ಪೈಲಟ್​ ಆಗುವ ಕನಸು… 21ನೇ ವಯಸ್ಸಿಗೆ ಕ್ರಿಕೆಟ್​ಗೆ ವಿದಾಯ ಘೋಷಿಸಿದ ಕ್ರಿಕೆಟರ್​!

ಹಾಂಕಾಂಗ್​ ತಂಡದ ಪರ ಅತಿ ಕಡಿಮೆ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣ ಮಾಡಿದ್ದ  ಕಾರ್ಟರ್​ ಈಗಾಗಲೇ 11 ಏಕದಿನ ಪಂದ್ಯ ಹಾಗೂ 10 ಟಿ20 ಪಂದ್ಯಗಳಲ್ಲಿ ಭಾಗಿಯಾಗಿದ್ದಾರೆ. ಬಾಲ್ಯದಿಂದಲೂ ಪೈಲಟ್​ ಆಗುವ ಕನಸು ಕಂಡಿದ್ದ ಕಾರ್ಟರ್​ ಇದೀಗ ಕ್ರಿಕೆಟ್​ಗೆ ಗುಡ್​ಬೈ ಹೇಳುತ್ತಿರುವುದಾಗಿ ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕ್ರಿಕೆಟರ್​, ನಾನು ಏನು ಆಗಬೇಕು ಎಂದು ನಿರ್ಧರಿಸಲು ಇದು ಸೂಕ್ತ ಸಮಯ ಎಂದಿದ್ದಾರೆ.

11 ಏಕದಿನ ಪಂದ್ಯಗಳಿಂದ ಕಾರ್ಟರ್​114 ರನ್​ಗಳಿಸಿದ್ದು, ಅದರಲ್ಲಿ 43 ಅತಿ ಹೆಚ್ಚಿನ ಸ್ಕೋರ್​ ಆಗಿದೆ. ಇನ್ನು 10 ಟಿ-20 ಪಂದ್ಯಗಳಿಂದ 55ರನ್​​ಗಳಿಸಿದ್ದು, ಇದರಲ್ಲಿ 17 ಅತಿ ಹೆಚ್ಚಿನ ಸ್ಕೋರ್​ ಆಗಿದೆ. ಏಷ್ಯಾಕಪ್​​ನಲ್ಲಿ ಹಾಂಕಾಂಗ್​ ತಂಡದ ಪರ ಎರಡು ಪಂದ್ಯಗಳನ್ನಾಡಿರುವ ಕಾರ್ಟರ್ ಬ್ಯಾಟಿಂಗ್​ ವೈಫಲ್ಯ ಅನುಭವಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ