ಬೆಂಗಳೂರು, ಅ.6- ನಾಡಹಬ್ಬದ ಪ್ರಯುಕ್ತ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ/ಸಲ್ಲಿಸುತ್ತಿರುವ ಉದಯೋನ್ಮುಖ ಮತ್ತು ಪ್ರತಿಭಾವಂತರನ್ನು ಗುರುತಿಸಿ ಅವರನ್ನು ಪೆÇ್ರೀತ್ಸಾಹಿಸುವ ಸಲುವಾಗಿ ಪ್ರತಿ ವರ್ಷದಂತೆ ಈ ವರ್ಷವೂ ನಾಡಭೂಷಣ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಲಾಗುತ್ತದೆ ಎಂದು ಕರ್ನಾಟಕ ಸಹೃದಯರ ಸೇವಾ ಪ್ರತಿಷ್ಠಾನ ತಿಳಿಸಿದೆ.
ಸಮಾಜಸೇವೆ, ರಾಜಕೀಯ, ಶಿಕ್ಷಣ, ಧಾರ್ಮಿಕ, ಬ್ಯಾಂಕಿಂಗ್, ತೋಟಗಾರಿಕೆ, ವ್ಯವಸಾಯ, ಕಲೆ, ಸಾಹಿತ್ಯ, ನೃತ್ಯ, ಹಿನ್ನೆಲೆ ಗಾಯನ, ಅಭಿನಯ, ಸುಗಮ ಸಂಗೀತ, ಆಟೋ ಚಾಲನೆ, ಕರಾಟೆ, ಚಿತ್ರರಂಗ, ಕಿರುತೆರೆ, ರಂಗಭೂಮಿ, ಉಪನ್ಯಾಸ, ಕಥೆಗಾರರು, ಹಾಸ್ಯ, ಗುಡಿ ಕೈಗಾರಿಕೆ, ಗೃಹ ಕೈಗಾರಿಕೆ, ಜೀವನೋಪಾಯ, ಉದ್ಯೋಗ ಸೃಷ್ಟಿ, ಹೋರಾಟಗಾರರು, ಲೇಖಕರು, ಸಂಘಟನೆ, ಕೈಗಾರಿಕೋದ್ಯಮಗಳು, ಆರೋಗ್ಯ ಕ್ಷೇತ್ರ, ಕ್ರೀಡೆ, ಅಂಗವಿಕಲರ ಕ್ಷೇತ್ರ, ಮಹಿಳಾ ಮತ್ತು ಮಕ್ಕಳ ಸೇವೆ, ವಿಧವೆ, ಹಿರಿಯ ನಾಗರಿಕರ ಸೇವೆ, ಪರಿಸರ, ವಿದ್ಯಾರ್ಥಿಗಳ ಸೇವೆ, ಚಿತ್ರಕಲೆ, ಅನಾಥರ ಮತ್ತು ಅಬಲೆಯರ ಸೇವೆ ಇನ್ನೂ ಮುಂತಾದ ಕ್ಷೇತ್ರದಲ್ಲಿ, ಎಷ್ಟು ವರ್ಷಗಳ ಸೇವೆ, ಯಾವ ರೀತಿ ಸೇವೆ ಎಂಬ ಬಗ್ಗೆ ತಿಳಿಸಬೇಕಿದೆ.
ಹೆಸರು, ವಿಳಾಸ, ವೃತ್ತಿ, ಮೊಬೈಲ್ ಸಂಖ್ಯೆ ಮತ್ತು ಇತರೆ ಸಂಘ ಸಂಸ್ಥೆಯವರು ಸನ್ಮಾನಿಸಿದ್ದರೆ ಅದರ ಜೆರಾಕ್ಸ್ ಪ್ರತಿಗಳು, ಎರಡು ಪಾಸ್ಪೆÇೀರ್ಟ್ ಭಾವಚಿತ್ರಗಳೊಂದಿಗೆ ಅ.30ರೊಳಗೆ ಅಧ್ಯಕ್ಷರು ಗುಡಿಬಂಡೆ ಮಧುಸೂದನ್, ಕರ್ನಾಟಕ ಸಹೃದಯರ ಸೇವಾ ಪ್ರತಿಷ್ಠಾನ, ನಂ.12, 8ನೆ ಅಡ್ಡರಸ್ತೆ, ಮಂಜುನಾಥನಗರ, ಮಾಗಡಿ ರಸ್ತೆ, ಬೆಂಗಳೂರು-560 023 ಈ ವಿಳಾಸಕ್ಕೆ ಅರ್ಜಿ ಕಳುಹಿಸಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ. ಹೆಚ್ಚಿನ ವಿವರಗಳಿಗೆ 9591379349 ಸಂಪರ್ಕಿಸಬಹುದು.