
ಬೆಂಗಳೂರು, ಅ.4-ವ್ಯಕ್ತಿಯೊಬ್ಬರು ಕಾರು ನಿಲ್ಲಿಸಿ ಹೋಟೆಲೊಂದರಲ್ಲಿ ಟೀ ಕುಡಿದು ಬರುವಷ್ಟರದಲ್ಲಿ ಅವರ ಕಾರಿನ ಗಾಜು ಮುರಿದು ಅದರಲ್ಲಿದ್ದ 5 ಲಕ್ಷ ರೂ. ಹಣ ದೋಚಿರುವ ಘಟನೆ ಕೆ.ಜಿ.ಹಳ್ಳಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ನಡೆದಿದೆ.
ಕೆಜಿ ಹಳ್ಳಿಯ ಚಾಣಕ್ಯ ಲೇಔಟ್ ನಿವಾಸಿ ಬಾಲರಾಜ್ ಹಣ ಕಳೆದುಕೊಂಡವರು. ಅವರು ನಿನ್ನೆ ಸಂಜೆ ಕಾರು ನಿಲ್ಲಿಸಿ ಚಹಾ ಕುಡಿಯಲು ಹೋಟೆಲ್ಗೆ ಹೋಗಿದ್ದಾರೆ. ಬಂದು ನೋಡುವಾಗ ಕಾರಿನಲ್ಲಿದ್ದ 5 ಲಕ್ಷ ರೂ. ನಗದನ್ನು ಕಳ್ಳರು ಕಿಟಕಿಯ ಗಾಜು ಮುರಿದು ಕಳವು ಮಾಡಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕೆಜಿ ಹಳ್ಳಿ ಪೆÇಲೀಸರು ಆರೋಪಿಯ ಪತ್ತೆಗೆ ಶೋಧ ಕಾರ್ಯ ಕೈಗೊಂಡಿದ್ದಾರೆ.