ಐಷಾರಾಮಿ ಜೀವನಕ್ಕಾಗಿ ಕನ್ನಗಳವು ಮಾಡುತ್ತಿದ್ದ ಕುಖ್ಯಾತ ಆರೋಪಿಯೊಬ್ಬನನ್ನು ಬಂಧಿಸಿ ಜೆ.ಬಿ.ನಗರ 16.25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ಇತರೆ ವಸ್ತುಗಳನ್ನು ವಶ

ಬೆಂಗಳೂರು, ಅ.6-ಐಷಾರಾಮಿ ಜೀವನಕ್ಕಾಗಿ ಕನ್ನಗಳವು ಮಾಡುತ್ತಿದ್ದ ಕುಖ್ಯಾತ ಆರೋಪಿಯೊಬ್ಬನನ್ನು ಬಂಧಿಸಿರುವ ಜೆ.ಬಿ.ನಗರ 16.25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕಲಾಸಿಪಾಳ್ಯದ ನಿವಾಸಿ ಇನ್‍ಸೆಂಟ್(62) ಬಂಧಿತ ಆರೋಪಿ.
ಕಳವು ಮಾಡಿ ಸಂಪಾದಿಸಿದ ಹಣದಿಂದ ತಮಿಳುನಾಡಿನ ತನ್ನ ಸ್ವಂತ ಊರಿನಲ್ಲಿ ಸ್ನೇಹಿತರೊಂದಿಗೆ ಮೋಜು ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದ.
ಈತನನ್ನು ವಶಕ್ಕೆ ಪಡೆದು ಜೆಪಿ ನಗರ ಹಾಗೂ ವಿವಿ ಪುರಂ ಪೆÇಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಕನ್ನಗಳವು ಮಾಡಿದ್ದ 525 ಗ್ರಾಂ ತೂಕದ ಚಿನ್ನದ ಒಡವೆ, ಟಿವಿ ಸೆಟ್ ಸೇರಿದಂತೆ 16.25 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪೂರ್ವವಿಭಾಗದ ಡಿಸಿಪಿ ಅಜಯ್ ಹಿಲೋರಿ ಅವರ ಮಾರ್ಗದರ್ಶನದಲ್ಲಿ ಹಲಸೂರು ಉಪವಿಭಾಗದ ಎಸಿಪಿ ಶಾಂತಮಲ್ಲಪ್ಪ ಅವರ ನೇತೃತ್ವದಲ್ಲಿ ಜೆ.ಬಿ.ನಗರ ಇನ್ಸ್‍ಪೆಕ್ಟರ್ ಹಣಮಂತ ಕೆ. ಭಜಂತ್ರಿ ಹಾಗೂ ಬೈಯ್ಯಪ್ಪನಹಳ್ಳಿ ಇನ್ಸ್‍ಪೆಕ್ಟರ್ ರಮೇಶ್ ಜಿ.ಪಿ. ಅವರ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿ ಕಳವು ಮಾಲುಗಳನ್ನು ವಶಪಡಿಸಿಕೊಂಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ