ಖ್ಯಾತ ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ಮಿ ಟೂ ಆರೋಪ ಮಾಡಿದ ಸ್ಯಾಂಡಲ್ ವುಡ್ ನಟಿ

ಬೆಂಗಳೂರು: ದೇಶಾದ್ಯಂತ ಈಗ #MeToo ಅಭಿಯಾನದ ಬಿರುಗಾಳಿ ಬೀಸಿದ್ದು, ಬಹುಭಾಷಾ ನಟ, ನಿರ್ದೇಶಕ ಅರ್ಜುನ್ ಸರ್ಜಾ ವಿರುದ್ಧ ಸ್ಯಾಂಡಲ್ ವುಡ್ ನಟಿ ಶೃತಿ ಹರಿಹರನ್ ಮಿ ಟೂ ಆರೋಪ ಮಾಡಿದ್ದಾರೆ.

ವಾರಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಶ್ರುತಿ ಹರಿಹರನ್‌, ನಟ ಅರ್ಜುನ್ ಸರ್ಜಾ ವಿರುದ್ಧ ಆರೋಪ ಹೊರಿಸಿದ್ದು, ಅರ್ಜುನ್‌ ಸರ್ಜಾ ಅವರ ಜತೆ ವಿಸ್ಮಯ ಸಿನಿಮಾದಲ್ಲಿ ನಟಿಸುವಾಗ ತನಗಾದ ಕೆಟ್ಟ ಅನುಭವಗಳ ಕುರಿತು ಹೇಳಿಕೊಂಡಿದ್ದಾರೆ. ಸರ್ಜಾ ಅವರ ಜತೆ ನಟಿಸುವಾಗ ಕೆಟ್ಟ ಅನುಭವವಾಗಿತ್ತು. ತಮ್ಮ ಗಡಿರೇಖೆಯನ್ನೂ ದಾಟಿ ನನ್ನ ಜತೆ ವರ್ತಿಸಿದ್ದರು. ತಬ್ಬಿಕೊಳ್ಳುವ ದೃಶ್ಯದ ರಿಹರ್ಸಲ್‌ ವೇಳೆ ಅನ್​​ಕಂಫರ್ಟಬಲ್​ ಆಗುವ ರೀತಿ ವರ್ತಿಸಿದ್ದರು. ಆಗ ನಾನೇ ಒಂದು ಕ್ಷಣ ತಬ್ಬಿಬ್ಬಾಗಿದ್ದೆ ಎಂದು ಹೇಳಿಕೊಂಡಿದ್ದಾರೆ.

ಕನ್ನಡದ ಹಲವಾರು ದೊಡ್ಡ ನಟರ ಜತೆ ನಾನು ನಟಿಸಿದ್ದೇನೆ. ಆದರೆ ಈ ಹಿಂದೆ ಎಂದೂ ನನಗೆ ಇಂಥಾ ಕೆಟ್ಟ ಅನುಭವವಾಗಿರಲಿಲ್ಲ. ಆದರೆ ಅರ್ಜುನ್‌ ಸರ್ಜಾ ಜತೆಗೆ ನಟಿಸುವಾಗ ಅನುಭವಕ್ಕೆ ಬಂತು. ನಾನು ಅವರಿಂದ ಅದನ್ನು ನಿರೀಕ್ಷಿಸಿರಲಿಲ್ಲ ಎಂದು ಶೃತಿ ಆರೋಪಿಸಿದ್ದಾರೆ.

shruti hariharan,accuses,arjun sarja,#MeToo

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ