ಬೆಂಗಳೂರು: ಜಗತ್ತಿನ ಮಹಾನ್ ನಾಯಕ, ಬೌದ್ಧ ಧರ್ಮದ ಗುರು ದಲೈಲಾಮಾ ಹತ್ಯೆಗೆ ಉಗ್ರರು ಸಂಚು ರೂಪಿಸಿದ್ದರು ಎನ್ನಲಾಗಿದೆ. ಜೆಎಂಬಿ ಎಂಬ ಸಂಘಟನೆಯ ಉಗ್ರರು ಬೆಂಗಳೂರಿನಲ್ಲಿಯೇ ಸ್ಕೆಚ್ ಹಾಕಿದ್ದರು ಎಂಬ ಭಯಾನಕ ಮಾಹಿತಿ ಭೋದ್ ಗಯಾ ಸ್ಫೋಟದ ಆರೋಪಿಗಳಿಂದ ಹೊರ ಬಿದ್ದಿದೆ.
ಭೋಧಗಯಾ ಸ್ಪೋಟದ ಪ್ರಕರಣವೊಂದರಲ್ಲಿ ಪ್ರಮುಖ ಆರೋಪಿಯೋರ್ವನನ್ನು ರಾಮನಗರದಲ್ಲಿ ಬಂಧಿಸಲಾಗಿತ್ತು. ಜಹಿದ್ದೀಲ್ ಇಸ್ಲಾಂ ಅಲಿಯಾಸ್ ಮುನೀರ್ ಎಂಬಾತ ಪ್ರಮುಖ ಆರೋಪಿ. ಪೊಲೀಸರ ವಿಚಾರಣೆ ವೇಳೆ ಜಗತ್ ಗುರು ದಲೈಲಾಮಾರನ್ನು ಬಾಂಬ್ ಸ್ಪೋಟಿಸಿ ಹತ್ಯೆ ಮಾಡಲು ಸಂಚು ರೂಪಿಸಿದ್ದೆವು ಎಂದು ಬಾಯಿಬಿಟ್ಟಿದ್ದಾರೆ.
ನಾವು 2018 ರ ಆರಂಭದಲ್ಲಿಯೇ ಬಾಂಬ್ ಸ್ಪೋಟಕ್ಕೆ ಸಂಚು ರೂಪಿಸಿದ್ದೆವು. ಬೌದ್ಧ ಧರ್ಮಗುರು ದಲೈಲಾಮ ಅವರು ರೋಹಿಂಗ್ಯಾ ಮುಸ್ಮಿಮರನ್ನು ವಿರೋಧಿಸುತ್ತಿದ್ದರು. ಹಾಗಾಗಿ ದಲೈಲಾಮ ಅವರನ್ನು ಹತ್ಯೆಗೆ ಸ್ಕೆಚ್ ಹಾಕಿದ್ದೆವು ಎಂದು ಬಂಧಿತ ಮುನೀರ್ ಜಮಾತ್ ಮುಜಾಹೀದ್ದೀನ್ ತಿಳಿಸಿದ್ದಾರೆ.
ಮುನೀರ್ ಜಮಾತ್ ಮುಜಾಹೀದ್ದೀನ್ ಮೂಲತ ಬಾಂಗ್ಲಾದೇಶದ ಉಗ್ರ ಸಂಘಟನೆಯೊಂದರಲ್ಲಿ ತೊಡಗಿಸಿಕೊಂಡಿದ್ಧ. ಬಂಧನಕ್ಕೂ ಮುನ್ನ ನಾಲ್ಕು ವರ್ಷಗಳಕಾಲ ಬೆಂಗಳೂರಿನಲ್ಲಿಯೇ ನೆಲೆಸಿದ್ದ. ಈ ಸಂದರ್ಭದಲ್ಲಿಯೇ ದಲೈಲಾಮಾ ಅವರನ್ನು ಮುಗಿಸಲು ಸ್ಕೆಚ್ ರೆಡಿ ಮಾಡಿದ್ದರು. ಈ ವಿಚಾರ ಬೋದ್ ಗಯಾ ಪ್ರಕರಣ ಸಂಬಂಧಿತ ವಿಚಾರಣೆ ವೇಳೆ ಪೊಲೀಸರಿಗೆ ಸಿಕ್ಕಿದೆ.
ಈಗಾಗಲೇ ಬಾಂಬ್ ಸ್ಫೋಟದ ಬಗ್ಗೆ ಎನ್ಐಎ ಚಾರ್ಜ್ ಶೀಟ್ ಸಲ್ಲಿಸಿದೆ. ಈ ಕುರಿತು ಕರ್ನಾಟಕ ಪೊಲೀಸರಿಗೂ ಎನ್ಐಎ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಾಮನಗರದಲ್ಲಿ ಬಂಧಿತರಾಗಿದ್ದ ಉಗ್ರರ ಮುನೀರ್ ಶೇಖ್ ವಿಚಾರಣೆಯಲ್ಲಿ ದಲೈಲಾಮಾ ಹತ್ಯೆಗೆ ಸ್ಕೆಚ್ ಹಾಕಿದ್ದ ಸ್ಪೋಟಕ ಮಾಹಿತಿ ಸಿಕ್ಕಿದೆ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದ್ದಾರೆ.