ಬೆಂಗಳೂರು, ಅ.6-ದೆಹಲಿಯಿಂದ ವಿಮಾನದ ಮೂಲಕ ನಗರಕ್ಕೆ ಬಂದು ಸೇಲ್ಸ್ಮ್ಯಾನ್ ಸೋಗಿನಲ್ಲಿ ಕನ್ನಗಳವು ಮಾಡುತ್ತಿದ್ದ ಅಂತಾರಾಜ್ಯ ಕನ್ನಗಳವು ಆರೋಪಿಯೊಬ್ಬನನ್ನು ಬಂಧಿಸಿರುವ ಜೆ.ಬಿ.ನಗರ ಪೆÇಲೀಸರು 31.70 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಪೂರ್ವ ದೆಹಲಿಯ ಲೋನಿ ರಸ್ತೆಯ ನಿವಾಸಿ ಅರ್ಮಾನ್ಖಾನ್ ಅಲಿಯಾಸ್ ಅಮಾನ್ಸೋನಿ (26) ಬಂಧಿತ ಆರೋಪಿ.
ಇತ್ತೀಚೆಗೆ ಜೆ.ಬಿ.ನಗರ ಪೆÇಲೀಸರು ಪ್ರಕರಣವೊಂದಕ್ಕೆ ಸಂಬಂಧಿಸಿ ದೆಹಲಿಯ ಗೋಕುಲಪುರಿ ನಿವಾಸಿ ಅಶಿಸ್ಕುಮಾರ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.
ಈ ವೇಳೆ ಆತ ಆರೋಪಿ ಅರ್ಮಾನ್ಖಾನ್ನ ಹೆಸರು ಬಾಯ್ಬಿಟ್ಟಿದ್ದಾನೆ. ಇದನ್ನಾಧರಿಸಿ ಪೆÇಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಅರ್ಮಾನ್ಖಾನ್ ತನ್ನ ಸಹಚರರೊಂದಿಗೆ ದೆಹಲಿಯಿಂದ ವಿಮಾನ ಮೂಲಕ ಚೆನ್ನೈ ಮಾರ್ಗವಾಗಿ ಬೆಂಗಳೂರಿಗೆ ಬರುತ್ತಿದ್ದ. ವಿವಿಧ ಪೆÇಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಹಗಲಿನಲ್ಲಿ ಸೇಲ್ಸ್ಮ್ಯಾನ್ ಸೋಗಿನಲ್ಲಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕನ್ನಗಳವು ಮಾಡುತ್ತಿದ್ದ. ಬಳಿಕ ರೈಲಿನ ಮೂಲಕ ಚೆನ್ನೈ ಮಾರ್ಗವಾಗಿ ದೆಹಲಿಗೆ ತೆರಳಿ ಕಳವು ಮಾಡಿದ ವಸ್ತುಗಳನ್ನು ಮಾರಾಟ ಮಾಡಿ ಕಾರು ಹಾಗೂ ಮನೆಗಳನ್ನು ಖರೀದಿಸುತ್ತಿದ್ದ. ಆಗಾಗ ಮನೆ ಮತ್ತು ಕಾರುಗಳನ್ನು ಬದಲಿಸಿ ಉದ್ಯಮಿಯಂತೆ ಐಷಾರಾಮಿ ಜೀವನ ನಡೆಸುತ್ತಿದ್ದ.
ಆರೋಪಿಯ ಬಂಧನದಿಂದ ಜೆ.ಬಿ.ನಗರ ಪೆÇಲೀಸ್ ಠಾಣೆಯ 5, ಬೈಯ್ಯಪ್ಪನಹಳ್ಳಿ ಠಾಣೆಯ 2, ಹಲಸೂರು, ರಾಮಮೂರ್ತಿನಗರ, ರಾಜಾಜಿನಗರ, ಮೈಕೋ ಲೇಔಟ್, ಜೆ.ಪಿ.ನಗರ ಪೆÇಲೀಸ್ ಠಾಣೆಗಳ ತಲಾ ಒಂದೊಂದು ಕನ್ನಗಳವು ಪ್ರಕರಣ ಸೇರಿ ಒಟ್ಟು 12 ಹಗಲು ಕನ್ನಗಳವು ಪ್ರಕರಣ ಪತ್ತೆಯಾಗಿವೆ.
ಆರೋಪಿಯಿಂದ 31.70 ಲಕ್ಷ ರೂ. ಮೌಲ್ಯದ 1ಕೆಜಿ 40 ಗ್ರಾಂ ತೂಕದ ಚಿನ್ನ, 1ಕೆಜಿ 250 ಗ್ರಾಂ ತೂಕದ ಬೆಳ್ಳಿಒಡವೆ, 2 ಲ್ಯಾಪ್ಟಾಪ್, ರೇಷ್ಮೆ ಸೀರೆಗಳು ಹಾಗೂ ಕೃತ್ಯಕ್ಕೆ ಉಪಯೋಗಿಸಿದ್ದ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ.