ಪೆಟ್ರೋಲ್-ಡೀಸೆಲ್ ದರದಲ್ಲಿ ಮತ್ತೆ ಏರಿಕೆ

ನವದೆಹಲಿ: ತೈಲ ಬೆಲೆ ಕೊಂಚ ಇಳಿಕೆಮಾಡಿ ಕೇಂದ್ರ ಸರ್ಕಾರ ಸಾರ್ವಜನಿಕರಿಗೆ ಸ್ವಲ್ಪ ಸಮಾಧಾನ ಮಾಡಿದ ಬೆನ್ನಲ್ಲೇ ತೈಲ ಕಂಪನಿಗಳು ಮತ್ತೆ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಏರಿಕೆ ಮಾಡಿವೆ.

ರಾಜಧಾನಿ ದೆಹಲಿಯಲ್ಲಿ ಪ್ರತೀ ಲೀಟಲ್ ಪೆಟ್ರೋಲ್ ಬೆಲೆ 0.18 ಪೈಸೆ ಹಾಗೂ ಡೀಸೆಲ್ ಬೆಲೆ 0.29 ಪೈಸೆಯಷ್ಟು ಏರಿಕೆಯಾಗಿದೆ. ಇದರಂತೆ ಪೆಟ್ರೋಲ್ ಬೆಲೆ ರೂ.81.68 ಮತ್ತು ಡೀಸೆಲ್ ಬೆಲೆ ರೂ.73.24 ಆಗಿದೆ.

ಮುಂಬೈ ನಲ್ಲಿ 87.15 ಇದ್ದ ಪೆಟ್ರೋಲ್ ಬೆಲೆಯಲ್ಲಿ ಇಂದು 0.18 ಪೈಸೆ ಏರಿಕೆ ಮಾಡಲಾಗಿದೆ. ಆದರೆ, ಡೀಸೆಲ್ ಬೆಲೆಯಲ್ಲಿ ಮಾತ್ರ 0.70 ಪೈಸೆ ಇಳಿಕೆ ಮಾಡಲಾಗಿದ್ದು. ಇದರಂತೆ ಡೀಸೆಲ್ ಬೆಲೆ ರೂ.76.75 ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ