೃಷ್ಟಿಸುವ ಒಂದು ಆರಂಭಿಕ ಹಂತವಾಗಿದೆ, ಅವರ ಚಲನಚಿತ್ರಗಳು ಭವಿಷ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡಲಿದೆ”ಮೂಲವು ವಿವರಿಸಿದೆ.
ಶಾನ್ವಿ ಶ್ರೀವಾಸ್ತವ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಬಾಲಾಜಿ ಮನೋಹರ್ ಮೊದಲಾದವರು ಅಭಿನಯಿಸಿರುವ ಈ ಚಿತ್ರ ಮುಂಬರುವ ಬೇಸಿಗೆಯಲ್ಲಿ ತೆರೆ ಕಾಣುವುದೆಂದು ಚಿತ್ರತಂಡದ ಮೂಲಗಳು ಹೇಳಿದೆ. ಇದಕ್ಕಾಗಿ ರಕ್ಷಿತ್ ಹಾಗೂ ಇತರರು ಎಡೆಬಿಡದೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಲ್ಲವೂ ಅಂದುಕೊಂಡಂತೆ ನಡೆದರೆ ಚಿತ್ರ ಮುಂದಿನ ವರ್ಷ ಮಾರ್ಚ್ ಅಥವಾ ಏಪ್ರಿಲ್ ಗೆ ತೆರೆಗೆ ಬರಲಿದೆ.