
ಕೋಲಾರ: ಒಂಬತ್ತು ಸಾವಿರ ರೂ. ಲಂಚ ಸ್ವೀಕರಿಸುತ್ತಿರುವಾಗಲೇ ಬಂಗಾರಪೇಟೆ ನಗರಸಭೆಯ ಬಿಲ್ ಕಲೆಕ್ಟರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಕೋಲಾರ ಜಿಲ್ಲೆ ಬಂಗಾರಪೇಟೆ ನಿವಾಸಿಯೊಬ್ಬರು ಅವರ ತಂದೆಯ ಹೆಸರಿನಲ್ಲಿದ್ದ ಮನೆಯ ಕಂದಾಯವನ್ನು ಕಟ್ಟಲು ಬಂಗಾರಪೇಟೆ ನಗರಸಭೆ ಕಚೇರಿಯಲ್ಲಿ ವಿಚಾರಿಸಿದಾಗ ಕಂದಾಯ 2002ನೇ ಸಾಲಿನಿಂದ ಬಾಕಿ ಇರುವುದಾಗಿ, ಬಾಕಿ ಇದ್ದ ಕಂದಾಯದ ಹಣವನ್ನು ಕಡಿಮೆ ಮಾಡಿಕೊಳ್ಳಲು ಬಂಗಾರಪೇಟೆ ನಗರಸಭೆ ಬಿಲ್ ಕಲೆಕ್ಟರ್ ನಾಗರಾಜ್ 10,000 ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಪೂರ್ವ ಒಪ್ಪಿಗೆಯಂತೆ ಲಂಚದ ಹಣವನ್ನು ಫಿರ್ಯಾದುದಾರರಿಂದ ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ಕೋಲಾರ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುತ್ತಾರೆ. ಆರೋಪಿತರನ್ನು ಹಾಗೂ ಲಂಚದ ಹಣವನ್ನು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರಿದಿದೆ.