
ಹಾಂಕಾಂಗ್ ತಂಡದ ಪರ ಅತಿ ಕಡಿಮೆ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣ ಮಾಡಿದ್ದ ಕಾರ್ಟರ್ ಈಗಾಗಲೇ 11 ಏಕದಿನ ಪಂದ್ಯ ಹಾಗೂ 10 ಟಿ20 ಪಂದ್ಯಗಳಲ್ಲಿ ಭಾಗಿಯಾಗಿದ್ದಾರೆ. ಬಾಲ್ಯದಿಂದಲೂ ಪೈಲಟ್ ಆಗುವ ಕನಸು ಕಂಡಿದ್ದ ಕಾರ್ಟರ್ ಇದೀಗ ಕ್ರಿಕೆಟ್ಗೆ ಗುಡ್ಬೈ ಹೇಳುತ್ತಿರುವುದಾಗಿ ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕ್ರಿಕೆಟರ್, ನಾನು ಏನು ಆಗಬೇಕು ಎಂದು ನಿರ್ಧರಿಸಲು ಇದು ಸೂಕ್ತ ಸಮಯ ಎಂದಿದ್ದಾರೆ.
11 ಏಕದಿನ ಪಂದ್ಯಗಳಿಂದ ಕಾರ್ಟರ್114 ರನ್ಗಳಿಸಿದ್ದು, ಅದರಲ್ಲಿ 43 ಅತಿ ಹೆಚ್ಚಿನ ಸ್ಕೋರ್ ಆಗಿದೆ. ಇನ್ನು 10 ಟಿ-20 ಪಂದ್ಯಗಳಿಂದ 55ರನ್ಗಳಿಸಿದ್ದು, ಇದರಲ್ಲಿ 17 ಅತಿ ಹೆಚ್ಚಿನ ಸ್ಕೋರ್ ಆಗಿದೆ. ಏಷ್ಯಾಕಪ್ನಲ್ಲಿ ಹಾಂಕಾಂಗ್ ತಂಡದ ಪರ ಎರಡು ಪಂದ್ಯಗಳನ್ನಾಡಿರುವ ಕಾರ್ಟರ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು.