
ಬೆಂಗಳೂರು: ಬಿ.ಎಸ್ ಲಿಂಗದೇವರು ನಿರ್ದೇಶನದ ದಾರಿ ತಪ್ಪಿಸು ದೇವರೇ ಸಿನಿಮಾದಲ್ಲಿ ಶೃತಿ ಹರಿಹರನ್ ಪ್ರಧಾನ ಪಾತ್ರದಲ್ಲಿ ನಟಿಸಲಿದ್ದಾರೆ.
ಈ ಸಂಬಂಧ ಶೃತಿ ಹರಿಹರನ್ ಜೊತೆ ಮಾತನಾಡಿರುವ ಲಿಂಗದೇವರು, ಆಕೆಯ ಅಂಬಿ ನಿಂಗ್ ವಯಸ್ಸಾಯ್ತೋ ರಿಲೀಸ್ ಗಾಗಿ ಕಾಯುತ್ತಿದ್ದಾರೆ,
ಮನ್ಸೋರೆಯ ನಾತಿ ಚರಾಮಿ ಹಾಗೂ ಮಂಜು ಸ್ವರಾಜ್ ನಿರ್ದೇಶನದ ಸಿನಿಮಾಗಳು ಪೂರ್ಣಗೊಂಡ ನಂತರ ತಮ್ಮ ಸಿನಿಮಾದಲ್ಲಿ ನಟಿಸುವುದಾಗಿ ಶೃತಿ ಹೇಳಿದ್ದಾಗಿ ಲಿಂಗದೇವರು ತಿಳಿಸಿದ್ದಾರೆ,
ನವೆಂಬರ್ ನಲ್ಲಿ ಸಿನಿಮಾ ಶೂಟಿಂಗ್ ಆರಂಭವಾಗಲಿದ್ದು, ಅನೂಪ್ ಸಿಳೀನ್ ಸಂಗೀತ ನೀಡಲಿದ್ದಾರೆ.