ನವದೆಹಲಿ, ಅ.4- ಪರಿಸರ ಸಂರಕ್ಷಣೆಯು ಅತಿ ದೊಡ್ಡ ಸವಾಲು ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ ಈ ವಿಷಯಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದ್ದಾರೆ.
ಪರಿಸರ ಮತ್ತು ಪರಿಸರ ಸಂರಕ್ಷಣೆ ಕುರಿತ ವಿಷಯಗಳ ಬಗ್ಗೆ ಸಂಶೋಧನೆ ಮತ್ತು ಅನ್ವೇಷಣೆ ನಡೆಯುವುದು ಅತಿ ಮುಖ್ಯ ಎಂದು ಅವರು ಕರೆ ನೀಡಿದ್ದಾರೆ.
ಕೆಲವು ಪ್ರಮುಖ ದಿನಪತ್ರಿಕೆಗಳಲ್ಲಿ ಈ ಕುರಿತು ಮೋದಿ ಅವರು ಬರೆದಿರುವ ಅಂಕಣದಲ್ಲಿ ಪರಿಸರ ಸಂರಕ್ಷಣೆ ಮೇಲೆ ಬೆಳಕು ಚೆಲ್ಲಲಾಗಿದೆ. ಪರಿಸರ ಮತ್ತು ಪರಿಸರ ಸಂರಕ್ಷಣೆ ಕುರಿತ ಚರ್ಚೆ, ಬರವಣಿಗೆ, ಲೇಖನ, ಸಂವಾದ, ಸಮಾಲೋಚನೆ ಮತ್ತು ಚರ್ಚಾಗೋಷ್ಠಿಗಳನ್ನು ಜನರು ಆಯೋಜಿಸಬೇಕು ಎಂದು ಸಲಹೆ ಮಾಡಿದ್ದಾರೆ.
ಪರಿಸರ ವಿಷಯಗಳಿಗೆ ಸಂಬಂಧಿಸಿದಂತೆ ಸಂಶೋಧನೆ ಮತ್ತು ಆವಿಷ್ಕಾರಗಳಿಗೆ ಪೆÇ್ರೀ ನೀಡುವುದರಿಂದ ಹೆಚ್ಚು ಜನರಿಗೆ ಇದರ ಬಗ್ಗೆ ಮಾಹಿತಿ ಲಭಿಸಿ ಈ ಅತಿದೊಡ್ಡ ಸವಾಲನ್ನು ನಿಭಾಯಿಸಲು ಸಹಕಾರಿಯಾಗುತ್ತದೆ ಎಂದರು.