ಮುಂಬೈ: ಅಮೆರಿಕದ ಡಾಲರ್ ಎದುರು ಭಾರತದ ರುಪಾಯಿ ವಿನಿಮಯ ಮೌಲ್ಯ ಶುಕ್ರವಾರ ಮತ್ತೆ ಸಾರ್ವಕಾಲಿಕ ದಾಖಲೆಯ ಕುಸಿತ ಕಂಡಿದ್ದು, 74.113 ರುಪಾಯಿಗೆ ತಲುಪಿದೆ.
ರೆಪೋ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಘೋಷಿಸಿದ ಕೆಲವೇ ಗಂಟೆಗಳಲ್ಲಿ ರುಪಾಯಿ ಮೌಲ್ಯ ಡಾಲರ್ ಎದುರು 55 ಪೈಸೆಯಷ್ಟು ಇಳಿಕೆಯಾಗುವ ಮೂಲಕ 74.13ರುಪಾಯಿಗೆ ತಲುಪಿದೆ.
ಟರ್ಕಿ ಕರೆನ್ಸಿ ಲಿರಾ ಕುಸಿತದಿಂದಾಗಿ ಡಾಲರ್ ಎದುರು ರುಪಾಯಿ ಮೌಲ್ಯ ಪದೆಪದೇ ಕುಸಿಯುತ್ತಿದ್ದು, ತೈಲ ಬೆಲೆ ಏರಿಕೆಗೆ ಕಾರಣವಾಗಿದೆ.
ನಿನ್ನೆ ಡಾಲರ್ ಎದುರು ರುಪಾಯಿ ಮೌಲ್ಯ 24 ಪೈಸೆಯಷ್ಟು ಕುಸಿಯುವ ಮೂಲಕ ರುಪಾಯಿ ಮೌಲ್ಯ 73.58 ರುಪಾಯಿಗೆ ಇಳಿಕೆಯಾಗಿ ಸಾರ್ವಕಾಲಿಕ ದಾಖಲೆ ನಿರ್ಮಿಸಿತ್ತು. ಈಗ ಮತ್ತೊಂದು ದಾಖಲೆ ನಿರ್ಮಿಸಿದೆ.