ಎಲೆಕ್ಟ್ರಾನಿಕಾ ಇಂಡಿಯಾ 2018ರಲ್ಲಿ ಮುರಾಟ ಸ್ವಯಂ ಚಾಲಿತ ಪರಿಹಾರಗಳ ಪ್ರದರ್ಶನ

ಬೆಂಗಳೂರು, ಅ.6- ಅಂತಾರಾಷ್ಟ್ರೀಯ ವಿದ್ಯುನ್ಮಾನ ಬಿಡಿಭಾಗಗಳ ಬೃಹತ್ ಅಂತಾರಾಷ್ಟ್ರೀಯ ಮೇಳವಾದ ಎಲೆಕ್ಟ್ರಾನಿಕಾ ಇಂಡಿಯಾ 2018ರಲ್ಲಿ ಜಾಗತಿಕ ಮುಂಚೂಣಿ ಸಂಸ್ಥೆಯಾದ ಮುರಾಟ ಭಾಗವಹಿಸಿ, ಸ್ವಯಂ ಚಾಲಿತ ಪರಿಹಾರಗಳನ್ನು ಪ್ರದರ್ಶಿಸಿ ಮೆಚ್ಚುಗೆ ಪಡೆದಿದೆ.

ಸಿರಾಮಕ್ ಆಧಾರಿತ ಪ್ಯಾಸಿವ್ ಎಲೆಕ್ಟ್ರಾನಿಕ್ ಬಿಡಿ ಭಾಗಗಳು ಮತ್ತು ಪರಿಹಾರಗಳು, ಸಂವಹನ ಮಾದರಿಗಳು ಮತ್ತು ವಿದ್ಯುತ್ ಪೂರೈಕೆ ಮಾದರಿಗಳ ವಿನ್ಯಾಸ, ಉತ್ಪಾದನೆ ಮತ್ತು ಮಾರಾಟ ಕ್ಷೇತ್ರದಲ್ಲಿ ಜಾಗತಿಕ ಮುಂಚೂಣಿಯ ಸಂಸ್ಥೆಯಾದ ಮುರಾಟ, ಅತ್ಯಾಧುನಿಕ ಸೆನ್ಸಾರ್, ಸಂವಹನ ಮತ್ತು ವಿದ್ಯುತ್ ತಂತ್ರಜ್ಞಾನ ಉತ್ಪನ್ನಗಳು, ಪರಿಹಾರಗಳನ್ನು ಪ್ರದರ್ಶಿಸಿದೆ.

ಐಒಟಿಗಳ ಅಳವಡಿಕೆ ಮೂಲಕ ಇಂಡಸ್ಟ್ರೀ 4.0 ಕ್ಷೇತ್ರಕ್ಕೆ ಸೀಮಾತೀತವಾಗಿ ವಲಸೆ ಕೈಗೊಳ್ಳಲು ಕೈಗಾರಿಕೆ ಮತ್ತು ವಾಹನ ಕ್ಷೇತ್ರಗಳ ಉದ್ಯಮಗಳಿಗೆ ಇವು ಅವಕಾಶ ಮಾಡಿಕೊಡಲಿವೆ. ಬುದ್ಧಿವಂತ ಕಾರ್ಖಾನೆ ಸ್ವಯಂಚಾಲನೆಯಲ್ಲೂ ಉತ್ಪನ್ನ ಮತ್ತು ಪರಿಹಾರಗಳನ್ನು ಮುರಾಟ ಪ್ರದರ್ಶಿಸುತ್ತಿದ್ದು, ಸುಧಾರಿತ ನಂಬಿಕಾರ್ಹತೆ ಮತ್ತು ಡಾಟಾ ಪೆÇ್ರಸೆಸಿಂಗ್ ಜೊತೆಗೆ ಸಣ್ಣ ಉಪಕರಣಗಳ ಬೇಡಿಕೆಯನ್ನು ಇದು ವಿಸ್ತರಿಸಲಿದೆ. ಮುರಾಟ ಇದರೊಂದಿಗೆ ತನ್ನ ಪ್ರಾತ್ಯಕ್ಷಿಕಾ ರೋಬೊಗಳ ತಂಡವನ್ನು ಕೂಡ ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ