ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಖೇಶ್ ಅಂಬಾನಿ ಸತತ 11 ನೇ ವರ್ಷದಲ್ಲಿ 47.3 ಶತಕೋಟಿ ಡಾಲರ್ ಸಂಪತ್ತಿನೊಂದಿಗೆ ಬಾರತದ ಅತಿ ದೊಡ್ಡ ಶ್ರೀಮಂತನಾಗಿ ಹೊರಹೊಮ್ಮಿದ್ದಾರೆ ಎಂದು ಫೋರ್ಬ್ಸ್ ಪತ್ರಿಕೆ ವರದಿ ಮಾಡಿದೆ.
ರಿಲಯನ್ಸ್ ಜಿಯೋ ಬ್ರಾಡ್ ಬ್ಯಾಂಡ್ ಟೆಲ್ಕೊ ಸೇವೆಯ ನಿರಂತರ ಯಶಸ್ಸಿನ ಮಧ್ಯೆ ಅಂಬಾನಿ ತನ್ನ ಸಂಪತ್ತಿನಲ್ಲಿ 9.3 ಬಿಲಿಯನ್ ಡಾಲರ್ ನಷ್ಟು ಹೆಚ್ಚಿಸಿಕೊಂಡಿದ್ದಾರೆ.
ಫೋರ್ಬ್ಸ್ ಇಂಡಿಯಾ ಶ್ರೀಮಂತರ ಪಟ್ಟಿ 2018ಯಂತೆ ವಿಪ್ರೋ ಅಧ್ಯಕ್ಷ ಅಜೀಮ್ ಪ್ರೇಮ್ ಜೀ ಎರಡನೇ ಸ್ಥಾನದಲ್ಲಿದ್ದು . ಆರ್ಸೆಲರ್ ಮಿತ್ತಲ್ ಅಧ್ಯಕ್ಷ ಮತ್ತು ಸಿಇಒ ಲಕ್ಷ್ಮಿ ಮಿತ್ತಲ್ ಮೂರನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಪ್ರೇಮ್ ಜೀ ಈ ವರ್ಷ ಎರಡು ಬಿಲಿಯನ್ ಆಸ್ತಿ ಸೇರ್ಪಡೆಯೊಂದಿಗೆ ಒಟ್ಟು 21 ಶತಕೋಟಿ ಯುಎಸ್ ಡಾಲರ್ ಮಾಲೀಕರಾಗಿದ್ದಾರೆ. ಇನ್ನು ಮಿತ್ತಲ್ 18.3 ಬಿಲಿಯನ್ ಅಮೆರಿಕನ್ ಡಾಲರ್ ಆಸ್ತಿ ಹೊಂದಿದ್ದಾರೆ.
ಇನ್ನು ಹಿಂದೂಜಾ ಸಹೋದರರು,( 18 ಬಿಲಿಯನ್ ಡಾಲರ್ ) ಪಾಲೊಂಜಿ ಮಿಸ್ತ್ರಿ,(15.7 ಶತಕೋಟಿ ಡಾಲರ್ ) ಕ್ರಮವಾಗಿ ನಾಲ್ಕು ಹಾಗೂ ಐದನೇ ಸ್ಥಾನದಲ್ಲಿದ್ದಾರೆ. ಶಿವ ಸಾಡಾರ್, ಗೋದ್ರೇಜ್ ಕುಟುಂಬ, ದಿಲೀಪ್ ಶಾಂಘವಿ, ಕುಮಾರ್ ಬಿರ್ಲಾ ಮತ್ತು ಗೌತಮ್ ಅದಾನಿ ಟಾಪ್ ಹತ್ತರ ಪತ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.