ಬೆಂಗಳೂರು, ಅ.6- ಎಂಜಿನಿಯರಿಂಗ್ ಸೇವೆಗಳನ್ನು ಒದಗಿಸುವ ಕ್ವೆಸ್ಟ್ ಗ್ಲೋಬಲ್ ಸಂಸ್ಥೆ, ಜಾಗತಿಕ ಏರೋಸ್ಟೇಸ್ ಪೂರೈಕೆದಾರ ಏರ್ಬಸ್ ಜೊತೆಗೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದೆ.
ಇದರಿಂದ ವಾರ್ಷಿಕ ಅನ್ವಯಿಕ ಎಂಜಿನಿಯರಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಭಾರತದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ಇಂಜಿನಿಯಮ್ 2018 ಎಂಬ ಎಂಜಿನಿಯರಿಂಗ್ ಸ್ಪರ್ಧೆಯಲ್ಲಿ 4500ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇದು 8ನೇ ವರ್ಷದ ರಾಷ್ಟ್ರವ್ಯಾಪಿ ಪ್ರತಿಭಾ ಶೋಧ ಸ್ಪರ್ಧೆಯಾಗಿತ್ತು.
ಏರ್ಬಸ್ ಅಮೆರಿಕಾಸ್ನ ಉಪಾಧ್ಯಕ್ಷ ಜಾನ್ ಒಲ್ಯಾರಿ ಈ ಬಗ್ಗೆ ಮಾತನಾಡಿ, ಇಂಜಿನಿಯಮ್ಗಾಗಿ ಕ್ವೆಸ್ಟ್ ಜೊತೆಗೆ ಕೈ ಜೋಡಿಸಿರುವುದಕ್ಕೆ ನಮಗೆ ಸಂಸತವಾಗಿದೆ. ಭಾರತದಲ್ಲಿ ಯುವ ವಿಜ್ಞಾನಿಗಳನ್ನು ಪೆÇೀಷಿಸುವ ಈ ಪ್ರಯತ್ನಕ್ಕೆ ನಮ್ಮ ಬೆಂಬಲವಿದೆ. ಇಂಜಿನಿಯಮ್ನಂತಹ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸಲು ಸಹಾಯಕವಾಗುತ್ತದೆ. ಕ್ವೆಸ್ಟ್ ಇಂಜಿನಿಯಮ್ ಸ್ಪರ್ಧೆಯನ್ನು ಆರಂಭಿಸಿದಾಗಿನಿಂದ ಏರ್ಬಸ್ ಅದರ ಜೊತೆಗೆ ನಿಂತಿದೆ ಎಂದು ತಿಳಿಸಿದ್ದಾರೆ.
ಮಣಿಪಾಲ್ ಉನ್ನತ ಶಿಕ್ಷಣ ಅಕಾಡೆಮಿಯ ಅಧ್ಯಕ್ಷ ಮತ್ತು ಕುಲಪತಿ ಡಾ.ರಾಮದಾಸ್ ಎಂ.ಪೈ ಮಾತನಾಡಿ, ಕ್ಲಿಷ್ಟಕರವಾದ ಇಂಜಿನಿಯರಿಂಗ್ ಸಮಸ್ಯೆಗಳನ್ನು ತಮ್ಮ ಹೊಸ ಆಲೋಚನೆಗಳಿಂದ ಬಗೆಹರಿಸಿವುದಕ್ಕೆ ಇಂಜಿನಿಯಮ್ ಸ್ಪರ್ಧೆ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಅವಕಾಶ ನೀಡುತ್ತದೆ. ಹಿಂದಿನ ಇಂಜಿನಿಯಮ್ನಲ್ಲಿ ನಮ್ಮ ವಿದ್ಯಾರ್ಥಿಗಳು ಸೋಲಾರ್ ಎಲೆಕ್ಟ್ರಿಕ್ ವಾಹನಕ್ಕಾಗಿ ಮೊದಲ ಬಹುಮಾನ ಪಡೆದುಕೊಂಡಿದ್ದರು.
ಸ್ಪರ್ಧೆಯ ವೇಳೆ ಎಂಜಿನಿಯರಿಂಗ್ ತಜ್ಞರ ಜೊತೆಗೆ ನಿಕಟವಾಗಿ ಬೆರೆಯುವುದರಿಂದ ವಿದ್ಯಾರ್ಥಿಗಳು ಸವಾಲುಗಳ ಕುರಿತು ಹೆಚ್ಚು ತಿಳಿದುಕೊಂಡು ಜ್ಞಾನವನ್ನೂ ವಿಸ್ತರಿಸಿಕೊಳ್ಳುತ್ತಾರೆ ಎಂದು ಹೇಳಿದರು.
ಕ್ವೆಸ್ಟ್ ಗ್ಲೋಬಲ್ನ ಮುಖ್ಯ ಕಾರ್ಯಾಚರಣೆ ಅಧಿಕಾರಿ ಡಾ.ಅಜಯ್ ಪ್ರಭು ಮಾತನಾಡಿ, ವರ್ಷದಿಂದ ವರ್ಷಕ್ಕೆ ಇಂಜಿನಿಯಮ್ ಭಾರತದ ಭವಿಷ್ಯದ ಎಂಜಿನಿಯರಿಂಗ್ ಪ್ರತಿಭೆಗಳ ಬೆಳವಣಿಗೆಯಲ್ಲಿ ಸಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದರು.