ಬೆಂಗಳೂರು, ಅ.6-ಕನ್ನಗಳವು ಮಾಡುತ್ತಿದ್ದ ಕುಖ್ಯಾತ ಅಂತಾರಾಜ್ಯ ಆರೋಪಿಗಳನ್ನು ಬಂಧಿಸಿರುವ ಬೈಯ್ಯಪ್ಪನಹಳ್ಳಿ ಪೆÇಲೀಸರು 29.45 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ನಿವಾಸಿಗಳಾದ ಕಾಳಿದಾಸ್(36) ಹಾಗೂ ಲೋಗನಾಥನ್( 52) ಬಂಧಿತ ಆರೋಪಿಗಳು.
ಆರೋಪಿಗಳ ಬಂಧನದಿಂದ ಬೈಯ್ಯಪ್ಪನಹಳ್ಳಿ ಪೆÇಲೀಸ್ ಠಾಣೆಯ 6, ಬೆಂಗಳೂರು ಗ್ರಾಮಾಂತರ ಜಿಲ್ಲೆ ಆವಲಹಳ್ಳಿ ಠಾಣೆಯ 1 ಕನ್ನಗಳವು ಸೇರಿದಂತೆ ಒಟ್ಟು 7 ಹಗಲು ಕ
ನ್ನಗಳವು ಪ್ರಕರಣಗಳು ಬೆಳಕಿಗೆ ಬಂದಿವೆ.
ಆರೋಪಿಗಳಿಂದ ಒಂದು ಕೆಜಿ 34 ಗ್ರಾಂ ತೂಕದ ಚಿನ್ನದ ಒಡವೆ, ಒಂದು ಕೆಜಿ 300 ಗ್ರಾಂ ತೂಕದ ಬೆಳ್ಳಿ ಒಡವೆ ಹಾಗೂ ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಆಯುಧಗಳು ಸೇರಿದಂತೆ ಒಟ್ಟು 29 ಲಕ್ಷ, 45 ಸಾವಿರ ರೂ. ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ತಮಿಳುನಾಡಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಕುಖ್ಯಾತ ಆರೋಪಿ ತಿರುನಲ್ವೇಲಿ ಜಿಲ್ಲೆಯ ಕಡಯಂ ನಿವಾಸಿ ದಿನಕರ್(31) ಎಂಬಾತನನ್ನು ಬಾಡಿ ವಾರೆಂಟ್ ಮೂಲಕ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಇಬ್ಬರು ಆರೋಪಿಗಳ ಮಾಹಿತಿ ಲಭ್ಯವಾಗಿದೆ.
ಆರೋಪಿ ಕಾಳಿದಾಸ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಐಷಾರಾಮಿ ಜೀವನಕ್ಕಾಗಿ ತನ್ನ ಇತರ ಸಹಚರರೊಂದಿಗೆ ಸೇರಿ ಕನ್ನಗಳವು ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಇವರು ಕನ್ನಗಳವು ಸಂದರ್ಭದಲ್ಲಿ ಲಾಕರ್ ಮತ್ತು ಕಬ್ಬಿಣದ ಕಪಾಟುಗಳ ಸಮೇತ ಎತ್ತಿ ಕೊಂಡು ಹೋಗಿ ಅವುಗಳಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು.
ಇವರ ವಿರುದ್ಧ ಆಂಧ್ರಪ್ರದೇಶ ಹಾಗೂ ತಮಿಳುನಾಡುಗಳಲ್ಲಿ ಹಲವು ಕನ್ನಗಳವು ಪ್ರಕರಣ ದಾಖಲಾಗಿವೆ.
ಡಿಸಿಪಿ ಅಜಯ್ ಹಿಲೋರಿ, ಅವರ ಮಾರ್ಗದರ್ಶನದಲ್ಲಿ ಹಲಸೂರು ಎಸಿಪಿ ಶಾಂತಮಲ್ಲಪ್ಪ ಅವರ ನೇತೃತ್ವದಲ್ಲಿ ಬೈಯ್ಯಪ್ಪನಹಳ್ಳಿ ಇನ್ಸ್‍ಪೆಕ್ಟರ್ ರಮೇಶ್ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.