ಸಂದೀಪ್ ಬಕ್ಷಿ ಐಸಿಐಸಿಐ ಬ್ಯಾಂಕ್ ಹೊಸ ಸಿಇಒ, ಚಂದಾ ಕೊಚ್ಚರ್ ರಾಜೀನಾಮೆ

ನವದೆಹಲಿ: ವಿಡಿಯೋಕಾನ್ ಸಂಸ್ಥೆ ಸಾಲ ಪ್ರಕರಣ ಸಂಬಂಧ ವಿಚಾರಣೆ ಎದುರಿಸುತ್ತಿರುವ ಐಸಿಐಸಿಐ ಬ್ಯಾಂಕ್ ಸಿಇಒ ಚಂದ ಕೊಚ್ಚರ್ ರಾಜಿನಾಮೆ ನೀಡಿದ್ದು ಐಸಿಐಸಿಐನ ನೂತನ ಸಿಇಒ ಆಗಿ ಸಂದೀಪ್ ಬಕ್ಷಿ ಅವರನ್ನು ಆಯ್ಕೆ ಮಾಡಲಾಗಿದೆ.
ಐಸಿಐಸಿಐ ನ ಪ್ರುಡೆನ್ಷಿಯಲ್ ಲೈಫ್ ಇನ್ಶುರೆನ್ಸ್ ನ ಎಂಡಿ ಮತ್ತು ಸಿಇಒ ಆಗಿ ಕೆಲಸ ಮಾಡುತ್ತಿದ್ದ ಸಂದೀಪ್ ಬಕ್ಷಿಯನ್ನು ಈ ಹಿಂದೆ ಇದೀಗ ಬ್ಯಾಂಕ್ ನ ಸಿಒಒ ಆಗಿ ನೇಮಿಸಲಾಗಿತ್ತು. ಇದೀಗ ಅವರನ್ನು ಸಿಇಒ ಆಗಿ ನೇಮಿಸಲಾಗಿದೆ.

ಐಸಿಐಸಿಐ ಬ್ಯಾಂಕ್ ವಿಡಿಯೋಕಾನ್ ಸಮೂಹ ಕಂಪನಿಗೆ 2012ರಲ್ಲಿ 3,250 ಕೋಟಿ ರುಪಾಯಿ ಸಾಲ ನೀಡಿತ್ತು. ಆದರೆ ಸಾಲದ ಶೇ. 80ರಷ್ಟು ಹಣವೂ ಮರು ಪಾವತಿಯಾಗಿಲ್ಲ. ಈ ಸಂಬಂಧ ಚಂದ ಕೊಚ್ಚರ್ ಅವರು ವಿಚಾರಣೆ ಎದುರಿಸುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ